Dharani Mandala Madyadolage

Wednesday, May 11, 2022

267

 

" ಧರಣಿ ಮಂಡಲ ಮಧ್ಯದೊಳಗೆ" ನಿಂತ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಮತ್ತು ಸಿನಿಮಾ ಟೀಂ

ಮೊದಲ ಬಾರಿ ಮಾಧ್ಯಮದ ಮುಂದೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ತಂಡ

 

 

'ಧರಣಿ ಮಂಡಲ ಮಧ್ಯದೊಳಗೆ’ ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ. ಇದೀಗ ಇದೇ ಟೈಟಲ್ ನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಯಹಸ್ತದಿಂದ ಬಿಡುಗಡೆಯಾಗಿದ್ದ ಪೋಸ್ಟರ್ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇತ್ತೀಚೆಗಷ್ಟೆ ಬಿಡುಗಡೆಯಾದ ಹಾಡು   ಚಿತ್ರರಸಿಕರ ಮನ ಗೆದ್ದಿತ್ತು.

 

 

ಗುಳ್ಟು ಖ್ಯಾತಿಯ ನವೀನ್ ಶಂಕರ್ ಈ ಸಿನಿಮಾದ ನಾಯಕನಾಗಿ ಅಭಿನಯಿಸಿದ್ದು ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಯಶ್ ಶೆಟ್ಟಿ ,ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್,ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಶ್ರೀಧರ್ ಶಿಕಾರಿಪುರ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪೂರಿ ಜಗನ್ನಾಥ್ ಜೊತೆಗೆ ಶ್ರೀಧರ್ ಶಿಕಾರಿಪುರ ಕೆಲಸ ಮಾಡಿದ್ದರು.

 

ನವೀನ್ ಅವರು ಕಥೆ ಇಂಟ್ರೆಸ್ಟಿಂಗ್ ಆಗಿದೆ. ಆದಿ ಎಂಬ ಪಾತ್ರ ಮಾಡುತ್ತಿದ್ದೇನೆ. ಬಾಕ್ಸಿಂಗ್ ನಲ್ಲಿ ಸಾಧನೆ ಮಾಡಬೇಕೆಂಬ ಕನಸು ಅವನಿಗೆ ಇರುತ್ತೇ. ಈ ಕನಸನ್ನು ನನಸು ಮಾಡಿಕೊಳ್ಳಲು ಹೊರಡುವ ನಾಯಕನಿಗೆ  ಒಂದು ಘಟನೆಯಿಂದ ಒಂದಿಷ್ಟು ಪಾತ್ರಗಳು ಅವನ ಜೀವನದಲ್ಲಿ  ಬಂದು ಅವನ‌ ಜೀವನ ಹೇಗೆ ತಿರಿವು ಪಡೆದುಕೊಳ್ಳತ್ತದೆ ಅನ್ನೋದು ಸಿನಿಮಾ ಕಥೆ ಎಂಬು ಗುಲ್ಟು ಖ್ಯಾತಿಯ ನವೀನ್ ತಮ್ಮ ಪಾತ್ರ ಬಗ್ಗೆ ಗುಟ್ಟು ಬಿಟ್ಟುಕೊಟ್ಟರು.

ನಾನು ಇಲ್ಲಿವರೆಗೂ ಕಾಣಿಸಿಕೊಳ್ಳದ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದಲ್ಲಿ ನನ್ನನ್ನು ಬೇರೆ ರೀತಿ ತೋರಿಸಿದ್ದಕ್ಕೆ ನಿರ್ದೇಶಕ ಶ್ರೀಧರ್ ಅವರಿಗೆ ಧನ್ಯವಾದ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು. ಬೋಲ್ಡ್ ಲುಕ್ ನಲ್ಲಿ ನಟಿಸಿದ್ದು, ಈ ರೀತಿ ಪಾತ್ರ ಮಾಡೋದು ನನಗೂ ಚಾಲೆಂಜ್ ಎಂದು ಐಶಾನಿ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ಇನ್ನು ಉಳಿದಂತೆ ಯಶ್ ಶೆಟ್ಟಿ ,ಸಿದ್ದುಮೂಲಿಮನಿ,ಶಾಂಭವಿ,ಜಯಶ್ರಿ ಆರಾದ್ಯ, ಓಂಕಾರ್ ಮತ್ತು ನಿತೇಶ್ ಮಹಾನ್ ತಮ್ಮ ತಮ್ಮ ಪಾತ್ರಗಳು ವಿಭಿನ್ನವಾಗಿ ಮೂಡಿಬಂದಿದೆ ಎಂದು ಹೇಳಿಕೊಂಡಿದ್ದಾರೆ

 

ಹಾಗು ಪುಣ್ಯ ಕೋಟಿ ಕತೆಗು ನಮ್ಮ ಚಿತ್ರಕ್ಕೂ ಯಾವುದೇ ಸಂಬಂದವಿಲ್ಲ ಧರಣಿ ಮಂಡಲ ಮಧ್ಯದೊಳಗೆ ನಾವು ತೋರಿಸಲು ಹೊರಟಿರುವುದು ನಮ್ಮ ನಿಮ್ಮೆಲ್ಲರ ಕತೆ ಎಂದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಹೇಳಿಕೊಂಡಿದ್ದಾರೆ

 

ಇದೊಂದು ಹೈಪರ್ ಲಿಂಕ್ ಶೈಲಿಯ  ಕ್ರೈಂ ಡ್ರಾಮಾ ಸಿನಿಮಾವಾಗಿದ್ದು, ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್‌, ಕೆ ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಕೀರ್ತನ್‌ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ಅವರ ಸಂಗೀತ  ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,