ಮಾರಕಾಸ್ತ್ರದಲ್ಲಿ ವೆಂಕಟೇಶ್ವರನ ಹಾಡು
ಹೊಸಬರ ‘ಮಾರಕಾಸ್ತ್ರ’ ಚಿತ್ರವುಶ್ರಾವ್ಯಕಂಬೈನ್ಸ್ ಲಾಂಛನದಲ್ಲಿಕೊರಟಗೆರೆ ಮೂಲದಕೋಮಲನಟರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವಗುರುಮೂರ್ತಿಸುನಾಮಿಕಥೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ.ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿರುತ್ತದೆ.ಕೆಟ್ಟದ್ದನ್ನುಕಂಡರೆ ಸಿಡಿದೇಳುವ ಅಸ್ತ್ರವೇ ಶೀರ್ಷಿಕೆ ಅಂತಕರೆಯಲಾಗುತ್ತದೆ.ಇದೇ ವಿಷಯದ ಮೇಲೆ ಚಿತ್ರವು ಸಾಗುತ್ತದೆ.ಪೂರಕಎನ್ನುವಂತೆ ‘ದೇಶದರಕ್ಷಣೆಗಾಗಿ’ ಎಂಬ ಅಡಿಬರಹವಿದೆ.ನೋಡಲು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರಂತೆಕಾಣುವಆನಂದ್‌ಆರ್ಯ ನಾಯಕನಾಗಿಎರಡನೇಅನುಭವ.
ನಾಯಕಿ ಮಾಧುರ್ಯ.
ಈಗಾಗಲೇ ಶೇಕಡ ೭೫ರಷ್ಟು ಚಿತ್ರೀಕರಣ ಮುಗಿಸಿ, ವಿಷಯ ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.ತಂಡದಿಂದಗೊಂದಲ ಉಂಟಾದಾಗ ಮಧ್ಯೆ ಪ್ರವೇಶಿಸಿದ ಬಾ.ಮ.ಹರೀಶ್, ಶಿಲ್ಪಾಶ್ರೀನಿವಾಸ್ ಬರುವಾಗಚಿತ್ರದಕುರಿತುಒಂದಷ್ಟು ವಿವರದಾಖಲು ಮಾಡಿಕೊಂಡು ಬರಬೇಕು. ಇದರಿಂದಚಿತ್ರಕ್ಕೆ ಅನುಕೂಲವಾಗುತ್ತದೆಎಂದು ಸಲಹೆ ನೀಡಿದರು.ಅಲ್ಲದೆ ನಿರ್ಮಾಪಕರೇ ಅಭಿನಯಿಸಿ ಹಾಡಿರುವ ಏಳು ನಿಮಿಷದಗೀತೆಯುಟೀಸರ್‌ನೊಂದಿಗೆತೋರಿಸಲಾಯಿತು.ಭಕ್ತನಕರೆಗೆ ಶ್ರೀನಿವಾಸ ಪ್ರತ್ಯಕ್ಷವಾಗುವ ಸನ್ನಿವೇಶವುಇದೆ.ನಿರ್ಮಾಪಕರ ಬಯಕೆಯಂತೆ ಹಾಡುಇದೆ ಹೊರತುಚಿತ್ರದಲ್ಲಿಇರುವುದಿಲ್ಲವಂತೆ.
ಸುರತ್ಕಲ್, ಮೈಸೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಆರು ಹಾಡುಗಳಿಗೆ ಸಂಗೀತ-ಸಾಹಿತ್ಯ ಮಿರಾಕಲ್‌ಮಂಜು, ಛಾಯಾಗ್ರಹಣ ಆರ್.ಕೆ.ಶಿವಕುಮಾರ್, ಸಂಕಲನ ಬಿ.ಎಸ್.ಕೆಂಪರಾಜು, ಸಾಹಸ ಮಾಸ್ ಮಾದು, ಹಿನ್ನಲೆ ಶಬ್ದ ವಿನುಮನಸು ಅವರದು.ನಿರ್ಮಾಪಕಿ ಪತಿ ನಟರಾಜ್ ಮೂರು ಗೀತೆಗಳಿಗೆ ಧ್ವನಿಯಾಗಲಿದ್ದಾರೆ.ತಾರಗಣದಲ್ಲಿ ಶಿವಪ್ರಸಾದ್, ಪುರುಷೋತ್ತಮ ಮುಂತಾದವರು ನಟಿಸುತ್ತಿದ್ದಾರೆ.