Detective Teekshan.Film Poster

Thursday, May 12, 2022

383

ಡಿಟೆಕ್ಟೀವ್ತೀಕ್ಷ ಫಸ್ಟ್ಲುಕ್, ಮೋಷನ್ ಪೋಸ್ಟರ್ ಬಿಡುಗಡೆ

        ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ (ಪ್ಯಾನ್‌ಇಂಡಿಯಾ)ಪ್ರಿಯಾಂಕಉಪೇಂದ್ರಅಭಿನಯದ ೫೦ನೇ ಚಿತ್ರ  ‘ಡಿಟೆಕ್ಟೀವ್‌ತೀಕ್ಷ’ಎರಡು ನಿಮಿಷದಫಸ್ಟ್‌ಲುಕ್‌ನ್ನು ಪುತ್ರಆಯುಷ್‌ಉಪೇಂದ್ರ ಬಿಡುಗಡೆ ಮಾಡಿದರೆ, ರಿಯಲ್ ಸ್ಟಾರ್‌ಉಪೇಂದ್ರ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನಆಯುಷ್‌ಉಪೇಂದ್ರನ ಹುಟ್ಟಹಬ್ಬವನ್ನು ಆಚರಿಸಿಕೊಳ್ಳಲಾಯಿತು.ನಂತರ ಮಾತನಾಡಿದಉಪೇಂದ್ರಚಿತ್ರ ೫೦, ವಯಸ್ಸು ೨೦.ಎಷ್ಟು ಬೇಗ ಕಾಲ ಓಡುತ್ತಿದೆಅಂದ್ರೆ ಈಗಾಗಲೇ ೫೦ ಮುಗಿಸಿದ್ದೀರಾ.ನಾನು ೫೩ ಮುಗಿಸಿ ೫೪ರಲ್ಲಿ ಇದ್ದೇನೆ. ನನಗಿಂತ ವೇಗವಾಗಿ ಹೋಗ್ತಿದ್ದೀರಾ.ಶೀರ್ಷಿಕೆ ಚೆನ್ನಾಗಿದೆ.ಸಂಗೀತ ಪ್ರಾಮಿಸಿಂಗ್ ಆಗಿದೆ.ಗೆಟಪ್ ವಿಭಿನ್ನವಾಗಿದೆ.ತೀಕ್ಷಎಂದರೆ ಶಾರ್ಪ್. ಕಥೆನೂ ಶಾರ್ಪ್‌ಆಗಿದೆ.ಬೇಗನೆ ರಿಲೀಸ್ ಮಾಡಿ.ಕಥೆತುಂಬಾಚೆನ್ನಾಗಿ ಮಾಡಿದ್ದೀರಾಅಂತ ಹೇಳ್ತಿದ್ದರು.ಚಿತ್ರಕ್ಕೆಅದೇ ಮುಖ್ಯವಾಗಿರುತ್ತದೆ. ಏನೆಲ್ಲಾ ಬದಲಾವಣೆ ಆಗಬಹುದು.ಕ್ಯಾಮಾರ, ಮೇಕಿಂಗ್ ಬೇರೆತರಹ ಬರಬಹುದು.ಆದರೆಕಥೆಎನ್ನುವುದು ಬಹಳ ಬಹಳ ಮುಖ್ಯ. ಹಾಲಿವುಡ್‌ದಲ್ಲಿ ‘ನೋ ಟ್ರಸ್ಟ್ ಸ್ಟಾರ್, ಟ್ರಸ್ಟ್‌ಟೇಲ್’ ಎಂದು ಹೇಳಿದ್ದಾರೆ. ಅದನ್ನು ನಂಬಿಕೊಂಡು ಸಿನಿಮಾ ಮಾಡಿ.ನಿಮ್ಮ ಬರವಣಿಗೆ ಮುಖ್ಯ.ಅದನ್ನುಖಂಡಿತಚೆನ್ನಾಗಿ ಮಾಡಿರುತ್ತಿರಾಅಂತ ನಂಬಿಕೆ ಇದೆ.ಒಳ್ಳೆಯದಾಗಲಿ ಎಂದರು.

