Cinebazzar.Press Meet

Sunday, May 01, 2022

239

ನಿರ್ಮಾಪಕರಿಗೆ ಅನುಕೂಲವಾಗುವ ಸಿನಿಬಜಾರ್ಓಟಿಟಿ

ನಿರ್ಮಾಪಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ಸಿನಿಬಜಾರ್’ ಓಟಿಟಿ ಪ್ಲಾಟ್‌ಫಾರಂತೆರೆದುಕೊಂಡಿದೆ. ನಟ,ನಿರ್ಮಾಪಕಉಮೇಶ್‌ಬಣಕಾರ್ ಮತ್ತು ಭಾಸ್ಕರ್‌ವೆಂಕಟೇಶ್‌ಜಂಟಿಯಾಗಿ ಸೇರಿಕೊಂಡು ಹುಟ್ಟುಹಾಕಿರುವ ಹೊಸ ಓಟಿಟಿಯನ್ನು ಮೊನ್ನೆ ನಡೆದಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್ ಮಾತನಾಡಿ ಭಾಸ್ಕರ್‌ವೆಂಕಟೇಶ್ ಸುಮಾರು ದಿನಗಳಿಂದ ಈ ಪ್ರಯತ್ನ ಮಾಡುತ್ತಿದ್ದಾರೆ.ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ ಬರಬೇಕು.ಇದರಲ್ಲಿಎಲ್ಲಾ ವ್ಯವಹಾರವು ಪಾರದರ್ಶಕವಾಗಿದೆ.ಯಾರೂ ಬೇಕಾದರೂ ವೀಕ್ಷಿಸಬಹುದು.ನಿಜಕ್ಕೂಒಂದು ಒಳ್ಳೆ ಪ್ರಯತ್ನ.ಶುಭವಾಗಲಿ ಎಂದರು.

ಓಟಿಟಿಅನ್ನೋದು ಈ ತರಹಇರುತ್ತದೆಅನ್ನೋದುಗೊತ್ತಾಗಿದ್ದೇ ಭಾಸ್ಕರ್‌ಅವರಿಂದ.ಈಗ ಅವರೇಒಂದು ಹೊಸ ಆಪ್‌ನ್ನುಡೆವಲಪ್ ಮಾಡಿದ್ದಾರೆ.ಇದು ನಿರ್ಮಾಪಕರಿಗತುಂಬಾನೆ ಸಹಕಾರಿಯಾಗುತ್ತದೆ.ಅತ್ಯಂತಕಡಿಮೆ ವೆಚ್ಚದಲ್ಲಿಜನರುತಮಗೆ ಬೇಕಾದ ಸಿನಿಮಾವನ್ನು ನೋಡಬಹುದಾಗಿದೆ.ಬೇರೆಓಟಿಟಿದಲ್ಲಿ ತಿಂಗಳ ಅಥವಾ ವಾರ್ಷಿಕಚಂದಾ ಪಾವತಿಸಬೇಕೆಂದು ನಿರ್ಮಪಕರ ಸಂಘದಅಧ್ಯಕ್ಷ ಪ್ರವೀಣ್‌ಕುಮಾರ್ ಹೇಳಿದರು.

ಇದರಕುರಿತಂತೆ ಮಾಹಿತಿ ನೀಡಿದ ಭಾಸ್ಕರ್‌ಆಂಡ್ರಾಯ್ಡ್ ಮೊಬೈಲ್, ಟಿವಿಗಳಲ್ಲಿ ಅಲ್ಲದೆ ಲ್ಯಾಪ್‌ಟ್ಯಾಪ್‌ಗಳಲ್ಲೂ ಸಹ ಹೊಸ ಹೊಸ ಕನ್ನಡ ಚಿತ್ರಗಳನ್ನು ಯಾವುದೇಜಾಹಿರಾತುಇಲ್ಲದೆವೀಕ್ಷಿಸಬಹುದು.ಚಿತ್ರಮಂದಿರದಲ್ಲಿ ನೋಡಲು ಅವಕಾಶ ಸಿಗದೆ ಹೋದಾಗಅಂತಹ ಸಿನಿಮಾಗಳನ್ನು ನಮ್ಮಲ್ಲಿ ನೋಡಬಹುದು.ಪ್ರಪಂಚದ ೧೭೭ ದೇಶಗಳಲ್ಲೂ ಇದರಆಪ್ ಲಭ್ಯವಿದೆಎಂಬುದಾಗಿ ತಿಳಿಸಿದರು.ನಿರ್ದೇಶಕ ನಾಗಣ್ಣ, ನಟ ಶ್ರೀನಗರಕಿಟ್ಟಿ, ರವಿಶ್ರೀವತ್ಸ, ಜಟ್ಟಗಿರಿರಾಜ್ ಸೇರಿದಂತೆಅನೇಕರುಇಂತಹ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,