ಡಾ.ರಾಜ್ಕುಮಾರ್ ಪಾತ್ರಕ್ಕೆಜೀವತುಂಬುತ್ತಿದ್ದರು–ಎಸ್.ಎ.ಚಿನ್ನೆಗೌಡ
ನೂರಐವತ್ತು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಗೌರಿಶ್ರೀ ಹೊಸ ಪ್ರಯತ್ನಎನ್ನುವಂತೆ ‘ಜನರಕ್ಷಕ’ ಚಿತ್ರಕ್ಕೆ ನಿರ್ಮಾಣ, ನಿರ್ದೇಶನಜೊತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಡಿಬರಹದಲ್ಲಿ ‘ನಾ ಭಕ್ಷಕ’ ಎಂದು ಹೇಳಿಕೊಂಡಿದೆ.ಸಿನಿಮಾದ ಪೋಸ್ಟರ್‌ನ್ನು ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕಎಸ್.ಎ.ಚಿನ್ನೆಗೌಡ ಮಾತನಾಡಿಡಾ.ರಾಜ್‌ಕುಮಾರ್ ಹೆಸರು ಮೊದಲು ಮುತ್ತುರಾಜ್‌ಎಂಬುದಾಗಿಇತ್ತು. ‘ಬೇಡರಕಣ್ಣಪ್ಪ’ ನಿರ್ದೇಶಕ ಹೆಚ್.ಎಲ್.ಎನ್.ಸಿಂಹ ರವರು ಹಿಂದಿಯಲ್ಲಿ ಆ ಕಾಲಕ್ಕೆ ಖ್ಯಾತರಾಗಿದ್ದರಾಜ್‌ಕಪೂರ್ ಮತ್ತು ದಿಲೀಪ್‌ಕುಮಾರ್‌ಇವರಿಬ್ಬರಿಂದಎರಡು ಹೆಸರನ್ನು ಬಳಸಿಕೊಂಡು ‘ರಾಜ್‌ಕುಮಾರ್’ ಎಂದು ನಾಮಕಾರಣ ಮಾಡಿದರು. ಅಕ್ಕ ಪಾರ್ವತಮ್ಮರಾಜ್‌ಕುಮಾರ್‌ಒಬ್ಬ ಮಹಿಳೆಯಾಗಿ ೮೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದುಎಂಬುದಕ್ಕೆ ಸಾಕ್ಷಿಇವರುಆಗಿರುತ್ತಾರೆ. ಅದೇರೀತಿ ಗೌರಿಶ್ರೀ ಹೆಣ್ಣುಮಗಳಾಗಿ ಸಾಧನೆ ಮಾಡಿದ್ದಾರೆ.ಅವರಿಗೆಯಶಸ್ಸು ಸಿಗಲೆಂದು ಹೇಳುತ್ತಾ, ಪುನೀತ್‌ರಾಜ್‌ಕುಮಾರ್ ಸೇವೆಯನ್ನು ನೆನಪಿಸಿಕೊಂಡರು.
ನಟನೆಯಲ್ಲಿಅನುಭವಇರುವಕಾರಣ ವಿ೨ ಡ್ಯಾನ್ಸ್ ಶಾಲೆಯನ್ನು ಪ್ರಾರಂಭ ಮಾಡಿದೆ.
