ಭಟ್ಟರಆಖಾಡದಲ್ಲಿಗರಡಿ
ಕುಸ್ತಿ ಪರಂಪರೆ ಹಿನ್ನಲೆ ಹೊಂದಿರುವ ‘ಗರಡಿ’ ಸಿನಿಮಾದಚಿತ್ರೀಕರಣವು ದೇವನಹಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಬರುವಚಿಕ್ಕಜಾಲದಕೋಟೆಆಂಜನೇಯ ಸ್ವಾಮಿದೇವಸ್ಥಾನದ ಬಳಿ ನಡೆಯುತ್ತಿತ್ತು. ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ವಿರಾಮದ ಮುನ್ನ ಬರುವ ಕುಸ್ತಿ ಪಂದ್ಯವನ್ನುಛಾಯಾಗ್ರಾಹಕ ನಿರಂಜನಬಾಬು ಸೆರೆ ಹಿಡಿಯುತ್ತಿದ್ದರು.ಶಾಟ್ ಓಕೆ ಆದ ನಂತರತಂಡವು ಮಾತಿಗೆ ಕುಳಿತುಕೊಂಡಿತು.ಖುಷಿಯಾಗಿ ಬರೆದುಕೊಂಡ ಚಿತ್ರಗಳಲ್ಲಿ ಇದುಒಂದಾಗಿದೆ.ಇದುಒಬ್ಬ ಬಡವನಕಥೆಎನ್ನಬಹುದು.ಗರಡಿಯಿಂದ ಕಾರಣಾಂತರಗಳಿಂದ ಆಚೆ ಹಾಕಿದ ಮೇಲೆ, ಒಬ್ಬ ಮನುಷ್ಯತನ್ನ ಪ್ರತಿಭೆಯಿಂದ ಹೇಗೆ ಬೆಳೆಯುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ನನಗೆ ಏಕಲವ್ಯನ ಪಾತ್ರ ಇಷ್ಟ.ಅದನ್ನು ಬೇಸ್ ಮಾಡಿ ಬರೆದಿದ್ದೇವೆ. ಆ ಪಾತ್ರವನ್ನು ಸೂರ್ಯನಾಗಿಯಶಸ್‌ಸೂರ್ಯ ಮಾಡುತ್ತಿದ್ದಾರೆ.ಎಂದಿನಂತೆಇದರಲ್ಲೂಎಣ್ಣೆ ಸಾಂಗ್‌ಇರುತ್ತದೆಂದುಯೋಗರಾಜಭಟ್ಟರು ನಕ್ಕರು.
ಗರಡಿ ಮನೆಯಉಸ್ತಾದ್‌ರಂಗಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.
ದರ್ಶನ್‌ಅತಿಥಿ ಪಾತ್ರದಲ್ಲಿ ನಟಿಸಲುಒಪ್ಪಿಕೊಂಡಿದ್ದಾರೆ.ಅದಕ್ಕೆಕಾರಣವೂಇದೆ.ಯಶಸ್‌ಸೂರ್ಯಅವರುದರ್ಶನ್ ಫಾಲೋವರ್ ಮತ್ತುಅಭಿಮಾನಿ.ಆತನನ್ನು ಹೀರೋ ಮಾಡಿತಾನುಚಿತ್ರದಲ್ಲಿಅಭಿನಯಿಸುತ್ತೇನೆಂದುಆಶ್ವಾಸನೆಕೊಟ್ಟಿದ್ದರು.ಇವರ ಶೂಟ್ ಮುಂದಿನ ದಿನಗಳಲ್ಲಿ ನಡೆಯಬೇಕಿದೆ.ಶೇಕಡಎಪ್ಪತ್ತರಷ್ಟು ಮುಗಿಸಿದ್ದು, ದರ್ಶನ್‌ಎಂಟ್ರಿಯೊಂದಿಗೆಚಿತ್ರೀಕರಣಕ್ಕೆ ವಿದಾಯ ಹೇಳಲಿದ್ದೇವೆ. ನನ್ನ ಪಾತ್ರಕ್ಕೆ ಪ್ರಕಾಶ್‌ರೈಅಥವಾ ಹಿಂದಿಯಜನಪ್ರಿಯ ನಟರೊಬ್ಬರನ್ನುಕರೆಸಬೇಕುಎಂದುಯೋಜನೆ ಹಾಕಲಾಗಿತ್ತು.ಆದರೆನನ್ನ ಹುರಿ ಮೀಸೆಯನ್ನು ಗಮನಿಸಿದ ಭಟ್ಟರು ನೀವೇ ಸರಿಎಂದುಒತ್ತಡ ಹಾಕಿದ್ದರಿಂದ ಮಾಡಬೇಕಾಯಿತು. ಸೃಷ್ಟಿ ಪ್ರೊಡಕ್ಷನ್ ಸಂಸ್ಥೆಯಿಂದ ಹದಿನಾರನೇಚಿತ್ರವಾಗಿದೆಎನ್ನುತ್ತಾರೆ ಬಿ.ಸಿ.ಪಾಟೀಲ್.
ಹತ್ತು ವರ್ಷಗಳ ಹಿಂದೆ ಭಟ್ಟರಕಚೇರಿಗೆ ಹೋಗಿ ಅವಕಾಶ ಕೇಳಿದ್ದೆ.ಆಗ ಅವರುಆಗಲ್ಲಎಂದು ಹೇಳಿ ಕಳುಹಿಸಿದ್ದರು.ಆ ಕನಸು ಈಗ ನನಸಾಗಿದ್ದು, ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆಖುಷಿಯಾಗುತ್ತಿದೆಎಂದರು ನಾಯಕಯಶಸ್‌ಸೂರ್ಯ.ಅಂದಿನ ಶೂಟಿಂಗ್‌ದಲ್ಲಿರವಿಶಂಕರ್, ಪಾಟೀಲರ ಅಳಿಯ ಸುಜಯ್‌ಬೇಲೂರು ಮುಂತಾದವರು ಭಾಗಿಯಾಗಿದ್ದರು.