Sthabdha.Film Pooja.News

Monday, January 24, 2022

354

 

*ವಿಭಿನ್ನ ಕಥಾಹಂದರದ "ಸ್ಥಬ್ಧ" ಚಿತ್ರಕ್ಕೆ ಚಾಲನೆ.*

 

 *ಪ್ರಮುಖಪಾತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ , ಪ್ರತಾಪ್ ಸಿಂಹ - ಹರ್ಷಿಕಾ ಪೂಣಚ್ಛ.*

 

ರಾಘವೇಂದ್ರ ರಾಜಕುಮಾರ್  ಅಭಿನಯದ "ಸ್ತಬ್ಧ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು.

 

ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗಾರೆಡ್ಡಿ ಆರಂಭಫಲಕ ತೋರಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ||ಸಿ.ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು.

 

ವೈದ್ಯರಾಗಿರುವ ಡಾ||ಡಿ.ವಿ.ವಿದ್ಯಾಸಾಗರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಲಾಲಿರಾಘವ ನಿರ್ದೇಶಿಸುತ್ತಿದ್ದಾರೆ.

 

ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿರುವ ನನಗೆ ಇದು ಎರಡನೇ ಚಿತ್ರ.

ಈ ಚಿತ್ರವು,, ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಪಯಣಿಸಿದಾಗ,

ಆಗುವಂತಹ ಪರಿಣಾಮಗಳನ್ನು ಮತ್ತು ಅದರಿಂದ ಹೊರಬರಲು ನಾಯಕ ನಡೆಸುವ ಹೋರಾಟವನ್ನು ಪ್ರತಿಬಿಂಬಿಸುತ್ತದೆ.

 

ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ ಅವರೊಂದಿಗೆ, ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ: ಚಿನ್ಮಯ್ ಮತ್ತು ಪ್ರಿಯಾಂಕಾರ  ದೊಡ್ಡ ತಾರಾಬಳಗವೇ ಇದೆ....

ತಾಂತ್ರಿಕ ವಿಭಾಗದಲ್ಲಿ ರಾಜತಂತ್ರ ಚಿತ್ರದ ನಿರ್ದೇಶನ ಮತ್ತು 36 ಕ್ಕೂ ಹೆಚ್ಚಿನ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಕ್ರಿಯಾಶೀಲ ತಂತ್ರಜ್ಞ ಪಿ. ವಿ. ಆರ್ ಸ್ವಾಮಿ ಛಾಯಾಗ್ರಹಣ, ಹಂಸಲೇಖ ಅವರ ಸಾಹಿತ್ಯ,  ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ  ಎಂದರು ನಿರ್ದೇಶಕ ಲಾಲಿ ರಾಘವ್.

 

ಈ ಚಿತ್ರದಲ್ಲಿ ಕಥೆಯೇ ಒಂದು ಪಾತ್ರ . ನಾವೆಲ್ಲ ಚಿಕ್ಕ ಚಿಕ್ಕ ಪಾತ್ರ ಮಾಡಿದ್ದೀವಿ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಅಷ್ಟು ಹೇಳುವ ಹಾಗಿಲ್ಲ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ರಾಘವೇಂದ್ರ ರಾಜಕುಮಾರ್.

ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು.‌ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ "ಜಾಕಿ" ಚಿತ್ರದಲ್ಲಿ ನೀವು ನಟಿಸಬೇಕೆಂದರು.  ಆಗ ನನ್ನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ|ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ ಎನ್ನುತ್ತಾರೆ ಹರ್ಷಿಕ  ಪೂಣಚ್ಛ.

 

ನಾನು ಈಗಾಗಲೇ ರಾಘಣ್ಣ ಅವರೊಂದಿಗೆ "ರಾಜತಂತ್ರ", " ರಾಜಿ" ಚಿತ್ರಗಳಲ್ಲಿ ನಟಿಸಿದ್ದೇನೆ. ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವ. ಉತ್ತಮ ಕಥೆಯುಳ್ಳ ಚಿತ್ರ ನಮ್ಮೆಲ್ಲರ ಬೆಂಬಲ ವಿರಲಿ ಎನ್ನುತ್ತಾರೆ ನಟ ಪ್ರತಾಪ್ ಸಿಂಹ.

 

ನಾನು ನಿರ್ದೇಶಕ ಲಾಲಿ ರಾಘವ್ ನನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ. ಅವರ ಅಣ್ಣ ನನ್ನ ಸಹೋದ್ಯೋಗಿ. ಆತ ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ ಎಂದು ಡಾ||ಡಿ‌.ವಿ.ವಿದ್ಯಾಸಾಗರ್ ತಿಳಿಸಿದರು.

 

ಪ್ರಶಾಂತ್ ಸಿದ್ದಿ, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಹಾಗೂ ಸಂಗೀತ ನಿರ್ದೇಶಕ ಆರವ್ ರಿಷಿಕ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

 

ಶಾಸಕಿ ಸೌಮ್ಯ ರೆಡ್ಡಿ, ಮಮತಾ ದೇವರಾಜ್, ಪಾನಿ ಪುರಿ ಕಿಟ್ಟಿ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Copyright@2018 Chitralahari | All Rights Reserved. Photo Journalist K.S. Mokshendra,