Mahabali.Film Press Meet

Thursday, May 05, 2022

741

ಹೊಸ ತಂಡದಿಂದ ಮಹಾಬಲಿ

ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್‌ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ ‘ಮಹಾಬಲಿ’ ಎನ್ನುವಚಿತ್ರಕ್ಕೆಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವಜತೆಗೆ ಮಾಲಸಾಂಭಕಂಬೈನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಗುರುವಾರರೇಣುಕಾಂಬ ಸ್ಟುಡಿಯೋದಲ್ಲಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ವ್ಯಾಪಾರದೊಂದಿಗೆಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು.ಗೆಳಯ ಆರ್ಯಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು.ಅದರ ಪರಿಣಾಮವೇಚಿತ್ರ ಬರಲುಕಾರಣವಾಯಿತು.ಅಪ್ಪಟ್ಟಕುಟುಂಬಸಮೇತ ನೋಡಬಹುದಾದಕಥೆಇರಲಿದೆ.

ಇಂದಿನ ಪ್ರಪಂಚದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿದೆ.ಆತನಿಗೆಅವನದೇಆದಂತಹ ಸೀಮಿತ ಕುಟುಂಬ ಇರುತ್ತದೆ.ಅಂಥಒಂದುಕುಟುಂಬದ ಮೌಲ್ಯವುಯಾವ ಮಟ್ಟಕ್ಕೆ ಹೋಗ್ತಾ ಇದೆ.ಅದರಅರ್ಥ, ನಿಬಂದನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಸಾರಾಂಶವಾಗಿದೆ.ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಹಿರಿಯ ಪುತ್ರ ಪೃಥ್ವಿರಾಜ್‌ನನ್ನು ನಾಯಕನಾಗಿ ಪರಿಚಯಿಸಿದ್ದೇನೆ. ವೈಯಕ್ತಿಕಕಾರಣದಿಂದ ನಾಯಕಿ ಮಾನ್ವಿತರಾಜ್ ಬಂದಿಲ್ಲ.ರಥಸಪ್ತಮಿಅರವಿಂದ ಹೊರತುಪಡಿಸಿ ಮಿಕ್ಕವರೆಲ್ಲೂ ಹೊಸಬರು.ಎಲ್ಲರಿಗೂತರಭೇತಿ ನೀಡಿಕ್ಯಾಮಾರ ಮುಂದೆ ನಿಲ್ಲಿಸಿರುವೆ. ಐವತ್ತು ಲಕ್ಷ ಸಿನಿಮಾಗೆಖರ್ಚುಆಗಿದೆ.ಸೆನ್ಸಾರ್‌ನವರುಯುಎ ಪ್ರಮಾಣ ಪತ್ರ ನೀಡಿದ್ದಾರೆ.ಕರೋನದಿಂದ ಬಿಡುಗಡೆ ಮಾಡುವುದುತಡವಾಗಿದೆ.ಸದ್ಯದಲ್ಲೆತೆರೆಗೆತರಲುಚಿಂತನೆ ನಡೆಸಲಾಗಿದೆ.ಮಾದ್ಯಮದ ಸಹಕಾರಬೇಕೆಂದುಕೋರಿದರು.

ಕಲಾವಿದರುಗಳಾದ ವಾಸುದೇವ್‌ಆಚಾಪುರ, ಕುಳ್ಳಯೋಗೀಶ್, ನಾಯಕಿಯತಾಯಿಯಾಗಿ ಕಾಣಿಸಿಕೊಂಡಿರುವ ಪುಷ್ಪನಾಯಕ್, ಚೇತನ್‌ಶೆಟ್ಟಿ, ಅಕ್ಷರಇವರೆಲ್ಲರೂ ಅವಕಾಶ ನೀಡಿದ್ದಕ್ಕೆಥ್ಯಾಂಕ್ಸ್‌ಎಂದಷ್ಟೇ ಹೇಳಿದರು.ತಾರಗಣದಲ್ಲಿ ಸೌಪರ್ಣಿಕ, ನೂತನ್, ಯುವರಾಜ್, ಪ್ರವೀಣ್‌ರಾಜ್‌ಪುತ್ತೂರು, ಪ್ರದೀಪ್‌ಮೆಂಥೆಲ್, ಉಮೇಶ್.ಕೆ.ಎಲ್, ಆಚಾರ್ಯರಾಘು ಮುಂತಾದವರ ನಟನೆಇದೆ. ನಾಲ್ಕು ಹಾಡುಗಳಿಗೆ ರಾಜ್‌ಭಾಸ್ಕರ್ ಸಂಗೀತ, ಎರಡು ಸಾಹಸಗಳಿಗೆ ಜಾಗ್ವಾರ್‌ಸಣ್ಣಪ್ಪ, ಛಾಯಾಗ್ರಹಣರವಿ-ವಾಸು, ನೃತ್ಯಜೈಮಾಸ್ಟರ್, ಸಂಕಲನ ಕವಿತಾಬಂಡಾರಿಚಿತ್ರಕ್ಕಿದೆ. ಸಿರಿ ಮ್ಯೂಸಿಕ್ ಸಂಸ್ಥೆಯುಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,