ರಾಜಿಚಿತ್ರದಲ್ಲಿ ಏಳು ಹಾಡುಗಳು
‘ರಾಜಿ’ ಚಿತ್ರದಧ್ವನಿಸಾಂದ್ರಿಕೆ ಬಿಡುಗಡೆಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಸಮಾರಂಭಕ್ಕೆ ಚಾಲನೆ ನೀಡಿದ ಶ್ರೀನಗರಕಿಟ್ಟಿ ‘ಹುಡುಗರು’ ಸಿನಿಮಾದ ೪೨ ದಿನಗಳ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕುತ್ತಾ ಪುನೀತ್‌ರಾಜ್‌ಕುಮಾರ್‌ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಬಿಚ್ಚಿಟ್ಟರು.ರಾಘಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗಕ್ಕೆ ಬರಲುಅವರೇ ನನಗೆ ಪ್ರೇರಣೆಎಂದು ವಿಜಯರಾಘವೇಂದ್ರ ಹೇಳಿದರು.
ಈ ಸಿನಿಮಾವು ನನ್ನ ಹೃದಯಕ್ಕೆ ಹತ್ತಿರವಾಗಿದೆ.ಸೋದರ ಪುನೀತ್‌ಅಕ್ಟೋಬರ್ ೨೯ರಂದು ಕ್ಲಾಪ್ ಮಾಡಬೇಕಾಗಿತ್ತು.ಅದು ಆಗಲಿಲ್ಲ. ಆದರೆಇದೇ ೨೯ರಂದು ತೆರೆಗೆ ಬರುತ್ತಿರುವುದು ಕಾಕತಾಳೀಯ.ಅವನು ನನ್ನೊಳಗೆ ಇದ್ದಾನೆ. ಚಿತ್ರವನ್ನು ಅವನಿಗೆ ಅರ್ಪಿಸುತ್ತೇನೆಂದುರಾಘವೇಂದ್ರರಾಜ್‌ಕುಮಾರ್ ಭಾವುಕರಾದರು.ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರೀತಿ ನಿರ್ದೇಶನ ಮಾಡುವಜತೆಗೆರಾಘಣ್ಣರಿಗೆಜೋಡಿಯಾಗಿ ಅಭಿನಯಿಸಿದ್ದಾರೆ.
ಹಿರಿಯ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಸಾಹಿತ್ಯದಏಳು ಗೀತೆಗಳಿಗೆ ಉಪಾಸನಾ ಮೋಹನ್ ಸಂಗೀತ ಸಂಯೋಜಿಸಿದ್ದಾರೆ.ವಸುಮತಿಉಡುಪಕಥೆ, ಹರೀಶ್‌ಚಿತ್ರಕಥೆ, ಪಿ.ವಿ.ಆರ್.ಸ್ವಾಮಿಛಾಯಾಗ್ರಹಣ, ನಾಗೇಶ್ ಸಂಕಲನ ಚಿತ್ರಕ್ಕಿದೆ.ಮೈಸೂರಿನ ಬಸವರಾಜು ನಿರ್ಮಾಣ ಮಾಡಿರುವುದು ಹೊಸ ಅನುಭವ. ಅತಿಥಿಗಳಾಗಿ ಡಾ.ನಾಗೇಂದ್ರಪ್ರಸಾದ್,ತಬಲನಾಣಿ, ಸಾಗರ್‌ಪುರಾಣಿಕ್, ಪ್ರತಾಪ್‌ಸಿಂಹ, ಕೆಂಪಣ್ಣಶೆಟ್ಟಿ, ಆಡುಗೋಡಿ ಶ್ರೀನಿವಾಸ್ ಮುಂತಾದವರು ಉಪಸ್ತಿತರಿದ್ದರು.