Kshamisu Bidu Basavanna.

Sunday, April 17, 2022

227

ಜನತಂತ್ರದಜನಕ ಬಸವ - ನಾದಬ್ರಹ್ಮ ಹಂಸಲೇಖಾ

ಸಾಹಿತಿ ಮತ್ತುದಂತವೈದ್ಯರಾಗಿರುವಗಂಗಾವತಿಯಡಾ.ಶಿವಕುಮಾರ್‌ಮಾಲಿಪಾಟೀಲ್‌ರವರು ರಚಿಸಿರುವ ‘ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ ೫.೩೪ ನಿಮಿಷದ ವಿಡಿಯೋ ಹಾಡನ್ನುನಿರ್ಮಿಸಿದ್ದಾರೆ.ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆಗಣ್ಯರು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ನಾಡೋಜ.ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ.ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ.ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆರಚನೆ ಮಾಡಿಅದಕ್ಕೊಂದುದೃಶ್ಯರೂಪಕೊಟ್ಟಿರುವುದುತುಂಬ ಅಭಿನಂದನೀಯ.ನಾನು ನೋಡಿ ಸಂತೋಷಪಟ್ಟಿದ್ದೇನೆ. ನೀವು, ನಿಮ್ಮಅಕ್ಕಪಕ್ಕದವರಿಗೆ ಹೇಳಿ.ಶ್ರೀನಿವಾಸಮೂರ್ತಿರನ್ನು ಪರದೆ ಮೇಲೆ ಮಾತ್ರ ನೋಡಿದ್ದೆ.ನೇರವಾಗಿ ನೋಡಿರಲಿಲ್ಲ. ಈ ನೆಪದಲ್ಲಿಆದರೂ ಹಂಸಲೇಖಾರನ್ನು ನೋಡಲುಅವಕಾಶವಾಯಿತು.ನನಗೆ ೯೫ ಆಗಿದೆ.ದೇವರಅನುಗ್ರಹಇದ್ದರೆ ಸಂಚೂರಿ ಬಾರಿಸುತ್ತೇನೆಂದುಆಹ್ವಾನಿತರನ್ನು ನಗಿಸಿದರು

ಕ್ಷಮಿಸಿ ಬಿಡು ಬಸವಣ್ಣಅಂತಯಾಕೆ ಕೇಳಬೇಕು. ಹನ್ನರಡನೇ ಶತಮಾನದಲ್ಲಿಕ್ರಾಂತಿಮಾಡಿದಾರಿದೀಪ ಹಾಕಿ ಕೊಟ್ಟಿದ್ದಾರೆ. ಅದರಂತೆಎಲ್ಲರೂಯಾರು ನಡೆಯುತ್ತಿಲ್ಲ. ಅದರಲ್ಲೂರಾಜಕೀಯ ವ್ಯಕ್ತಿಗಳು.ಇವತ್ತು ಹೇಳಿದ್ದನ್ನು ನಾಳೆ ಹೇಳೋಲ್ಲ. ನಾಳೆ ಹೇಳಿದ್ದನ್ನು ನಾಡಿದ್ದು ಮರೆತುಬಿಡ್ತಾರೆ.ಇಂಥ ಪ್ರಸಂಗದಲ್ಲಿ ಕ್ಷಮಿಸಿ ಬಿಡುಅಂತಯಾರಿಗೆ ಹೇಳೋದು.ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಬೇಕಾದಷ್ಟುಆಗುತ್ತದೆ.ಆವಾಗ ಬಸವಣ್ಣನವರು ಮೇಲಿಂದಕ್ಷಮಿಸುತ್ತಾರೆ.ಇಂಥಒಂದು ಸಾಹಿತ್ಯವನ್ನು ನಿರ್ಮಾಪಕರು ಸೊಗಸಾಗಿ ರಚನೆ ಮಾಡಿದ್ದಾರೆ.ಅದನ್ನೆ ಅಷ್ಟೇ ಚೆಂದವಾಗಿರಾಜುಎಮ್ಮಿಗನೂರು ಸಂಗೀತ ಸಂಯೋಜನೆ ಮಾಡಿದ್ದಾರೆ.ಇದಕ್ಕೆಲ್ಲಾ ಮೂಲ ಕಾರಣ ಹಂಸಲೇಖಾ.ಈ ಹಿಂದೆಅವರು ಏನೇ ಮಾತನಾಡಿದ್ರು ಸುದ್ದಿ ಆಗುತ್ತಿತ್ತು.ಆದರೆಯಾವುದಕ್ಕೂ ಬಗ್ಗಲಿಲ್ಲ. ಅದುಒಂದುಅವರಕೆಚ್ಚದೆಯ ನುಡಿ.ಇದ್ದದ್ದನ್ನುಇದ್ದಾಗೆ ಹೇಳಿಬಿಡಬೇಕು.ಆದುಆಗಿದೆ ಹೀಗಿದೆ.ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ನೇರವಾಗಿ ಮಾತಾಡಿದ್ದು ಕೆಲವರಿಗೆರುಚಿಸಲಿಲ್ಲ. ಅದಕ್ಕೆ ನಾನು ಅವರ ಪರವಾಗಿಜೈಅಂತೇನೆ. ಹಾಡು ಲೋಕಾರ್ಪಣೆಯಾಗಿದೆ, ಹೆಚ್ಚು ಜಯಪ್ರಿಯವಾಗಲೆಂದು ಹಿರಿಯ ನಟ ಶ್ರೀನಿವಾಸಮೂರ್ತಿ ಶುಭ ಹಾರೈಸಿದರು.

