ಇಪ್ಪತ್ತೋಂದು ಘಂಟೆಗಳಲ್ಲಿ ನಡೆಯುವಥ್ರಿಲ್ಲರ್ಚಿತ್ರ
ಡಾಲಿಧನಂಜಯ್ ಸದ್ದಿಲ್ಲದೆ ‘ಟ್ವೆಂಟಿಒನ್ ಹವರ್ಸ್’ ಎನ್ನುವಚಿತ್ರವನ್ನು ಮುಗಿಸಿದ್ದಾರೆ. ಸುದ್ದಗೋಷ್ಟಿಯಲ್ಲಿ ಮಾತನಾಡುತ್ತಾಇದರಕುರಿತಂತೆ ಪೋಸ್ಟ್ ಹಾಕಿದಾಗಯಾವಗ್ಯಾಪ್ನಲ್ಲಿ ಈ ಸಿನಿಮಾ ಮಾಡಿದ್ದೀರಾ?ಅಂತ ಗೆಳಯರು ಕೇಳಿದರು.ಮೊದಲ ಲಾಕ್ಡೌನ್ ನಂತರ ಮಾಡಿರುವಚಿತ್ರಇದಾಗಿದೆ.ಮಲೆಯಾಳಿ ಹುಡುಗಿಯೊಬ್ಬಳ್ಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ.ಆಕೆಯ ಹುಡುಕಾಟದ ಸುತ್ತ ಸಿನಿಮಾವು ಸಾಗುತ್ತದೆ.ನಾನು ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕರ್ನಾಟಕ ಮತ್ತು ಕೇರಳದಲ್ಲಿ ನಡೆಯುವುದರಿಂದಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಂಭಾಷಣೆಇರುತ್ತದೆ.ಆದರೆಕರ್ನಾಟಕದಲ್ಲಿ ಪೂರ್ತಿಕನ್ನಡದ ಡೈಲಾಗ್ಗಳು ಇರಲಿದೆ.ಒಳ್ಳೆಯ ತಂಡ ಸಿಕ್ಕಿದ್ದರಿಂದ ಅಭಿನಯಿಸಿದ್ದೇನೆ ಎಂದರು.
ಕರ್ನಾಟಕದವನುಆಗಿದ್ದರೂ ಸದ್ಯ ಕೇರಳದಲ್ಲಿದ್ದೇನೆ. ಜಾಹಿರಾತುಗಳನ್ನು ನಿರ್ದೇಶಿಸಿದ್ದು, ಕನ್ನಡದಲ್ಲಿಆಕ್ಷನ್ಕಟ್ ಹೇಳಿರುವುದು ಪ್ರಥಮಅನುಭವ. ಇಪ್ಪತ್ತೋಂದು ಘಂಟೆಗಳಲ್ಲಿ ನಡೆಯುವ ಸೆಸ್ಪೆನ್ಸ್, ಥ್ರಿಲ್ಲರ್ಕಥೆಯಲ್ಲಿ ಹಲವು ವಿಶೇಷತೆಗಳು ಇದೆ.ಧನಂಜಯ್ ನಿರ್ದೇಶಕರ ನಟ. ಅವರಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ.ದುರ್ಗಾಕೃಷ್ಣ, ಸುದೇವ್ನಾಯರ್, ರಾಹುಲ್ಮಾಧವ್ ಮುಂತಾದವರು ನಟಿಸಿದ್ದಾರೆಂದು ಸಿನಿಮಾದಕುರಿತಂತೆ ಮಾಹಿತಿಯನ್ನುಜೈಶಂಕರ್ಪಂಡಿತ್ ನೀಡಿದರು.ಬಾಲಕೃಷ್ಣ, ಎನ್.ಎಸ್.ಅಭಿಷೇಕ್ರುದ್ರಮೂರ್ತಿ, ಸುನಿಲ್ಗೌಡ ಹಾಗೂ ಪ್ರವೀಣ್ಮಹದೇವ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ರುಪರ್ಟ್ಫರ್ನಾಂಡೀಸ್ ಸಂಗೀತ, ತಿರುನವುಕ್ಕರಸುಛಾಯಾಗ್ರಹಣ,ರಿಚರ್ಡ್.ಕೆವಿನ್ ಸಂಕಲನ, ಸುಕೃತ್.ವಿ.-ಡಿ.ವಿ.ಬಾಲಸುಬ್ರಮಣ್ಯ ಸಂಭಾಷಣೆಇದೆ. ಅಂದ ಹಾಗೆ ಚಿತ್ರವು ಮೇ ೨೦ರಂದು ರಾಜ್ಯಾದ್ಯಂತತೆರೆಕಾಣುತ್ತಿದೆ.