*ಪ್ರಣವ್ ಆಡಿಯೋ ಕಂಪನಿ ಆರಂಭ.*
*ಮೊದಲ ಹೆಜ್ಜೆಯಾಗಿ "ಸಾಟರ್ಡೆ ನೈಟ್ಸ್" ಆಲ್ಬಂ ಸಾಂಗ್ ಬಿಡುಗಡೆ.*
ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಅದರದೇ ಆದ ಮಹತ್ವವಿದೆ. ಎಷ್ಟೋ ವರುಷ ಕಳೆದರೂ ಇಂಪಾದ ಹಾಡುಗಳು ಇನ್ನೂ ಗುನುಗುವಂತಿದೆ. ಅಷ್ಟೇ ಪ್ರತಿಷ್ಠಿತ ಆಡಿಯೋ ಕಂಪನಿಗಳೂ ಕರ್ನಾಟಕದಲ್ಲಿದೆ. ಜನಮನ ಗಿದ್ದಿದೆ.
ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ "ಸಾಟರ್ಡೆ ನೈಟಲಿ" ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನನಗೆ ಹಣ ಮಾಡುವ ಉದ್ದೇಶವಿಲ್ಲ. ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಷ್ಟೇ ಉದ್ದೇಶ. ನಮ್ಮ ಪ್ರಣವ್ ಆಡಿಯೋ ಕಂಪನಿಯ ಮೊದಲ ಪ್ರಯತ್ನವಾಗಿ ಈ ಆಲ್ಬಂ ಸಾಂಗ್ ಹೊರತಂದಿದ್ದೀವಿ. ಮುಂದೆ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ. ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು ಪ್ರಣವ್ ಆಡಿಯೋ ಮಾಲೀಕರಾದ ವಿರೂಪಾಕ್ಷಿ.
"ಸಾಟರ್ಡೆ ನೈಟಲಿ" ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಚಿತ್ರೀಕರಣವಾದ ಹಾಡು. ಮುಂದೆ ಚಿತ್ರ ಮಾಡುವ ಉದ್ದೇಶವಿದೆ. ಅದಕ್ಕೂ ಮುಂಚೆ ಈ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದೀನಿ. "ಇರುವುದೆಲ್ಲವ ಬಿಟ್ಟು" ಸಿನಿಮಾ ಖ್ಯಾತಿಯ ಶ್ರೀ ಹಾಗೂ ಪೂಜಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೇಯಸ್ಸ್ ಭೈರವ್ ನೃತ್ಯ ನಿರ್ದೇಶನವಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ ಎಂದು ಆಲ್ಬಂ ಸಾಂಗ್ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದರು.
ನಾನು "ಇರುವುದೆಲ್ಲವ ಬಿಟ್ಟು" ಹಾಗೂ "ಗಜಾನನ ಗ್ಯಾಂಗ್" ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಸಾಂಗ್. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ ಎಂದರು ನಾಯಕ ಶ್ರೀ.
ನಾನು ಮೂಲತಃ ಸಿವಿಲ್ ಎಂಜಿನಿಯರ್. ಹಾಡು ಬರೆಯುವುದು ನನ್ನ ಹವ್ಯಾಸ. ಅನೇಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಆಲ್ಬಂ ಸಾಂಗನ್ನು ನಾನೇ ನಿರ್ಮಾಣ ಕೂಡ ಮಾಡಿದ್ದೀನಿ ಎನ್ನುತ್ತಾರೆ ಸಿದ್ದಾರ್ಥ್.
ಈ ಆಡಿಯೋ ಕಂಪನಿ ಮಾಲೀಕರಾದ ವಿರೂಪಾಕ್ಷಿ ನನ್ನ ಸ್ನೇಹಿತರು. ಒಳ್ಳೆಯ ಉದ್ದೇಶವಿಟ್ಟುಕೊಂಡು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಇನ್ನೂ ಆಲ್ಬಂ ಸಾಂಗ್ ನ ನಿರ್ಮಾಪಕ ಸಿದ್ದಾರ್ಥ್ ಅವರ ಮಾತು ಕೇಳಿ ಸಂತೋಷವಾಯಿತು. ನಾಯಕ ಶ್ರೀ ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಉಮೇಶ್ ಬಣಕಾರ್.
ನಾಯಕಿ ಪೂಜಾ, ಸಂಗೀತ ನಿರ್ದೇಶಕ ಪ್ರೇಮ್ ಭರತ್, ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪ್ರೇಮ್ ಹೊಸ್ಮನಿ, ಪ್ರಣವ್ ಆಡಿಯೋ ಕಂಪನಿ ಬ್ಯುಸಿನೆಸ್ ಹೆಡ್ ರಶ್ಮಿತಾ ಹಾಗೂ ನೃತ್ಯ ನಿರ್ದೇಶಕ ಶ್ರೇಯಸ್ಸ್ ಭೈರವ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.