Pink Note.Film Mahurtha

Wednesday, May 11, 2022

284

ದುಡ್ಡಿನ ಹಿಂದೆ ಬಿದ್ದಾಗ ಆಗುವ ಸಮಸ್ಯೆಗಳು

ಎರಡು ಸಾವಿರದ ನೋಟು ಗುಲಾಬಿ ಬಣ್ಣದಲ್ಲಿಇರುತ್ತದೆ.ಇದನ್ನುಇಂಗ್ಲೀಷ್‌ದಲ್ಲಿ ‘ಪಿಂಕ್ ನೋಟ್’ ಎಂದು ಸಂಬೋದಿಸುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ರಾಜರಾಜೇಶ್ವರಿ ನಗರದಗುಡ್ಡದ ಮೇಲಿರುವ ಶೃಂಗಗಿರಿ ಶ್ರೀ ಷಣ್ಮುಖಸ್ವಾಮಿದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನಡೆಯಿತು.ಮೊದಲ ದೃಶ್ಯಕ್ಕೆ ಡಾ.ಶ್ರೀ ಶಿವಮೂರ್ತಿ ಮುರಘಾ ಶರಣರುಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ದಾವಣಗೆರೆ ಮೂಲದರಾಜಕೀಯಧುರೀಣ ಹೆಚ್.ಆನಂದಪ್ಪಅವರುಅಮ್ಮಎಂಟರ್‌ಟೈನ್‌ಮೆಂಟ್ ಮೂಲಕ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ದಿಗಂತ್‌ಚಿತ್ರವನ್ನು ನಿರ್ದೇಶಿಸಿರುವ ರುದ್ರೇಶ್‌ಜ್ಯೋತಿಷದ ಸಲುವಾಗಿ ತಮ್ಮ ಹೆಸರನ್ನುರಕ್ಷಣ್‌ಎಂದು ನಾಮಕರಣ ಮಾಡಿಕೊಂಡಿದ್ದು ಸಿನಿಮಾಕ್ಕೆರಚನೆ,ಚಿತ್ರಕಥೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ೨೦೧೦ರಂದು ಮಂಗಳೂರುದಲ್ಲಿ ನಡೆದ ಸತ್ಯ ಘಟನೆಗಳನ್ನು ಚಿತ್ರರೂಪದಲ್ಲಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.ಹೆಣ್ಣುಮಕ್ಕಳುಅಲ್ಲಿಗೆ ಹೋದಾಗಬರುವ ತೊಂದರೆಗಳು, ಮನೆಯಲ್ಲಿದುಡ್ಡಿನಿಂದ ಏನೇನು ಆಗುತ್ತದೆಎಂಬಂತ ಅಂಶಗಳನ್ನು ಬಳಸಿಕೊಳ್ಳಲಾಗಿದೆ.

ಜಾಕಿಭಾವನಾ ಮೊದಲಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮಧ್ಯಮ ವರ್ಗದ ಹುಡುಗಿ, ಅಕ್ಕ-ತಂಗಿಯರಾಗಿಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿನಟಿಸಲಿದ್ದಾರೆ.ಅವರ ಪಾತ್ರಏನೆಂಬುದನ್ನುಗೌಪ್ಯವಾಗಿಡಲಾಗಿದೆ.ನಾಯಕ ಸದ್ಯದಲ್ಲೆಆಯ್ಕೆಯಾಗಲಿದ್ದಾರೆ.ಮಿಕ್ಕಂತೆ ಪದ್ಮಜರಾವ್, ಶ್ರೀನಿವಾಸಪ್ರಭು, ನಿಶಾ ಮುಂತಾದವರುಅಭಿನಯಿಸುತ್ತಿದ್ದಾರೆ. ಮಹಿಳಾ ಪ್ರಧಾನಕತೆಯಲ್ಲಿ ಪ್ರಶಸ್ತಿ ಮತ್ತುಕಮರ್ಷಿಯಲ್‌ಗೆ ಬೇಕಾದಸನ್ನಿವೇಶಗಳನ್ನು ಸೇರಿಸಲಾಗುತ್ತಿದೆ. ನಿರ್ದೇಶಕರು ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಚಿತ್ರಕಥೆಗೆ ಬಳಸಿಕೊಂಡಿದ್ದಾರೆ.ಚಿಕ್ಕವರಿಂದ ಹಿಡಿದುದೊಡ್ಡವರಿಗೂದುಡ್ಡಿನಅವಶ್ಯಕತೆಇರುತ್ತದೆ.ಅದರ ಹಿಂದೆ ಬಿದ್ದಾಗಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆಎಂಬುದುಚಿತ್ರದ ಸಾರಾಂಶವಾಗಿದೆ.

ಬಹುಪಾಲು ಕಥೆಯುಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದದುಬೈನರ‍್ಯಾಸೆಲ್‌ಖೈಮ್‌ದಲ್ಲಿ ಶೇಕಡಅರವತ್ತಷ್ಟುಚಿತ್ರೀಕರಣ. ಉಳಿದಂತೆ ಬೆಂಗಳೂರು, ಉಡುಪಿ,ಮಲ್ಪೆ, ಚಿಕ್ಕಮಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಡಾ.ನಾಗೇಂದ್ರಪ್ರಸಾದ್ ಬರೆದಿರುವ ಮೂರು ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸೆಲ್ವಂಮಾದಪ್ಪ, ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆಜಗದೀಶ್‌ಅವರದಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,