ಮೇರನಾಮ್ ಪೂರಿಭಾಯ್ ಮಹೂರ್ತ
ಮೂರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುವತುಮಕೂರಿನಪಿ.ಚಿರಂಜೀವನಾಯ್ಕ್ ಹೊಸ ಚಿತ್ರ ‘ಮೇರನಾಮ್ ಪೂರಿಭಾಯ್’ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.ನಂತರತಂಡವು ಮಾತಿಗೆ ಕುಳಿತುಕೊಂಡಿತು.ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬರುತ್ತಿರುವಕಾರಣಎಲ್ಲಾ ಭಾಷೆಗೆ ಹೊಂದಿಕೆಯಾಗುವಂತೆಇದೇ ಶೀರ್ಷಿಕೆಯನ್ನು ಇಡಲಾಗಿದೆ.ಅಲ್ಲದೆಕಥೆಯು ಪ್ರಾರಂಭದಲ್ಲಿ ಮುಂಬೈದಲ್ಲಿ ನಡೆದುತರುವಾಯಇಲ್ಲಿಗೆ ಬರುತ್ತದೆ.ಬೇರೆ ಸಿನಿಮಾಗಳಲ್ಲಿ ಇಲ್ಲಿಂದಅಲ್ಲಿಗೆ ಹೋಗಿ ಡಾನ್‌ಆಗುತ್ತಾರೆ.ಆದರೆ ನಮ್ಮ ಸಿನಿಮಾದಲ್ಲಿ ಮುಂಬೈನಿಂದ ಬಂದ ಹುಡುಗನೊಬ್ಬಕರ್ನಾಟಕದಲ್ಲಿರೌಡಿಯಾಗುತ್ರಾನೆಎನ್ನುವುದೇ ವಿಶೇಷ. ಮುಗ್ದನಾಗಿದ್ದಆತನುಇಲ್ಲಿಗೆ ಬಂದ ಮೇಲೆ ರಗಡ್‌ಆಗುತ್ತಾನೆ.
ಬೆಂಗಳೂರಿಗೆ ಬಂದು ಏನು ಮಾಡ್ತಾನೆ, ಹೇಗೆ ಬದಲಾವಣೆ ಗೊಳ್ತಾನೆ ಎಂಬುದನ್ನು ಹೇಳಲಾಗುತ್ತಿದೆ.ಒಟ್ಟಾರೆ ಮಾಸ್‌ಕಮರ್ಷಿಯಲ್ ಸ್ಟೋರಿಇದಾಗಿದೆ.ಕಥೆಯುಕನ್ನಡ, ಹಿಂದಿಯಲ್ಲಿ ನಡೆಯಲಿರುವುದರಿಂದಒಂದಷ್ಟು ಸಂಭಾಷಣೆಗಳು ಹಿಂದಿಯಲ್ಲಿಇರುತ್ತದೆ.ಮಡಕೇರಿ, ಚಿಕ್ಕಮಗಳೂರು, ಹೆಚ್.ಡಿ.ಕೋಟೆ, ಹಿಮಾಲಯದಲ್ಲಿಚಿತ್ರೀಕರಣವನ್ನುಎರಡು ಹಂತದಲ್ಲಿ ನಡೆಸಲುಯೋಜನೆ ಹಾಕಲಾಗಿದೆ. ಎಂ.ಎಸ್.ಉಮೇಶ್, ರಮೇಶ್‌ಪಂಡಿತ್, ಪವಿತ್ರಾಲೋಕೇಶ್, ರಮೇಶ್‌ಭಟ್ ಮುಂತಾದವರು ನಟಿಸಲಿದ್ದಾರೆಎಂಬುದಾಗಿ ನಿರ್ದೇಶಕರು ಮಾಹಿತಿ ನಿಡಿದರು.
‘ಐ೧’ ನಟಿಸಿದ್ದು ಇದೇಎರಡನೇ ಅವಕಾಶ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗನಾಗಿಕಾಲೇಜಿಗೆ ಹೋಗುವ ಮುಗ್ದ, ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅದಾದ ಮೇಲೆ ರೌಡಿಸಂಗೆ ಹೇಗೆ ಕನೆಕ್ಟ್‌ಆಗುತ್ತಾನೆಎನ್ನುವಪಾತ್ರವೆಂದು ನಾಯಕಕಿಶೋರ್ ಹೇಳಿಕೊಂಡರು.ಕಾಲೇಜು ಹುಡುಗಿಯಾಗಿ ಬೆಳಗಾಂನ ವಿದ್ಯಾನಾಗಪ್ಪಪಾಟೀಲ್ ನಾಯಕಿಯಾಗಿ ಹೊಸ ಅನುಭವ. ಆರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಪೈಕಿ ಎರಡು ಹಾಡುಗಳು ಸಿದ್ದಗೊಂಡಿದ್ದು ವಿಜಯಪ್ರಕಾಶ್, ರಾಜೇಶ್‌ಕೃಷ್ಣನ್‌ಧ್ವನಿಯಾಗಿದ್ದಾರೆ.ಛಾಯಾಗ್ರಹಣ ಕೆ.ಸಿ.ಸಿದ್ದು ಅವರದಾಗಿದೆ.