ಸಂಚಾರಿ ವಿಜಯ್ ನೆನಪಿನಲ್ಲಿ ಮೇಲೋಬ್ಬ ಮಾಯಾವಿ
ಹರಳು ಮಾಫಿಯಾ ಹಿನ್ನಲೆಯುಳ್ಳ ‘ಮೇಲೊಬ್ಬ ಮಾಯಾವಿ’ ಚಿತ್ರದ ಬಿಡುಗಡೆಪೂರ್ವಸುದ್ದಿಗೋಷ್ಟಿಯಲ್ಲಿಎಲ್ಲರೂ ಸಂಚಾರಿವಿಜಯ್ ಮತ್ತು ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು.ಅತಿಥಿಯಾಗಿ ಶ್ರೀನಗರಕಿಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಸಂಚಾರಿವಿಜಯ್‌ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶವನ್ನೇ ಹೊದ್ದುಕೊಂಡಿರುವದಕ್ಷಿಣಕನ್ನಡ ಹಾಗೂ ಕೊಡಗುಗಡಿಭಾಗದ ಪುಷ್ಪಗಿರಿಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲುದಂಧೆಯ ಕರಾಳಮುಖವನ್ನು ಅವರ ಪಾತ್ರದ ಮೂಲಕ ತೋರಿಸಿದ್ದಾರೆ.ರಂಗಭೂಮಿ ಪ್ರತಿಭೆಅನನ್ಯಶೆಟ್ಟಿ ಸಕ್ಕರೆಯಾಗಿ ನಾಯಕಿ.
ಬಿಗ್‌ಬಾಸ್‌ಖ್ಯಾತಿಯಚಕ್ರವರ್ತಿಚಂದ್ರಚೂಡ್‌ಚಿತ್ರಕಥೆ,ಸಂಭಾಷಣೆ, ಸಾಹಿತ್ಯಬರೆಯುವಜೊತೆಗೆ ಮುಖ್ಯ ಖಳನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬೆನಕನಂಜಪ್ಪ, ಎಮ್.ಕೆ.ಮಠ, ನವೀನ್‌ಕುಮಾರ್, ಕೃಷ್ಣಮೂರ್ತಿಕವತ್ತಾರ್, ಲಕ್ಷಿಅರ್ಪಣ್, ಮುಖೇಶ್, ಡಾ.ಮನೋನ್ಮಣಿ ಮುಂತಾದವರು ನಟಿಸಿದ್ದಾರೆ.
ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್‌ಅಡಿಯಲ್ಲಿ ಭರತ್‌ಕುಮಾರ್-ತನ್ವಿಅಮಿನ್‌ಕೊಲ್ಯಜಂಟಿಯಾಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅಕ್ರೊಮೊಟಾಪ್ಸಿಯಾದ ನ್ಯೂನತೆ ಮತ್ತು ಹಲವು ಸಾವು ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನಕಥಾಹಂದರ ಹೊಂದಿದ್ದು, ನೈಜ ಘಟನೆಗಳನ್ನು ಬಳಸಿಕೊಂಡಿರುವುದು ವಿಶೇಷ. ಎಲ್.ಎನ್.ಶಾಸ್ತ್ರೀ ಮ್ಯೂಸಿಕ್ ಕಂಪೋಸ್ ಮಾಡಿ ‘ಕಳ್ಳ ಕೊಳಲ ಹಿಡಿದವನೊಬ್ಬ ಗೋಪಾಲ’ ಎನ್ನುವಗೀತೆಗೆಧ್ವನಿ ನೀಡಿರುವಕೊನೆಯಚಿತ್ರಇದಾಗಿದೆ. ಹಿನ್ನಲೆ ಸಂಗೀತಕದ್ರಿಮಣಿಕಾಂತ್, ಛಾಯಾಗ್ರಹಣದೀಪಿತ್, ಸಂಕಲನ ಕೆ.ಗಿರೀಶ್‌ಕುಮಾರ್, ನೃತ್ಯರಾಮುಅವರದಾಗಿದೆ. ಪತ್ರಕರ್ತ ಬಿ.ನವೀನ್‌ಕೃಷ್ಣ ರಚಿಸಿ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್‌ನಿಂದ ಪ್ರಶಂಸೆಗೆ ಒಳಗಾದ ಚಿತ್ರವುಏಪ್ರಿಲ್ ೨೯ರಂದು ರಾಜ್ಯಾದ್ಯಂತತೆರೆಕಾಣುತ್ತಿದೆ.