ಮಹಿಳೆಯರ ಹೇ ಕೃಷ್ಣ
ಚಿತ್ರರಂಗದಲ್ಲಿ ಮಹಿಳಾ ತಂತ್ರಜ್ಘರುಕಡಿಮೆಇದೆಎಂದು ಈಗ ಭಾವಿಸುವುದುಕಷ್ಟವಾಗುತ್ತದೆ. ಇಲ್ಲೋಂದು ಮಹಿಳಾ ತಂಡದವರೇ ಸೇರಿಕೊಂಡು ‘ಹೇ ಕೃಷ್ಣ’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ಪುತ್ರಿಕಿರಿ ವಯಸ್ಸಿನ ಪೂಜಾಭಾರ್ಗವಿ ನಿರ್ದೇಶಕಿ, ಗಾಯಿತ್ರಿ ನಿರ್ಮಾಪಕಿ, ಯುಕ್ತ.ವಿ. ಕಥೆ, ರಾಜೇಶ್ವರಿವಾಸು ಸಂಭಾಷಣೆಬರೆಯುತ್ತಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ನಮ್ಮಚಿತ್ರದ ಮೂಲಕ ಮಹಿಳಾ ಪ್ರತಿಭೆಗಳನ್ನು ಹೂರತರಬೇಕೆಂದು ಹುಡುಕಾಟ ನಡೆಸಿದಾಗ ಕಣ್ಣಿಗೆಕಂಡದ್ದು ಪೂಜಾಭಾರ್ಗವಿ.
ಅವಳು ನಿರ್ದೇಶನದತರಭೇತಿ ಪಡೆದುಕೊಂಡಿದ್ದಾಳೆ.ಮಹಿಳೆಯಲ್ಲಿ ೨೬ ವರ್ಷದಯುವತಿತೆಲುಗುಚಿತ್ರಡೈರಕ್ಷನ್ ಮಾಡಿದದಾಖಲೆಇತ್ತು.ಆದರೆ ಈಕೆ ೨೨ ವರ್ಷ ವಯಸ್ಸಿನಾಗಿರುವುದರಿಂದ ಅತ್ಯಂತ ಚಿಕ್ಕವಯಸ್ಸಿನ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾಳೆ.ಸೆಸ್ಪನ್ಸ್‌ಥ್ರಿಲ್ಲರ್‌ಜೊತೆಗೆಒಂದುಉತ್ತಮ ಸಂದೇಶಇರಲಿದೆಎಂದು ಹೇಳಿದರು.
ಸೆಂಚೂರಿ ಫಿಲಿಂಇನ್ಸಿಟ್ಯೂಟ್‌ದಲ್ಲಿಡೈರಕ್ಷನ್‌ಕೋರ್ಸ್ ಮುಗಿಸಿ, ಹಲವು ಡಾಕ್ಯುಮೆಂಟರಿಅಲ್ಲದೆ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವಿದೆ.ಮರ್ಡರ್ ಹಾಗೂಇನ್‌ವೆಸ್ಟಿಗೇಷನ್‌ದಲ್ಲಿ ಸಿನಿಮಾವು ಸಾಗುತ್ತದೆ.ಇಬ್ಬರು ನಾಯಕರು, ನಾಯಕಿಯರುಇರುತ್ತಾರೆ, ಕುಂದಾಪುರ, ತೀರ್ಥಹಳ್ಳಿ, ಮೈಸೂರು ಸುತ್ತಮುತ್ತ್ತಚಿತ್ರೀಕರಣ ನಡೆಸಲುಯೋಜನೆ ಹಾಕಲಾಗಿದೆಅಂತ ಪೂಜಾಭಾರ್ಗವಿ ಮಾಹಿತಿ ನೀಡಿದರು.ತಾರಗಣದಲ್ಲಿ ಮಯೂರ್, ಶಂಖನಾದಆಂಜನಪ್ಪ, ಅಭಿನವ್‌ಉತ್ತೇಜ್, ಮಂಜುನಾಥ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತರಾಕಿಸೋನು, ಛಾಯಾಗ್ರಹಣರಾಜಶೇಖರ್, ಚಿತ್ರಕಥೆ ಸನೂಪ್‌ಸಾಜನ್‌ಅವರದಾಗಿದೆ.