ಮಕ್ಕಳ ಶಿಕ್ಷಣಕ್ಕೆ ಭಾರತಿ ವಿಷ್ಣುವರ್ಧನ್ ಕೊಡುಗೆ
ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ಇನ್ನೂ ಸುಲಭವಾಗಿಸಿದೆ. ಅರ್ಜುನ್ ಸಾಮ್ರಾಟ್ ಅವರು ತಮ್ಮ ವಿಸ್ತಾ’ಸ್ ಲರ್ನಿಂಗ್ ಆಪ್ ಮೂಲಕ ಮಕ್ಕಳಿಗೆ ಸುಲಭ ದಾರಿಯಲ್ಲಿ ವಿದ್ಯೆ ಕಲಿಸಿಕೊಡಲು ಮುಂದಾಗಿದ್ದಾರೆ. ಇದರ ರಾಯಭಾರಿಯಾಗುವ ಮೂಲಕ ಒಂದು ಭಾಗವಾಗಿ ಹಿರಿಯ ಕಲಾವಿದೆ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಕೈಜೋಡಿಸಿದ್ದಾರೆ.
ನನ್ನನ್ನು ಮೊದಲನೆಯದಾಗಿ ಆಕರ್ಷಿಸಿದ್ದು ವಿ ಎನ್ನುವ ಪದ. ಅದರಲ್ಲಿ ತುಂಬಾ ಅರ್ಥಗಳಿವೆ. ವಿಷ್ಣುವರ್ಧನ್ ಅವರಿಗೆ ಎಜುಕೇಷನ್ ಬಗ್ಗೆ ತುಂಬಾ ಕಾಳಜಿಯಿತ್ತು. ತುಂಬಾ ಜನರಿಗೆ ಫೀಸ್ ಕಟ್ಟಲು ಸಹಾಯ ಮಾಡಿದ್ದರು. ನಾನು ಕೂಡ ಡಿಗ್ರಿ ಮಾಡಬೇಕು ಎಂದುಕೊಂಡಿದ್ದೆ, ಆಗಿರಲಿಲ್ಲ. ಮದ್ಯಮವರ್ಗದ ಜನರಿಗೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿರುತ್ತದೆ. ದುಬಾರಿ ಶಿಕ್ಷಣದ ಕಾರಣದಿಂದ ಸಾಧ್ಯವಾಗಿರುವುದಿಲ್ಲ, ಅದನ್ನು ಅರ್ಜುನ್ ಅವರು ಸುಲಭ ಮಾಡಿಕೊಡಲು ಹೊರಟಿದ್ದಾರೆ. ಈ ಆಪ್ ಬಗ್ಗೆ ನನ್ನಲ್ಲೂ ನೂರಾರು ಪ್ರಶ್ನೆಗಳಿದ್ದವು. ಅದಕ್ಕೆಲ್ಲ ಇವರು ಉತ್ತರಿಸಿದ್ದಾರೆ. ನಮ್ಮಿಂದ ಒಂದಷ್ಟು ಜನರಿಗೆ ಪ್ರೇರಣೆಯಾಗುತ್ತೆ ಎಂದರೆ ಆ ಸಂತೋಷವೇ ಬೇರೆ. ಇದರಿಂದ ಎಲ್ಲರಿಗೂ ಅನುಕೂಲ ಆಗಲಿ ಅನ್ನುವುದೇ ನನ್ನಾಸೆ, ಅದಕ್ಕಾಗೇ ನಾನಿಲ್ಲಿದ್ದೇನೆ ಎಂದು ವಿಸ್ತಾ’ಸ್ ಲರ್ನಿಂಗ್ ಆಪ್ ಲೋಗೋ ಅನಾವರಣಗೊಳಿಸಿದ ಭಾರತಿ ವಿಷ್ಣುವರ್ಧನ್ ಮಾತನಾಡಿದರು.
ಚಿಕ್ಕಮಗಳೂರು ಮೂಲದ ಅರ್ಜುನ್ ಸಾಮ್ರಾಟ್ ಅವರು ಕೇವಲ 999ಕ್ಕೆ ಅಂದರೆ ತಿಂಗಳಿಗೆ 83 ರೂಗಳಿಗೆ ಕೈಗೆಟುಕುವಂತೆ ವಿಸ್ತಾ’ಸ್ ಲರ್ನಿಂಗ್ ಆಪನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಮುಂದಾಗಿದ್ದಾರೆ. ಈಗಾಗೆಲೆ 800 ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ..
1ರಿಂದ 12ನೇ ತರಗತಿವರೆಗೆ ಅನಿಮೇಷನ್ ವೀಡಿಯೋ ಸಹಿತ ಕನ್ನಡ, ತಮಿಳು ಹಾಗೂ ಮಲಯಾಳಂ ಸೇರಿ ದಕ್ಷಿಣ ಭಾರತದ ಪ್ರಮುಖ ಬಾಷೆಗಳಲ್ಲಿ ಈ ಆಪ್ ಲಭ್ಯವಿದೆ. ಕಾರ್ಯಕ್ರಮದಲ್ಲಿ ಸಿ.ಎಸ್.ಅರವಿಂದ್, ಅಶೋಕ್ ಜೈನ್, ಭಾರ್ಗವಿ ಗೋಪಿನಾಥ್ ಹಾಜರಿದ್ದರು.
Webapp: www.V-learning.in
Toll-free No: 18004193629