ಮನರಂಜನೆಗಾಗಿಟಾಕೀಸ್ಆಪ್
ಕನ್ನಡಿಗರಿಂದಕನ್ನಡಿಗರಿಗಾಗಿಎಂದು ಹೇಳಿಕೊಂಡಿರುವ ಹೊಸ ‘ಟಾಕೀಸ್’ ಆಪ್‌ಉದ್ಯಮಿ ಹಾಗೂ ನಿರ್ಮಾಪಕರತ್ನಾಕರ್‌ಕಾಮತ್‌ಅವರ ಸ್ವಯಂಪ್ರಭ ಸಂಸ್ಥೆ ಮೂಲಕ ಸಿದ್ದಗೊಂಡಿದೆ.ಸದರಿಆಪ್‌ನ್ನು ಶಿವರಾಜ್‌ಕುಮಾರ್ ಲೋಕಾರ್ಪಣೆ ಮಾಡಿದರು.ಇದೇಸಂದರ್ಭದಲ್ಲಿಮಾತನಾಡಿಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು.ನಾನು ಈ ಹೊಸ ತಂತ್ರಜ್ಘಾನಕ್ಕೆಒಗ್ಗಿಕೊಂಡಿದ್ದೇನೆ.
ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸೀರೀಸ್ ನೋಡಿದ್ದೇನೆ. ಮಗಳು ನಿರ್ಮಿಸಿರುವ ವೆಬ್ ಸೀರೀಸ್ ಸಹ ಸದ್ಯದಲ್ಲೆಇದೇಟಾಕೀಸ್‌ನಲ್ಲಿ ಬರಲಿದೆ.ಮುಂದೆ ನಾನು ಕೂಡಒಂದು ವೆಬ್ ಸೀರೀಸ್ ನಿರ್ಮಿಸಿ ನಟಿಸಲಿದ್ದೇನೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು.ಅಂದಹಾಗೆಇದರಲ್ಲಿಧಾರವಾಹಿ, ಕಿರುಚಿತ್ರ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಿನಿಮಾಗಳನ್ನು ವೀಕ್ಷಿಸಬಹುದು.
ಇದಕ್ಕೆತಗಲುವ ವೆಚ್ಚ ವರ್ಷಕ್ಕೆ ೩೬೫.ಅಂದರೆ ದಿನಕ್ಕೆ ಒಂದುರೂಪಾಯಿ ಮಾತ್ರ.ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮನರಂಜನೆ ನೀಡಲುಯೋಜನೆ ಹಾಕಲಾಗಿದೆ.ಕಾರ್ಯಕ್ರಮದಲ್ಲಿ ಲಕ್ಷೀರತ್ನಾಕರ್, ಗಣೇಶ್‌ರತ್ನಾಕರ್‌ಕಾಮತ್, ನಟ ಹರೀಶ್‌ರಾಜ್ ಮುಂತಾದವರು ಉಪಸ್ತಿತರಿದ್ದರು.