ಇಡೀಕನ್ನಡ ನಾಡಿನಜನಜೀವನದ ಸಮಾಜಉದ್ದಾರದಎಲ್ಲಾ ವಿಷಯಗಳ ಸಂಸ್ಥೆಗೆ ಅಧ್ಯಕ್ಷರುಒಬ್ಬನೇ ಬಸವಣ್ಣ.ಅವರುಅಧ್ಯಕ್ಷರು, ನಾವೆಲ್ಲರೂಅದಕ್ಷರು.ಅವರುಹೇಳಿದ್ದು ಒಂದನ್ನು ಪಾಲಿಸದೆ ಹೀಗೆ ಪರಿಪಾಲಿಸಿಕೊಂಡು ಜೀವನ ಮಾಡ್ತಾಇದ್ದೇವೆ. ನಾನು ನಾಟಕ ಕಂಪೆನಿಯಿಂದ ಬಂದವನು.ನೂರಾರುಕಲಾವಿದರು ಬರುತ್ತಾಇದ್ದಾರೆ.ಅವರಿಗೊಂದು ವೇದಿಕೆ ಸೃಷ್ಟಿಸಲು ಪಂಚಾಕ್ಷರಿ ಗವಾಯಿ ಹೆಸರಿನಲ್ಲಿಚೌಡಯ್ಯ ಮಂದಿರತರಹರಂಗಮಂದಿರಕಟ್ಟಬೇಕೆಂದುಯೋಚನೆ ಮಾಡ್ತಾಇದ್ದೇನೆ. ನಿರ್ಮಾಪಕರು ಮೂರು ವರ್ಷದ ಕೆಳಗೆ ಕರೋನ ಬಗ್ಗೆ ಗೀತೆಯನ್ನು ರಚಿಸಿದ್ದರು.ಅದನ್ನುಉಪೇಂದ್ರ ಪ್ರಶಂಸೆ ವ್ಯಕ್ತಪಡಿಸಿದ್ದರು.ದೇಶದಲ್ಲಿ,ಜಗತ್ತಿನಲ್ಲಿ ಬದಲಾವಣೆ ಆಗ್ತಾ ಇದೆ. ಮತ್ಸರ ಮತ್ತುದ್ರೋಹಅನ್ನೋದು ದಿನನಿತ್ಯದ ಶೈಲಿಯಾಗಿದೆ.ಉಕ್ರೇನ್‌ನಂತಹಚಿಕ್ಕದೇಶಗುಬ್ಬಚ್ಚಿಗೆ ಪಾಪಚ್ಚಿ ಬಿದ್ದುಅಪ್ಪಚ್ಚಿಆಯಿತು.ನಾವುಗಳು ಏನು ಮಾಡಲಿಕ್ಕೆ ಸಾಧ್ಯವಿಲ್ಲ. ಮಂಗನಿಂದ ಮಾನವ. ನಾವು ಬದುಕಿದ್ದುಆಯಿತು.ನಮ್ಮ ಮಕ್ಕಳು ಬೆಳೀಬೇಕು.ಅವರುಗಳು ಪೂರ್ಣಜೀವನ ಮಾಡಬೇಕು.ಹೀಗೆ ನಾವು ಯೋಚನೆ ಮಾಡುವದೃಷ್ಟಿಯಲ್ಲಿ ಬಸವ ಇರ‍್ತಾನೆ. ೧೨ನೇ ಶತಮಾನದಲ್ಲಿ ಬಸವಣ್ಣಖಡ್ಗವನ್ನು ಕೆಳಗಿಳಿಸು ಬಿಜ್ಜಳ ರಾಜನೇ, ಯುದ್ದವನ್ನು ನಿಲ್ಲಿಸು, ಸೈನಿಕರನ್ನುಅಕ್ಷರಸ್ತರನ್ನಾಗಿ ಮಾಡು, ಯುದ್ದ ನಿಲ್ಲುತ್ತೆ.