ಈ ಚಿತ್ರ ನನಗೆ ತುಂಬ ಎಮೋಷನಲ್‌ಆಗಿದೆ.ಮಗನ ಹುಟ್ಟು ಹಬ್ಬದ ಸಂಭ್ರಮ.ಕುಟುಂಬದ ಸಹಕಾರದಿಂದಇಲ್ಲಿಯವರೆಗೆ ಬಂದಿದ್ದೇನೆ. ಮದುವೆ ನಂತರ ನಟಿಸ್ತಿನಿ ಅಂದುಕೊಂಡಿರಲಿಲ್ಲ. ಮನೆ ಕಡೆಯಿಂದ ಪ್ರೋತ್ಸಾಹ ಸಿಕ್ಕಿದ್ದಕ್ಕೆ ಇಲ್ಲಿಯವರೆಗೂತಂದು ನಿಲ್ಲಿಸಿದೆ.‘ಮಮ್ಮಿ’ ಚಿತ್ರದಿಂದ ಬದಲಾವಣೆಕಂಡುಬಂತು.ಮಹಿಳೆ ಮುಖ್ಯ ಪಾತ್ರದಚಿತ್ರವನ್ನು ನಂಬಿಕೊಂಡುನಿರ್ಮಾಪಕರು ಬಂಡವಾಳ ಹೂಡಿದರು.ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದೀರಾ.ಅದರಿಂದ ನಿಮಗೆ ಪ್ರೇರಣೆ ಸಿಗುತ್ತೆ.ಮನರಂಜನೆಜತೆ ಸಂದೇಶ ಸಿಗುತ್ತದೆ.ನನಗೆ ನಟನೆತುಂಬಾ ಇಷ್ಟ.‘ಉಗ್ರಾವತಾರ’ದಲ್ಲಿಆಕ್ಷನ್‌ಇದೆ.ಅದರಂತೆಇದರಲ್ಲಿ ಬೇರೆತರಹ ಕಾಣಿಸಿಕೊಳ್ಳುತ್ತೇನೆಂದು ಪ್ರಿಯಾಂಕಉಪೇಂದ್ರ ಸಂತಸವನ್ನು ಹಂಚಿಕೊಂಡರು.

ಗಟ್ಟಿಯಾದಕಥೆಯನ್ನು ಮಾಡಿಕೊಂಡಿದ್ದೇವೆ. ಗಾಡ್‌ಫಾದರ್ ಆಗಿ ಉಪೇಂದ್ರಅವರುಇದ್ದಾರೆ.ಸಹ ನಿರ್ದೇಶಕನಾಗಿದ್ದ ನನ್ನನ್ನುಕರೆದುಚಿತ್ರ ಮಾಡುಅಂತಧೈರ್ಯತುಂಬಿದವರು ಮೇಡಂ.ಮುಂದೆ ಏನೇ ಆದರೂಅದರ ಸಂಪೂರ್ಣಕ್ರೆಡಿಟ್‌ಅವರಿಗೆ ಸಲ್ಲುತ್ತದೆ.ಆಕ್ಷನ್, ಥ್ರಿಲ್ಲರ್‌ಡಿಟೆಕ್ಟಿವ್‌ಚಿತ್ರದಲ್ಲಿ ಕೊಲೆ ಮುಂತಾದವುಇರುತ್ತದೆ.ಅದನ್ನುಹೊರತುಪಡಿಸಿ ಬೇರೆ ಮಾದರಿಯಲ್ಲಿ ಹೇಳಲು ಹೊರಟಿದ್ದೇವೆ. ಈಗಲೇ ಸಾರಾಂಶ ಹೇಳಲು ಆಗದು.ಎಲ್ಲವನ್ನುಚಿತ್ರದಲ್ಲಿ ನೋಡಿ.ಕನ್ನಡಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರೆಂದುಉಪ್ಪಿ ಸರ್ ಹೇಳಿದ್ದಾರೆ.ಅದರಂತೆ ಶೇಕಡ ೧೦೦ರಷ್ಟು ಹೊಸತನಕೊಡುತ್ತೇವೆ ಎಂಬ ಭರವಸೆಇದೆ.ತೀಕ್ಷತೆಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಅದರಂತೆಚುರುಕುತನಇರಬೇಕು.ಅದನ್ನು ಶಕ್ತಿಯಿಂದಗೆಲ್ಲೋಕೆಆಗೋಲ್ಲ. ಯುಕ್ತಿಯಿಂದಗೆಲ್ಲಬಹುದುಎಂಬುದೇತೀಕ್ಷದಒನ್ ಲೈನ್‌ಎಂದು ನಿರ್ದೇಶಕತ್ರಿವಿಕ್ರಮರಘುಒಂದಷ್ಟು ಮಾಹಿತಿಯನ್ನುತೆರೆದಿಟ್ಟರು.

ನಿರ್ಮಾಪಕ ಪುರುಷೋತ್ತಮ.ಬಿ.ಕೊಯೂರು, ಸಂಗೀತ ಸಂಯೋಜಕ ಪಿ.ರೋಹಿತ್, ಸಾಹಿತಿ ಕಿನ್ನಾಳ್‌ರಾಜ್  ಮುಂತಾದವರು ಉಪಸ್ತಿತರಿದ್ದು ಚಿತ್ರದಕುರಿತಂತೆ ಹೆಚ್ಚೇನು ಹೇಳಲಿಲ್ಲ. ಸುಂದರಕಾರ್ಯಕ್ರಮದಲ್ಲಿಉಪೇಂದ್ರ ಪೋಷಕರು, ಅಣ್ಣ, ನಟನಿರಂಜನ್‌ಸುದೀಂದ್ರ ಹಾಜರಾತಿಇತ್ತು. ಅಂದಹಾಗೆಚಿತ್ರೀಕರಣವುಜೂನ್ ಮೊದಲವಾರದಿಂದ ಶುರುವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,