ಮಂಜರಿ ಮಾತುಗಳು
೨೦೧೭ರ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ನಡೆದಿದ್ದುಇದರಲ್ಲಿಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು ವಿಶೃತ್‌ನಾಯಕ್.ಚಿತ್ರದ ಹೆಸರು ಮಂಜರಿ. ಇವರು ಅಷ್ಟೇನು ಗೊತ್ತಿಲ್ಲದ್ದರಿಂದ ಮಾದ್ಯಮದ ಮೂಲಕ ಪರಿಚಯಮಾಡಿಕೊಳ್ಳಬೇಕೆಂದು ಬಯಸಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಂಡಿದ್ದರು.ನಂತರ ಮಾತನಾಡುತ್ತಾ ನಿರ್ದೇಶನದ ಆಸಕ್ತಿ ಮೊಳತದ್ದೇ ಆಕಸ್ಮಿಕ.ನಿರ್ದೇಶನ ಮಾಡಿಗೆದ್ದರೆ ಸಾಕು ಅಂದುಕೊಂಡವನಿಗೆ ಮುಂದೆ ಅಚಾನಕ್ಕಾಗಿ ನಾಯಕನಟನಾಗುವ ಅವಕಾಶ ಒದಗಿಬಂತು.ಇದುಒಂಥರಜೀವನಕ್ಕೆತಿರುವು ನೀಡಿದೆ.
ಯಾಕೆಂದರೆಅದೇಚಿತ್ರದ ನಟನೆಗಾಗಿ ಪ್ರಶಸ್ತಿ ಬಂದದ್ದುಖುಷಿಯ ವಿಚಾರ.ರಾಜ್ಯ ಪ್ರಶಸ್ತಿ ಬರಬೇಕೆಂದರೆ ಮೊದಲು ನಮ್ಮ ಸಿನಿಮಾವನ್ನು ನೊಂದಾಯಿಸಿಕೊಳ್ಳಬೇಕು. ಅದರ ವಿಷಯವು ತಿಳಿದಿರಲಿಲ್ಲ. ಹಿತೈಷಿಗಳು ತಿಳಿಸಿದ್ದರಿಂದ ನೋಡುವಅಂದುಕೊಂಡು ವೀಕ್ಷಣೆಗೆ ಕಳುಹಿಸಿಕೊಟ್ಟಿದ್ದೆ.ಪ್ರಥಮಚಿತ್ರದಲ್ಲೆ ಬಂಪರ್ ಲಾಟರಿ ಹೊಡೆದಿದೆ.
ಮುಂದೆಯೂ ವಿಶೇಷವಾದ ಸಿನಿಮಾಗಳನ್ನು ನಿರ್ದೇಶಿಸುವ ಯೋಜನೆಇದೆ.ಈ ನನ್ನ ಸಾಧನೆಗೆ ಸಹಕಾರ ನೀಡಿದ ಪತ್ನಿ ಮೇಘನಾಜೋಯಿಸ್ ಹಾಗೂ ನಟನಾಗುವಂತೆ ಪ್ರೇರಿಪಿಸಿದ ಶಂಕರ್‌ಅವರಿಗೆ ಧನ್ಯವಾದಗಳನ್ನು ತಿಳಿಸಿದರು.‘ಕಾಡ’ ಮತ್ತು ‘ಕಾಲನಾಗಿಣಿ’ ಸಿನಿಮಾಗಳ ಸಾರಥ್ಯ ವಹಿಸಿರುವ ವಿಶೃತ್‌ನಾಯಕ್, ತನ್ನನ್ನುಅಭಿನಂದಿಸಲು ಆಗಮಿಸಿದ್ದ ಚಿತ್ರರಂಗದಗಣ್ಯರಿಗೆ ಕೃತಜ್ಘತೆಗಳನ್ನು ಹೇಳಿದರು.