ಪರೀಕ್ಷೆ ಹಾಡಿನಲ್ಲಿಗಣೇಶ್, ದಿಗಂತ್
೨೦೦೮ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಗಾಳಿಪಟ’ ಚಿತ್ರವು ಹೊಸ ಕಥೆಯೊಂದಿಗೆ ‘ಗಾಳಿಪಟ ೨’ ಹೆಸರಿನಲ್ಲಿ ಸಿದ್ದಗೊಂಡಿದೆ.ಮೊದಲ ಸಿನಿಮಾದಲ್ಲಿ ಮೂವರುಇದ್ದರು.ಇದರಲ್ಲೂಗಣೇಶ್, ದಿಗಂತ್‌ಜತೆಗೆರಾಜೇಶ್‌ಕೃಷ್ಣನ್ ಬದಲು ಹೊಸದಾಗಿ ಪವನ್‌ಕುಮಾರ್ ಸೇರಿಕೊಂಡಿದ್ದಾರೆ.ಇದು ಈಗಿನ ಜಮಾನದಚಿತ್ರ.ಯೋಗರಾಜಭಟ್ಟರುತಮಗೆತೋಚಿದ್ದನ್ನು ಬರೆದಿರುವುದು ವಿಶೇಷ. ಮೊನ್ನೆಯಷ್ಟೇಎಕ್ಸಾಂ ಸಾಂಗ್ ಬಿಡುಗಡೆಕಾರ್ಯಕ್ರಮ ನಡೆಯಿತು.ನಿರ್ಮಾಪಕರಮೇಶ್‌ರೆಡ್ಡಿ ಮಾತನಾಡಿಒಮ್ಮೆತಿರುಪತಿಯಿಂದ ಬರುವಾಗ ಸುಧಾಮೂರ್ತಿಅವರು ಫೋನ್ ಮಾಡಿ ಭಟ್ಟರು ಮಾಡುತ್ತಿರುವಚಿತ್ರದ ಬಗ್ಗೆ ಹೇಳಿ, ನೀನೇ ನಿರ್ಮಾಣ ಮಾಡಬೇಕೆಂದು ಹೇಳಿದರು.ಅದಕ್ಕೆಇಲ್ಲಾಎನ್ನಲುಆಗದೆಒಪ್ಪಿಕೊಂಡೆ.ನಂತರ ನಿರ್ದೇಶಕರು ಆಫೀಸಿಗೆ ಬಂದುಚಿತ್ರದ ವಿವರಗಳನ್ನು ನೀಡಿದರು.ಎರಡೂ ಲಾಕ್‌ಡೌನ್‌ಗಳನ್ನು ಎದುರಿಸಿದ್ದೇನೆ.
ಸಾಕಷ್ಟು ಅಡೆತಡೆಗಳನ್ನು ಸಹ ನಾವುಗಳು ಎದುರಿಸಬೇಕಾಯಿತು.ಹಿಂದಿನ ನಾಲ್ಕು ಸಿನಿಮಾಗಳ ಎಕ್ಸಾಮ್‌ದಲ್ಲಿ ಫೇಲ್‌ಆಗಿದ್ದೇನೆ. ಇದರಲ್ಲಿಗೆಲ್ಲುವ ಭರವಸೆಇದೆಎಂದರು.
ಹಿಂದಿನ ಚಿತ್ರಕ್ಕಿಂತ ನೂರು ಪಾಲು ಚೆನ್ನಾಗಿ ಬಂದಿದೆ.ಮಲೆನಾಡಿನ ಹುಡುಗನಾಗಿಗಣೇಶ್ ನಟಿಸಿದ್ದಾರೆ.ಒದ್ದಾಡಿಕೊಂಡು, ಗುದ್ದಾಡಿಕೊಂಡು ಮುದ್ದಾಡಿಕೊಂಡು ಸಿನಿಮಾ ಮಾಡಿದ್ದೇವೆ. ಗಣೇಶನ ಮಗನೂ ನಟನೆ ಮಾಡಿದ್ದಾನೆ. ಚಿತ್ರದ ಮೇಲೆ ನಿರೀಕ್ಷೆಇಟ್ಟುಕೊಂಡುಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆಖಂಡಿತ ನಿರಾಸೆ ಮಾಡುವುದಿಲ್ಲ, ಖುಷಿ ಕೊಡುತ್ತದೆ.ಇಡೀ ಸಿನಿಮಾ ಮನರಂಜನೆಯಿಂದಕೂಡಿದೆಎಂದುಯೋಗರಾಜಭಟ್ಟರು ಹೇಳಿದರು.
ಗಾಳಿಪಟ ಅಂದ್ರೆಎಮೋಷನ್. ಭಟ್ಟರುಕಥೆ ಹೇಳಿದಾಗ ಇದೇನು ಸರ್ ಈ ಥರಇದೆ.ಹಾಗೆ ಹೀಗೆ ಹೋಗುತ್ತದೆ.ಇದನ್ನುತೆರೆಮೇಲೆ ಹೇಗೆ ತರ‍್ತಿರಾಅಂತ ಕೇಳಿದ್ದೆ. ಹಾಡನ್ನುಕುದರೆಮುಖದಲ್ಲಿ ಸಟ್ ಹಾಕಿ ಮಾಡಿದೆವು. ತಜುಕಿಸ್ತಾನದಲ್ಲಿ ಪ್ರಮುಖ ಭಾಗಗಳ ಶೂಟಿಂಗ್ ನಡೆಸಲಾಗಿದೆ.ನನಗೂ ಸಹ ಇಷ್ಟದಜಾಗ.ಅನಂತ್‌ನಾಗ್ ಸರ್‌ಕನ್ನಡ ಶಿಕ್ಷಕರಾಗಿ ಕಾಣಿಸಿಕೊಂಡಿದ್ದಾರೆಂದು ಗಣೇಶ್‌ಒಂದಷ್ಟು ಮಾಹಿತಿಗಳನ್ನು ಬಚ್ಚಿಟ್ಟರು.
ನಾಯಕಿಯರಾದ ವೈಭವಿಶಾಂಡಿಲ್ಯ, ಸಂಯುಕ್ತಮೆನನ್, ನಿಶ್ವಿಕಾನಾಯ್ಡು ದಿಗಂತ್, ಪವನ್‌ಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು.