Beera.Film Press Meet

Wednesday, December 08, 2021

407

ಸೆನ್ಸಾರ್ ಅಂಗಳದಲ್ಲಿ ಬೀರ

ಕೌಟಂಬಿಕ, ಆಕ್ಷನ್‌ಹಿನ್ನಲೆಯ ‘ಬೀರ’ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡಿದೆ.ಪ್ರಚಾರದ ಸಲುವಾಗಿ ಮಾಹಿತಿ ನೀಡಲುತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.ಅತಿಥಿಯಾಗಿ ಆಗಮಿಸಿದ್ದ ಕರಿಸುಬ್ಬು ಮಾತನಾಡಿಕರೋನಅಲೆಯಿಂದಚಿತ್ರರಂಗ ನಲುಗಿದೆ.ಮಹಿಳೆಯಾಗಿ ನಿರ್ಮಾಣ ಮಾಡಿರುವುದು ಸಾಧನೆಎನ್ನಬಹುದು.ಪ್ರಚಾರಕ್ಕೆಅಂತ ಬಂದಾಗ ನಾಯಕಿಯರು ಏನೇ ಕೆಲಸ ಇದ್ದರೂ ಬಿಟ್ಟು ಬರಬೇಕೆಂದುಗೈರು ಹಾಜರಾದ ಶುಭಪೂಂಜ ಮತ್ತುರೂಪಿಕಾಅವರಿಗೆ ಕಿವಿಮಾತುಹೇಳಿದರು.ಒಬ್ಬ ಮಹಿಳೆಯಾಗಿ ಚಿತ್ರರಂಗಕ್ಕೆ ಬರುವುದು ಎಷ್ಟು ಕಷ್ಟ ಇದೆಅಂತ ತಿಳಿದಿದೆ.ನನ್ನಂತಹ ೧೦ ಮಹಿಳೆಯರು ಮುಂದೆ ಬರಬೇಕುಎಂಬುದು ಬಯಕೆಯಾಗಿದೆ.ಅದಕ್ಕಾಗಿ ಶ್ರೀಮತಿ ಪ್ರೊಡಕ್ಷನ್ ಸಂಸ್ಥೆ ಹುಟ್ಟುಹಾಕಿಅದರ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತೇನೆಂದು ನಿರ್ಮಾಪಕಿ ಭಾರ್ಗವಿ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಮಾದ್ಯಮದ ಸಹಕಾರದಿಂದತಮಿಳಿನಲ್ಲಿ ನಟಿಸಲು ಅವಕಾಶ ಸಿಕ್ಕಿದೆ.ನಟ ವಿಜಯ್‌ಅವರೊಂದಿಗೆ ಅಭಿನಯಿಸಿದ್ದೇನೆ. ಇದು ನನ್ನ ೩೨ನೇ ಚಿತ್ರವಾಗಿದೆ.ಐದು ಹಾಡುಗಳು ಇರಲಿದ್ದು, ನಾಲ್ಕು ಹಾಡುಗಳನ್ನು ಥೈಲ್ಯಾಂಡ್‌ದಲ್ಲಿ ಶೂಟ್ ಮಾಡಲಾಗಿದೆ. ಬಿಡುಗಡೆತಡವಾದರೂಚಿತ್ರವುಚೆನ್ನಾಗಿ ಮೂಡಿಬಂದಿದೆಎಂದು ನಾಯಕ ಸರ್ದಾರ್‌ಸತ್ಯ ಪಾತ್ರದ ಪರಿಚಯ ಮಾಡಿಕೊಂಡರು.

ಒಬ್ಬ ಮುಗ್ದ ಹಳ್ಳಿ ಹುಡುಗ ಸಿಟಿ ಬಂದಾಗಅನ್ಯಾಯದ ವಿರುದ್ದ ಹೇಗೆ ಹೋರಾಡುತ್ತಾನೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಹಣಕಾಸಿನ ತೊಂದರೆಯಾಗಲಿಲ್ಲ. ಪ್ರಾರಂಭದಲ್ಲಿಅಯೂಬ್‌ಎನ್ನುವರು ನಿರ್ಮಾಪಕರಾಗಿದ್ದರು. ಆದರೆಅವರ ಮನೆಯಲ್ಲಿ ನಿರ್ಮಾಣಕ್ಕೆ ವಿರೋದ ವ್ಯಕ್ತ ಪಡಿಸಿದ್ದರಿಂದ ಹಿಂದೆ ಸರಿದರು.ನಂತರ ಭಾರ್ಗವಿರವರು ಮುಂದೆ ಬಂದುದಕ್ಕೆ ಸಿನಿಮಾವುಇಲ್ಲಿಯತನಕ ಬಂದಿದೆ.ಬೆಂಗಳೂರು, ಮಡಕೇರಿ ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ.ಫಸ್ಟ್ ಕಾಪಿ ಸಿದ್ದವಿದೆ. ಸದ್ಯದಲ್ಲೆ  ಸನ್ಸಾರ್‌ಗೆಅರ್ಜಿ ಹಾಕಲಾಗುವುದೆಂದು ನಿರ್ದೇಶಕ ಸಂಜಯ್‌ಚಿತ್ರದಕುರಿತಂತೆವಿಷಯಗಳನ್ನು ಹಂಚಿಕೊಂಡರು.

ಸುಮಾರು ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ದರಿದ್ದೇವೆ ಅಂತಾರೆ ವಿತರಕಆಟೋರಾಜು.ಸಂಗೀತ ಮನ್ಸೂರ್‌ಬಾಪ್‌ಜಿ, ಛಾಯಾಗ್ರಹಣ ಬಾಲಗಣೇಶ್, ಸಂಕಲನ ಗಿರೀಶ್‌ಕುಮಾರ್.ಕೆ, ನೃತ್ಯ ಮದನ್‌ಹರಿಣಿ, ಸಾಹಸ ಥ್ರಿಲ್ಲರ್‌ಮಂಜು ಮತ್ತುಕೌರವವೆಂಕಟೇಶ್ ನಿರ್ವಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ನಟಿ,ಮಾಡೆಲ್ ಸಂಹಿತಾವಿನ್ಯಾ, ನಿರ್ಮಲಾಸತ್ಯ ಮುಂತಾದವರು ಉಪಸ್ತಿತರಿದ್ದರು. 

 

Copyright@2018 Chitralahari | All Rights Reserved. Photo Journalist K.S. Mokshendra,