Cutting Shop.Film Press Meet

Wednesday, May 04, 2022

223

 

*ಮೇ 20ಕ್ಕೆ ಹೊಸಬರ ಕಟ್ಟಿಂಗ್ ಶಾಪ್ ಟ್ರೇಲರ್ ರಿಲೀಸ್... ಹೇಗಿದೆ ಟ್ರೇಲರ್ ಝಲಕ್?*

 

 

ಕ್ಯಾಚಿ ಟೈಟಲ್, ವಿಭಿನ್ನ ಕಾನ್ಸೆಪ್ಟ್ ಇಟ್ಕೊಂಡು ತಯಾರಾಗಿರುವ ಕಟ್ಟಿಂಗ್ ಶಾಪ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕಟ್ಟಿಂಗ್ ಶಾಪ್ ಮೇ 20ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್  ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಕಹಳೆ ಮೊಳಗಿಸಿದೆ. ವಿಶೇಷ ಅಂದ್ರೆ ಎಡಿಟರ್ ಗಳ ಅಮೃತ ಹಸ್ತದಿಂದಲೇ ಈ ಟ್ರೇಲರ್ ಅನಾವರಣಗೊಂಡಿದೆ.

 

 

ನಿರ್ದೇಶಕ ಪವನ್ ಭಟ್ ಮಾತನಾಡಿ, ಸಿನಿಮಾ ಮಾಡೋದು ಎಷ್ಟೂ ಮುಖ್ಯವೂ. ಅದೇ ರೀತಿ ಸಿನಿಮಾ ತಲುಪಿಸುವುದು ದೊಡ್ಡ ಕೆಲಸ. ಮೇ 20ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪ್ರತಿಯೊಬ್ಬರು ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದರು.

 

ಚಿತ್ರದ ನಾಯಕ ಕೆಬಿ ಪ್ರವೀಣ್ ಮಾತನಾಡಿ, ಕಾಲೇಜ್ ನಲ್ಲಿದ್ದಾಗ ಕಥೆ ರೆಡಿ ಮಾಡಿದ್ದು, ಇಲ್ಲಿ ಹೀರೋಯಿಸಂಗಿಂತ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಮುಖ್ಯತೆ ಇದೆ ಎಂದರು.

 

*ಮೇ.12ಕ್ಕೆ ಸಾಂಗ್ ರಿಲೀಸ್*

 

ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಕಟ್ಟಿಂಗ್ ಶಾಪ್ ಸಿನಿಮಾದಕ್ಕೆ ರ್ಯಾಪರ್ ಆಲ್ ಓಕೆ ಸ್ಪೆಷಲ್ ಸಾಂಗ್   ವೊಂದನ್ನು ಹಾಡಿದ್ದು , ಆ ಹಾಡು ಮೇ 12ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಂಕಲನಕಾರ ಜೀವನವನ್ನು ಹಾಸ್ಯಮಯವಾಗಿ ಚಿತ್ರೀಕರಿಸಿರುವ ಕಟ್ಟಿಂಗ್ ಶಾಪ್ ಸಿನಿಮಾಗೆ ನಿರ್ದೇಶಕ ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪವನ್, ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್, ಅಳಿದು ಉಳಿದವರು, ರಾಂಚಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರನಾಗಿ, ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದಾರೆ.  ಮೊದಲ ಬಾರಿ ಕಟ್ಟಿಂಗ್ ಶಾಪ್ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್, ಸಿನಿಮಾಗೆ  ಚಿತ್ರಕಥೆ , ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

 

 

ತಮ್ಮದೇ ಕಿಕಿ ಯೂಟ್ಯೂಬ್ ಚಾನೆಲ್ ನ ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ, ಆಪರೇಷನ್ ಅಲಮೇಲಮ್ಮ, ಮಯಾ ಬಜಾರ್ ಸಿನಿಮಾಗಳಲ್ಲಿ ಸಣ್ಣದೊಂದು ಪಾತ್ರಗಳಲ್ಲಿ ನಟಿಸಿದ್ದ ಪ್ರವೀಣ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಕಥೆ ಬರೆದು ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

 

ಯಂಗ್ ಥಿಂಕರ್ಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ ಉಮೇಶ್ ಮತ್ತು ಗಣೇಶ್ ಐತಾಳ್ ಸಿನಿಮಾ ನಿರ್ಮಾಣ ಮಾಡಿದ್ದು, ಉಮೇಶ್, ನಿರ್ಮಾಣದ ಜೊತೆಗೆ ಕಾಮಿಡಿ ಪಾತ್ರವನ್ನೂ ನಿರ್ವಹಿಸಿದ್ದಾರೆ

 

ಅರ್ಚನಾ ಕೊಟ್ಟಿಗೆ, ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಕೆ ವಿ ಆರ್, ದೊರೈ ಭಗವಾನ್  , ಓಂ ಪ್ರಕಾಶ್ ರಾವ್, ವತ್ಸಲಾ ಮೋಹನ್ ತಾರಾಗಣದಲ್ಲಿದ್ದಾರೆ. ಸ್ಕಂದ ರತ್ನಂ ಛಾಯಾಗ್ರಹಣ, ಸಾಗರ್‌ ಗಣೇಶ್‌ ಸಂಕಲನ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,