ಚಿತ್ರಮಂದಿರದಲ್ಲಿಅತ್ಯುತ್ತಮ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅತ್ಯುತ್ತಮ’ ಚಿತ್ರವನ್ನು ಬಿಎಂಎಸ್. ಸಿನಿ ಕ್ರಿಯೇಶನ್ಸ್ ಮೂಲಕ ಸುನಿತಾ.ಎಸ್.ಜೀವರಗಿ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುವಜತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ಶಿವಕುಮಾರ್.ಬಿ.ಜೀವರಗಿ. ಇವರು ಬಿಜಾಪುರಜಿಲ್ಲೆಯ ಮದಭಾವಿ ಕಡೆಯವರಾಗಿದ್ದು, ಬ್ಯುಸಿನೆಸ್ ಮಾಡುತ್ತಿದ್ದು, ಹವ್ಯಾಸಕ್ಕಾಗಿರಂಗಕರ್ಮಿಯಾಗಿ ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕರುಗಳಾದ ದೊರೆಭಗವಾನ್, ತಿಪಟೂರುರಘುಅವರಿಂದ ನಿರ್ದೇಶನ,ಸಂಕಲನ ಅಭಿನಯಕುರಿತಂತೆತರಭೇತಿ ಪಡೆದುಕೊಂಡಿದ್ದಾರೆ.
ಕುಟುಂಬವೊಂದರಲ್ಲಿ ನಡೆಯುವಕಥೆಯಲ್ಲಿ, ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ,ಪತ್ನಿಯ ನಡುವೆಧೋರಣೆಅನ್ನುವುದು ಎಂದಿಗೂ ಬರಬಾರದು. ಅದು ಬಂದಾಗ ಹೇಗೆ ಅವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತೆ. ಮುಂದೆಅದು ವಿಚ್ಚೇದನ ಹಂತಕ್ಕೂತೆಗೆದುಕೊಂಡು ಹೋಗುತ್ತದೆ. ತಂದೆತಾಯಿ ಬೇರೆಆದಾಗ ಮಕ್ಕಳ ಮನಸ್ಸುಯಾವರೀತಿ ಘಾಸಿಗೊಳಿಸುತ್ತದೆ. ಅಂತಿಮವಾಗಿಇಬ್ಬರುಒಂದಾದರೇಇಲ್ಲವೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ನಾಯಕನ ಮಾವನಾಗಿಜೈಜಗದೀಶ್, ಅತ್ತೆಯಾಗಿ ಪದ್ಮವಾಸಂತಿ, ತಂದೆಯಾಗಿಉಮೇಶ್‌ಇವರೊಂದಿಗೆ ಶಂಕರಭಟ್, ಗಣೇಶ್‌ರಾವ್‌ಕೇಸರಕರ್, ಮೀಸೆಆಂಜನಪ್ಪ, ವಿಕ್ಟರಿವಾಸು, ರಾಘವೇಂದ್ರಜೀವರಗಿ, ಶಿವಕುಮಾರ್‌ಆರಾಧ್ಯ, ಮಾಸ್ಟರ್ ಮನೋಜ್ಘಕುಡ್ಲೂರು, ಮಾಸ್ಟರ್ ವಿನಯ್‌ಹಾಸನ ಮುಂತಾದವರು ನಟಿಸಿದ್ದಾರೆ.ದಿನೇಶ್‌ಕುಮಾರ್ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ಆರ್.ಡಿ.ವಿ ಸಂಕಲನ, ನೃತ್ಯಎಂ.ಆರ್.ಕಪಿಲ್ ಅವರದಾಗಿದೆ.ಸಿನಿಮಾವು ಮೇ ೧೩ರಂದು ಬಿಡುಗಡೆಯಾಗುತ್ತಿದೆ.