ಒಂದು ಹಂತದಲ್ಲಿ ನಷ್ಟ ಅನುಭವಿಸಿದಾಗ, ಪುನೀತ್‌ರಾಜ್‌ಕುಮಾರ್ ೩೦೦೦೦ ಸಹಾಯ ಮಾಡಿದ್ದರು.ಈಗ ಶಾಲೆಯಲ್ಲಿ ೩೮೦ ಮಕ್ಕಳು ತರಭೇತಿ ಪಡೆಯುತ್ತಿದ್ದಾರೆ.ಟಿವಿದಲ್ಲಿಡಾ.ವಿಷ್ಣುವರ್ಧನ್ ಸಿನಿಮಾ ನೋಡುತ್ತಿರುವಾಗ, ಇವರುಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತುಅಂದುಕೊಂಡು ನಾಲ್ಕು ಸಾಲು ಬರೆದುಕೊಂಡೆ.ಒಮ್ಮೆಕಾರ್ಯಕ್ರಮಕ್ಕೆ ಹೋದಾಗಡಾ.ವಿಷ್ಣುವರ್ಧನ್‌ರಂತೆಒಬ್ಬರನ್ನು ನೋಡಿದೆ.ಇವರನ್ನು ಹಾಕಿಕೊಂಡುಯಾಕೆಚಿತ್ರ ಮಾಡಬಾರದುಅಂದುಕೊಂಡುಅವರ ಮೇಲೆ ಕಥೆಬರೆದು ಮುಗಿಸಿದೆ.ಮುಂದೆಅವರು ನಟಿಸಲುಒಪ್ಪಿಕೊಂಡರು. ಪಿ.ಕೆ.ಹೆಚ್.ದಾಸ್‌ಛಾಯಾಗ್ರಹಣ ಪ್ಲಸ್ ಪಾಯಿಂಟ್‌ಆಯಿತು. ಕಥೆಯಲ್ಲಿಜವಬ್ದಾರಿಯನ್ನು ಮರೆತರೆ, ಹಾಗೆಯೇ ಸಮಾಜಕ್ಕೆಯಾವರೀತಿ ಒಳ್ಳೆಯರಾಗಬೇಕು ಎನ್ನುವುದಕ್ಕೆಇಬ್ಬರು ಮಕ್ಕಳು ಇರುತ್ತಾರೆ.ಅವರಿಬ್ಬರುಕುಟುಂಬದಗೌರವವನ್ನುಹೇಗೆ ಕಾಪಾಡಿಕೊಂಡು ಹೋಗುತ್ತಾರೆಎಂಬುದನ್ನುತೋರಿಸಲಾಗಿದೆ.ಮಾದ್ಯಮದ ಸಹಕಾರ ಬೇಕೆಂದುಕೋರಿದರು.
ಗೌರಿಶ್ರೀ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ.ಡ್ಯಾನ್ಸ್ ಶಾಲೆ ನಡೆಸುತ್ತಾಅದರಲ್ಲಿ ಗಳಿಸಿದ ಹಣದಲ್ಲಿಇಂತಹ ಸಾಧನೆ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರುಕರಿಸುಬ್ಬು.
ಸಿನಿಮಾಅಂದರೆಚಿಕ್ಕದುದೊಡ್ಡದುಅಂತಇರೋಲ್ಲ. ಮೇಡಂರವರುಎರಡುಹಾಡುಗಳಿಗೆ ನೃತ್ಯ ಸಂಯೋಜಿಕಿಆಗಿದ್ದಾರೆ.ಈ ಚಿತ್ರಗೆದ್ದರೆ ಮತ್ತೋಂದು ಸಿನಿಮಾ ಮಾಡುತ್ತಾರೆ.ಆಗ ನೂರಾರು ಮಂದಿಗೆ ಕೆಲಸ ಸಿಗುತ್ತದೆ ಎಂಬುದುಕೋರಿಯೋಗ್ರಾಫರ್ ಫೈವ್ ಸ್ಟಾರ್‌ಗಣೇಶ್ ಮಾತಾಗಿತ್ತು.
ಕಾರ್ಯಕ್ರಮದಲ್ಲಿಕಲಾವಿದರುಗಳಾದರಾಘವೇಂದ್ರ,ಸೋಮಸುಂದರ್, ಪ್ರಿಯಾ, ನಟರಾಜ್,ತ್ರಿಶೂಲ್, ರತ್ನಮಾಲ, ಭಾಗ್ಯಶ್ರೀ, ಶಿವಕುಮಾರ್‌ಆರಾಧ್ಯ ಮುಂತಾದವರು ಹಾಜರಿದ್ದರು. ಸಂಗೀತದೇವದಾಸ್, ಸಂಕಲನ ಬಾಲಾಜಿಡಿಜಿಟಲ್ ಸ್ಟುಡಿಯೋ, ಸಾಹಸ ಸುಪ್ರೀಂಸುಬ್ಬುಅವರದಾಗಿದೆ.