ಕೆಜಿಎಫ್ ೨ ಕೌಂಟ್ಡೌನ್ ಶುರು
‘ಕೆಜಿಎಫ್-೨’ ಚಿತ್ರವುಏಪ್ರಿಲ್ ೧೪ರಂದು ವಿಶ್ವದಾದ್ಯಂತತೆರೆಕಾಣುತ್ತಿರುವುದರಿಂದ ಕೊನೆ ಬಾರಿಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿತು.ನಿರ್ದೇಶಕ ಪ್ರಶಾಂತ್‌ನೀಲ್ ಮಾತನಾಡಿ ನಿರ್ಮಾಪಕರುತೋರಿದಧೈರ್ಯದಿಂದ ನಮ್ಮನ್ನುಎಲ್ಲಾ ಕಡೆಗಳಲ್ಲಿ ಗುರುತಿಸುವಂತಾಯಿತು.ಚಿತ್ರಕ್ಕೆ ಹಾಕಲಾಗಿದ್ದ ಸೆಟ್ ಮಳೆ ಇತ್ಯಾದಿ ಕಾರಣದಿಂದ ಕಳಚಿ ಬಿತ್ತು. ಆಗಲೇ ಅದನ್ನು ನಿರ್ಮಿಸಲು ನಾಲ್ಕು ಕೋಟಿ ವೆಚ್ಚವಾಗಿತ್ತು.ಈ ಸಮಯದಲ್ಲಿಅವರಿಗೆ ಹೇಗೆ ಹೇಳುವುದು ಎನ್ನುವಚಿಂತೆಯಲ್ಲಿದ್ದಾಗ, ನಿರ್ಮಾಪಕರು ಹೇಳಿದ್ದು ಒಂದೇ ಮಾತು.ಸೆಟ್ ಕಳಚಿಬಿದ್ದ ಬಗ್ಗೆ ಚಿಂತೆ ಬಿಡಿ, ಮತ್ತೆಅದನ್ನೆ ಹಾಕಿ ಮುಂದುವರೆಸಿ ಎಂದು ಹೇಳಿದರು.ಇದರಿಂದಚಿತ್ರೀಕರಣಯಾವ ಮಟ್ಟಿಗೆ ನಡೆದುಹೋಯಿತುಎಂಬುದಕ್ಕೆಒಂದುಉದಾಹರಣೆ.ಭಾಗ ೨ರಲ್ಲಿ ಪ್ರಧಾನಿ ಹಾಗೂ ಅಧೀರನ ಪಾತ್ರ ವಿಜೃಂಭಿಸಿದೆ.ಚಿತ್ರದಎಲ್ಲಾ ವಿಷಯಗಳು ವೈಭವೋಪೇತವಾಗಿದೆ.
ಇದುಆರಂಭಿಕ ಯಶಸ್ಸಿನಿಂದ ಪೋಷಿಸಿದ ಪಾತ್ರವಲ್ಲ. ಇದನ್ನೆಲ್ಲಾ ಮೊದಲೇಯೋಚಿಸಲಾಗಿತ್ತು.ಭಾಗ ೩ ಮಾಡುವ ಬಗ್ಗೆ ಈಗಲೇ ಹೇಳಲು ಆಗದುಎಂದು ಹೇಳಿದರು.
ಯಾವ ಮಟ್ಟದವರೆಗೆ ವ್ಯವಹಾರಆಗಿದೆಎಂದುತೆರೆಕಂಡ ನಂತರಉತ್ತರ ಸಿಗುತ್ತೆ.ದೇಶದಲ್ಲಿ ಸುಮಾರು ೯೫೦೦ ಚಿತ್ರಮಂದಿರಗಳಿವೆ. ಆ ಪೈಕಿ ೫೦೦೦ ಕೇಂದ್ರಗಳಲ್ಲಿ ನಮ್ಮ ಸಿನಿಮಾವು ಪ್ರದರ್ಶನಕಾಣಲಿದೆ.ಎಷ್ಟು ಖರ್ಚಾಗಿದೆಎನ್ನುವ ಲೆಕ್ಕ ಇಟ್ಟಿಲ್ಲ. ಚೆನ್ನಾಗಿ ಬರಬೇಕುಎನ್ನುವಕಾರಣದಿಂದ ಬಂಡವಾಳ ಹೂಡಿದ್ದೇನೆ. ಚಿತ್ರವನ್ನು ಮಾರಾಟ ಮಾಡಿಲ್ಲ.ಬಜೆಟ್ ಹೇಳೋಲ್ಲ ಅಷ್ಟೇ ಅಂತಾರೆ ನಿರ್ಮಾಪಕ ವಿಜಯ್‌ಕಿರಗಂದೂರು.
ಪೈರಸಿ ನಿಲ್ಲಿಸುವುದನ್ನುಜನರೇ ನಿರ್ಧಾರ ಮಾಡುತ್ತಾರೆ. ಅದರಲ್ಲಿ ನೋಡುವುದನ್ನುಜನರು ನಿಲ್ಲಿಸಿದರೆ ನಕಲು ಮಾಡುವವರು ನಿಲ್ಲಿಸುತ್ತಾರೆ.ನಾವು ಚಾಪೆ ಕೆಳಗೆ ತೋರಿದರೆಅವರುರಂಗೋಲಿ ಕೆಳಗೆ ತೂರುತ್ತಾರೆ.ದೃಶ್ಯಗಳುಚೆನ್ನಾಗಿಕಾಣಿಸಬೇಕುಎಂದರೆಅದನ್ನುಚಿತ್ರಮಂದಿರದಲ್ಲಿ ಮಾತ್ರ ನೋಡಬೇಕು. ಹಾಗಾಗಿ ಜನತೀರ್ಮಾನಿಸಬೇಕು ಎನ್ನುತ್ತಾರೆಯಶ್.