ಭಿಕ್ಷುಕ ಹಾಡುಗಳ ಬಿಡುಗಡೆ
ವ್ಯಕ್ತಿ, ವ್ಯಕ್ತಿತ್ವ ವಿಧಿ ಇಲ್ಲದೆ ಭಿಕ್ಷಾಟನೆಗೆ ಹೋಗುವ, ಮನಸ್ಸುಕರಗುವಕಥೆಯನ್ನು ‘ಭಿಕ್ಷುಕ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಅದರಲ್ಲೂಕರೋನ ಪರಿಸ್ಥಿತಿಯಲ್ಲಿ ಇಡೀ ಪ್ರಪಂಚ ನಲುಗಿದೆ.ಇಂತಹ ಸಂದರ್ಭದಲ್ಲಿಕುಟುಂಬದಲ್ಲಿ ನಡೆದಂತ ಘಟನೆಗಳಿಂದ ಬೇಸತ್ತು ಹೊರಬಂದು ಭಿಕ್ಷೆ ಬೇಡುವ ಪರಿಸ್ಥಿತಿ ಒದಗುತ್ತದೆ.ಕಿರುಚಿತ್ರಕ್ಕೆ ಸಿದ್ದಪಡಿಸಲಾಗುತ್ತಿದ್ದು, ಕೊನೆಗೆ ಚಿತ್ರಕಥೆಯುದೊಡ್ಡದಾಗಿರೂಪುಗೊಂಡಿದ್ದರಿಂದ ಸಿನಿಮಾ ಮಾಡಲು ಪ್ರೇರಣೆಗೊಂಡಿತು.ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಬುಲ್ಲೆಟ್‌ರಾಜು ಮುಖ್ಯ ಪಾತ್ರದಲ್ಲಿಅಭಿನಯಿಸುವಜತೆಗೆ ಶ್ರೀಮತಿ ಯಶೋಧರಾಜ್‌ಕ್ರಿಯೇಶನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ.
. ಜೋಡಿಯಾಗಿ ಹಿರಿಯಕಲಾವಿದೆಜ್ಯೋತಿಮೂರೂರು ಅಭಿನಯಿಸಿದ್ದಾರೆ.ಮಗನಾಗಿ ಆನಂದ್‌ಗಣೇಶ್, ಸೊಸೆಯಾಗಿಗಾಯಿತ್ರಿ, ಇನ್ಸ್‌ಪೆಕ್ಟರ್ ಪಾತ್ರದಲ್ಲಿಯತಿರಾಜ್, ಭಿಕ್ಷುಕನಾಗಿ ಬಿರೆದಾರ್ ಉಳಿದಂತೆ ಶರತ್‌ಲೋಹಿತಾಶ್ವ, ತಬಲನಾಣಿ, ಹರೀಶ್‌ರೈ, ಶಂಖನಾದಆಂಜನಪ್ಪ ಮುಂತಾದವರು ಅಭಿನಯಿಸಿದ್ದಾರೆ.
ಒಂದರ್ಥದಲ್ಲಿ ಹಳಬರ ಮತ್ತು ಹೊಸಬರ ಸಂಗಮ ಎನ್ನಬಹುದು.ಸಂಗೀತ ಒದಗಿಸಿರುವ ಕಿರಣ್‌ವಾಗ್‌ಐದು ಹಾಡುಗಳಿಗೆ ಗುರುರಾಜಹೊಸಕೋಟೆ, ರಾಜೇಶ್‌ಕೃಷ್ಣನ್, ಮೆಹಬೂಬ್‌ಸಾಬ್‌ಧ್ವನಿ ನೀಡಿದ್ದಾರೆ. ಸಾಹಿತ್ಯಡಾ.ವಿ.ನಾಗೇಂದ್ರಪ್ರಸಾದ್, ಕವಿ ಬಿ.ಆರ್.ಬಿ.ಲಕ್ಷಣರಾವ್, ಎಸ್.ಕೆ.ವಾಲಿ ಇದರಜತೆಗೆ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ ನಾಗ್‌ಶೆಟ್ಟಿ, ಸಂಕಲನ ಸೋಮು, ನೃತ್ಯ ಸೂರಿಅವರದಾಗಿದೆ. ಚಿತ್ರವು ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.