Laali Laali Malagu Rajakumar.Video Song.

Tuesday, February 01, 2022

327

 

ಲಾಲಿ ಲಾಲಿ ಮಲಗು ರಾಜಕುಮಾರ… ಅಪ್ಪುಗೆ ಗೀತ ನಮನ ಸಲ್ಲಿಸಿದ ಟಿವಿ ವಿಕ್ರಮ ತಂಡ

 

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಟಿವಿ ವಿಕ್ರಮ ತಂಡದಿಂದ ಇಂದು ಗೀತ ನಮನ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ನಲ್ಲಿ ನಡೆದ ಈ ಗೀತ ನಮನ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಸದಾಶಿವ ಶೆಣೈ, ಮಹೇಂದ್ರ ವಿಕ್ರಮ್ ಹೆಗ್ಡೆ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಲಾಲಿ ಲಾಲಿ ಮಲಗು ಹಾಡು ಬಿಡುಗಡೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪು ಏಳು ವರ್ಷದ ಮಗುವಿದ್ದಾಗಲೇ ಹಾಡಲು ಶುರು ಮಾಡಿದರು, ಚಿಕ್ಕ ಹುಡ್ಗ ಇದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು. ಹಿಟ್ಸ್ ಕೊಟ್ಟರು, ರಿಯಾಲಿಟಿ ಶೋ ಮಾಡಿದರು. ನನಗೆ ಮೈಂಡ್ ಬ್ಲಾಕ್ ಆಗಿದೆ. ಕುಂತು ನಿಂತ್ರು ಅಪ್ಪುನೇ ನೆನಪು ಆಗ್ತಾನೆ. ಈ ರೀತಿ ಹಾಡು ಕೇಳಿದರೆ ಅದರಿಂದ ಒಂದು ವಾರ ಹೊರಗಡೆ ಬರಲು ಆಗುವುದಿಲ್ಲ. ಅಷ್ಟು ಡೀಪ್ ಆಗಿ ಒಳಗಡೆ ಹೋಗುತ್ತೇವೆ ಎಂದು ಭಾವುಕರಾದರು.

 

ಚಿರನಿದ್ರೆಗೆ ಜಾರಿರುವ ಅಪ್ಪುವಿಗೆ ’ಲಾಲಿ ಲಾಲಿ ಮಲಗು ರಾಜಕುಮಾರ’ ಹಾಡಿನ ಮೂಲಕ ನಮನ ಸಲ್ಲಿಸಲಾಯಿತು. ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದು, ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ತುಂಬಾ ಅರ್ಥಪೂರ್ಣ ಸಾಲುಗಳು ಪ್ರತಿಯೊಬ್ಬರ ಕಣ್ಚಂಚಲಿ ನೀರು ತರಿಸುತ್ತವೆ.

Copyright@2018 Chitralahari | All Rights Reserved. Photo Journalist K.S. Mokshendra,