Ashoka Blade.Film Press Meet

Sunday, May 15, 2022

214

ಅಶೋಕ ಬ್ಲೇಡ್ಇದುಚಿತ್ರದ ಹೆಸರು

ಗತಕಾಲದಲ್ಲಿ ‘ಅಶೋಕ ಬ್ಲೇಡ್’ ತುಂಬ ಪ್ರಸಿದ್ದಿ ಹೊಂದಿತ್ತು.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಧರ್ಮಗಿರಿ ಮಂಜುನಾಥ ಸ್ವಾಮಿದೇವಸ್ಥಾನದಲ್ಲಿ ಮಹೂರ್ತ ಆಚರಿಸಿಕೊಂಡಿತು. ಹಿರಿಯ ನಿರ್ದೇಶಕ ಪಿ.ಶೇಷಾದ್ರಿಕ್ಲಾಪ್ ಮಾಡಿದರೆ,  ಟಿ.ಎನ್.ಸೀತಾರಾಮ್ ಕ್ಯಾಮೆರಾ ಸ್ವಿಚ್ ಆನ್ ಮಾಡಿಚಿತ್ರತಂಡಕ್ಕೆ ಶುಭಹಾರೈಸಿದರು. ಆ ನಂತರ ನಾಯಕ ಸತೀಶ್‌ನೀನಾಸಂಚಿತ್ರದಕುರಿತಂತೆಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.ದಿನ ಬೆಳಗಾದರೆ ಹಲವರುಬಂದುಕಥೆ ಹೇಳುತ್ತಾರೆ.ಸ್ನೇಹಿತರ ಮೂಲಕ ದಯಾನಂದ್ ಬರೆದಿರುವ ಸುಮಾರು ೧೨೦ ಪುಟಗಳ ಪುಸ್ತಕಓದಿದಾಗಚಿತ್ರ ಮಾಡಬೇಕು ಅನಿಸಿತು.ವರ್ತಕರು ಮತ್ತುಕಾರ್ಮಿಕರ ನಡುವಿನ ಕಥೆಇದಾಗಿದೆ.ಜತೆಗೆಒಂದು ಐತಿಹಾಸಿಕ ಯುದ್ದವಿದೆ. ೧೦ ನಿಮಿಷಗಳ ಕಾಲ ಈ ಯುದ್ದತೆರೆಯ ಮೇಲೆ ಬರುತ್ತದೆ.ಸಾವಿರಜನ ಭಾಗವಹಿಸುತ್ತಾರೆ.ಒಬ್ಬ ಸೂಪರ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ.ಬಾಂಬೆ, ಉತ್ತರಖಾಂಡ ಮುಂತಾದಕಡೆಚಿತ್ರೀಕರಣ ನಡೆಯಲಿದೆ.ನಾಳೆಯಿಂದಲೇ ಶೂಟಿಂಗ್ ಶುರುವಾಗಲಿದ್ದು, ತಂಡಕ್ಕೆಜುಲೈ ತಿಂಗಳಲ್ಲಿ ಸೇರಿಕೊಳ್ಳಲಿದ್ದೇನೆ ಎಂದರು.

ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್‌ಧೋಂಡಾಳೆ ಆಕ್ಷನ್‌ಕಟ್ ಹೇಳುವುದರ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.ವರ್ಧನ್‌ಹರಿಅವರುಸತೀಶ್‌ನೀನಾಸಂಜತೆಗೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ.ಮೈಸೂರು ಸೀಮೆಯಲ್ಲಿ ೭೦ರ ದಶಕದಲ್ಲಿ ನಡೆದಘಟನೆ ಬಗ್ಗೆ ಕೇಳಿದ್ದೆ.ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಅದರವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ತಿಳಿಯಿತು.ಇದುಕನ್ನಡ ನೆಲದ ವೀರರಕಥೆ.ಯುದ್ದಎಂದರೆಯುದ್ದಭೂಮಿಅಥವಾ ಸಾಮ್ರಾಜ್ಯ ವಿಸ್ತರಣೆಯಕಥೆಯಲ್ಲ. ಎರಡು ಸಮುದಾಯಗಳ ಕುರಿತಕಥೆಇರಲಿದೆಎನ್ನುತ್ತಾರೆಕಥೆಗಾರಟಿ.ಕೆ.ದಯಾನಂದ.

ನಾಯಕಿಇನ್ನೂಆಯ್ಕೆಯಾಗಿಲ್ಲ. ಮೊದಲಬಾರಿಇನ್ಸ್‌ಪೆಕ್ಟರ್ ಆಗಿ ಕಾವ್ಯಾಶೆಟ್ಟ  ಉಳಿದಂತೆಕಲಾವಿದರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಿದೆ. ಸಂಗೀತ ಪೂರ್ಣಚಂದ್ರತೇಜಸ್ವಿ ಅವರದಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,