ಜನತಂತ್ರ ಬರುತ್ತೆಅಂತ ಬುದ್ದಿ ಹೇಳಿದ್ದ. ಅಂದರೆಜನತಂತ್ರದಜನಕ ಬಸವ.ಅವನನ್ನು ಮುಟ್ಟಿದರೆಕೀರ್ತಿಇಲ್ಲವೆ ಬೇರೆನೋಆಗುತ್ತದೆ.ಅದರಿಂದ ಆ ಬಸವ ಇಡೀ ಪ್ರದೇಶಕ್ಕೆಒಂದುಧರ್ಮ ಸೃಷ್ಟಿಸುತ್ತೆ.ಇಡೀಕರ್ನಾಟಕ ವೀರಶೈವಎನ್ನುವ ಲಿಂಗಾಯಿತಧರ್ಮವನ್ನು ಪರಿಶುದ್ದವಾಗಿ ಶೋಧಿಸಿ ಮಾನವಜನಾಂಗಕ್ಕೆಕೊಟ್ಟಂತ ಬಸವಣ್ಣನನ್ನು ನಿರ್ಮಾಪಕರು ಪ್ರೀತಿಯಿಂದ ಬಯಲಿಗೆತಂದಿದ್ದಾರೆ.ನಾವು ಬುದ್ದಿ ಹೇಳ್ತಾ ಇರಬೇಕು.ಅವರು ಬುದ್ದಿ ಕಲಿತುಕೊಳ್ತಾ ಇರಬೇಕು.ಇದು ಬಸಿವ ಭಾರತ, ಬಸವ ಭಾರತವೆಂದು ನಾದಬ್ರಹ್ಮ ಹಂಸಲೇಖಾ ಅಭಿಪ್ರಾಯಪಟ್ಟರು.

ಹಂಸಲೇಖಾ ಶಿಷ್ಯ ರಾಜುಎಮ್ಮಿಗನೂರುಗೀತೆಗೆ ನಿರ್ದೇಶನ ಮತ್ತುರಾಗ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಹಣರವಿಗೌಡರ್, ಸಂಕಲನ ಎ.ಆರ್.ಕೃಷ್ಣ, ನೃತ್ಯ ನಾಗರತ್ನಹಡಗಲಿ ಅವರದಾಗಿದೆ. ಧಾರವಾಡದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನುಆನಂದ್‌ಆಡಿಯೋದವರು ಹೊರತಂದಿದ್ದಾರೆ. ಸುಂದರಕಾರ್ಯಕ್ರಮದಲ್ಲಿಅರವಿಂದಜತ್ತಿ, ಶ್ರೀಪಾದಹೆಗಡೆ ಉಪಸ್ತಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,