ಸಲಗ ಸಂಭ್ರಮದಲ್ಲಿ ಸ್ಟಾರ್ಸ್ಗಳು
ಶುಕ್ರವಾರ ಸಂಜೆ ‘ಸಲಗ’ಚಿತ್ರದಯಶಸ್ಸಿನ ಕೂಟ ನಡೆಯಿತು.ಮುಖ್ಯಅತಿಥಿಯಾಗಿ ಶಿವರಾಜ್‌ಕುಮಾರ್ ಆಗಮಿಸಿದ್ದರು.ನಂತರ ಮಾತನಾಡುತ್ತಾ ನಮ್ಮಲ್ಲಿದೊಡ್ಡ ಚಿತ್ರಗಳಲ್ಲಿ ಪರಭಾಷೆಯ ನಟಿಯರನ್ನುಕರೆದುಕೊಂಡು ಬರುತ್ತಿದ್ದಾರೆ.ನಮ್ಮಲ್ಲೇ ಪ್ರತಿಭೆಇರುವಕಲಾವಿದೆಯರುಇದ್ದಾಗ, ಹೊರಗಡೆಯಿಂದತರುವಅವಶ್ಯಕತೆಇಲ್ಲವೆಂದು ಕಿವಿ ಮಾತು ಹೇಳಿದರು.ನಂತರ ಮಾತು ಮುಂದುವರೆಸುತ್ತಾ ನಾವು ಒಟ್ಟಿಗೆಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ಯಾವಾಗಲೂ ಸಕರಾತ್ಮಕವಾಗಿ ಯೋಚಿಸಿದರೆ ಒಳ್ಳಯದೆ ಆಗುತ್ತದೆ.ವಿಜಿರವರ ‘ದುನಿಯಾ’ ಮಹೂರ್ತಕ್ಕೂ ಬಂದಿದ್ದೆ.ಈಗಲೂ ಜೊತೆಇರ್ತಿನಿ. ನಮ್ಮ ನಟಿ ಸಂಜನಾಚೆನ್ನಾಗಿ ನಟಿಸಿದ್ದಾರೆ. ‘ಸಲಗ’ ಪ್ರೀರಿಲೀಸ್‌ಇವೆಂಟ್‌ದಲ್ಲಿ ನಾನು, ಅಪ್ಪುಕಾರ್ಯಕ್ರಮದಲ್ಲಿದ್ದೇವು.ಅದರಲ್ಲಿ ಹಲವು ನೆನಪುಗಳಿವೆ. ಈಗಿಲ್ಲಅಂತಅಂದ್ರುಕೊಂಡರೆತುಂಬಾ ಕಷ್ಟ ಆಗುತ್ತೆ.ಆದರೆ ಅವನು ಇಲ್ಲೇಇದ್ದಾನೆ. ಆತನ ಹಾರೈಕೆಇದ್ದೇಇರುತ್ತೆ.ಅವನು ಇಲ್ಲ ಅಂದುಕೊಳ್ಳದಕ್ಕೆ ಆಗುವುದಿಲ್ಲ. ಅಪ್ಪುಇಲ್ಲೆಇದ್ದಾನೆಂದು ಭಾವುಕರಾದರು ಶಿವಣ್ಣ.
ಅಮ್ಮ ತೀರಿಕೊಳ್ಳುವ ಮೊದಲು, ಮನೆಯಲ್ಲಿ ಶಿವಲಿಂಗ ಇದೆ.ಅದಕ್ಕೆ ಪೂಜೆ ಮಾಡುತ್ತಿರು.ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು.ಅದರಂತೆ ಒಳ್ಳಯದೇ ಆಯ್ತು.ಮತ್ತೆ ಕೆಲಸಕ್ಕೆ ಹೋಗುವಂತೆಆಯಿತು. ಈ ಸಕ್ಸಸ್‌ನ್ನುತಂದೆ,ತಾಯಿ ಮತ್ತುಅಪ್ಪುಗೆಅರ್ಪಿಸುತ್ತೇನೆ. ಎರಡು ವರ್ಷದಿಂದಕಷ್ಟದಿಂದಇದ್ದೆ. ಯಾರೊಂದಿಗೂ ಮಾತನಾಡಿರಲಿಲ್ಲ. ಈಗ ಮಾತನಾಡುತ್ತೇನೆ. ‘ಸಲಗ’ ನಿರ್ಮಾಣ ಮಾಡುವಂತೆ ಕೆ.ಪಿ.ಶ್ರೀಕಾಂತ್ ಅವರನ್ನು ಹುಡುಕಿಕೊಂಡು ಹೋದಾಗ ನನ್ನಜೇಬಲಿ ೪೦ ರೂಇತ್ತು.ಆ ೪೦ ರೂಪಾಯಿ ಫೋಟೋತೆಗೆದುಕೊಂಡುಇಟ್ಟಿದ್ದೇನೆ. ಅವರು ನನಗೆ ಪುನರ್ಜನ್ಮಕೊಟ್ಟಂತ ವ್ಯಕ್ತಿ.ನಿಮ್ಮ ಸಂಸ್ಥೆಗೆ ಯಾವಾಗ ಕೆಲಸ ಮಾಡಬೇಕು ಹೇಳಿ ಬಂದು ಕೆಲಸ ಮಾಡುತ್ತೇನೆ. ಮುಳುಗುತ್ತಿದ್ದ ನನ್ನನ್ನುಕಾಪಾಡಿದವರು ನೀವು ಎಂದು ಶ್ರೀಕಾಂತ್‌ರನ್ನು ಸ್ಮರಿಸಿದರು ದುನಿಯಾವಿಜಯ್.
ಸಂತೋಷ ಸಂಭ್ರಮದಲ್ಲಿಗೋಲ್ಡನ್ ಸ್ಟಾರ್‌ಗಣೇಶ್, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ ಮುಂತಾದವರು ಹಾಜರಿದ್ದುಖುಷಿಯ ಮಾತುಗಳನ್ನು ಆಡಿದರು.ನಾಯಕಿ ಸಂಜನಾಆನಂದ್, ಡಾಲಿಧನಂಜಯ್, ಕಾಕ್ರೋಚ್‌ಸುಧಿ, ಸಂಗೀತ ನಿರ್ದೇಶಕಚರಣ್‌ರಾಜ್ ಸೇರಿದಂತೆ ಹಲವರು ಸ್ಮರಣ ಫಲಕಗಳನ್ನು ಅತಿಥಿಗಳಿಂದ ಸ್ವೀಕರಿಸಿದರು.