ಗಂಡ ಹೆಂಡತಿ ಸಂಬಂಧ ಪವಿತ್ರವಾದುದು
‘ದರ್ಪಣ’ ಚಿತ್ರವನ್ನು ನಿರ್ದೇಶನ ಮಾಡಿರುವಕಾರ್ತಿಕ್‌ವೆಂಕಟೇಶ್‌ಐದು ವರ್ಷಗಳ ನಂತರ ‘ಪರಿಶುದ್ದಂ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ, ಸಾಹಿತ್ಯ, ಸಂಗೀತ ಸಂಯೋಜಿಸಿ ಆಕ್ಷನ್‌ಕಟ್ ಹೇಳುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಕುಮಾರ್‌ರಾಥೋಡ್‌ಇವರೊಂದಿಗೆ ನಾಯಕ ಮಂಗಳೂರಿನ ರೋಹನ್‌ಕಿಡಿಯಾರ್‌ಬಂಡವಾಳ ಹೂಡುತ್ತಿದ್ದಾರೆ.ಸಿನಿಮಾದಚಿತ್ರೀಕರಣವು ಬಾಗಲೂರಿನಕಂಟ್ರಿಕ್ಲಬ್‌ದಲ್ಲಿ ನಡೆಯುತ್ತಿತ್ತು.ದೊಡ್ಡ ಹಾಲ್‌ನ್ನುಕ್ಲಬ್‌ಆಗಿ ಪರಿವರ್ತಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು.
ಶಾಟ್ ಓಕೆ ಆದ ಮೇಲೆ ತಂಡವು ಮಾತಿಗೆ ಕುಳಿತುಕೊಂಡಿತು. ಮೈಕ್‌ತೆಗೆದುಕೊಂಡಕಾರ್ತಿಕ್‌ವೆಂಕಟೇಶ್‌ಮಾತನಾಡಿಮಹಿಳಾ ಪ್ರಧಾನಕತೆಯಲ್ಲಿಗಂಡ ಹೆಂಡತಿ ಸಂಬಂಧ ಪರಿಶುದ್ದವಾಗಿರುತ್ತದೆ. ಇವರಿಬ್ಬರ ಸಂಬಂದದಲ್ಲಿ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ. ವಿವಾಹ ಅನ್ನುವುದು ಪವಿತ್ರವಾದ ಸಂಬಂದ.ಆಕರ್ಷಣೆ ಬೇರೆ, ಪ್ರೀತಿ ಬೇರೆಎಂಬುದನ್ನು ಸಂದೇಶದ ಮೂಲಕ ಹೇಳಲಾಗುತ್ತಿದೆ.ಮಾತಿನ ಭಾಗದ ಕೆಲಸ ಮುಗಿಸಿದೆ.ಕೃಷ್ಣಸಾರಥಿ-ಕೃಷ ಪ್ರೀತಂಛಾಯಾಗ್ರಹಣವಿದೆ.ನಾಲ್ಕು ಹಾಡುಗಳ ಪೈಕಿಒಂದುಗೀತೆಯನ್ನು‘ಕಕ’ಅಕ್ಷರದಲ್ಲಿ ಸಾಹಿತ್ಯವನ್ನುರಚಿಸಲಾಗಿದ್ದು, ಗಾಯಕ ವಿಜಯ್‌ಪ್ರಕಾಶ್‌ಧ್ವನಿ ನೀಡಲಿದ್ದಾರೆ.ಏಪ್ರಿಲ್ ೨೮ರಂದು ತೆರೆಗೆತರಲುಯೋಜನೆರೂಪಿಸಲಾಗಿದೆಎಂದು ಮಾಹಿತಿ ನೀಡಿದರು.
ಚಿತ್ರದಲ್ಲಿ ನಟಿಸುತ್ತಿರುವುದುಖುಷಿಯಾಗಿದೆಎಂದುವಿವರವನ್ನುಗೌಪ್ಯವಾಗಿಟ್ಟರುಸ್ಪರ್ಶರೇಖಾ. ಮೊದಲ ಬಾರಿ ಪೋಲೀಸ್‌ಇನ್ಸ್‌ಪೆಕ್ಟರ್‌ಆಗಿದ್ದೇನೆಂದು ದಿಶಾಪೂವಯ್ಯ ಹೇಳಿದರು.ನಾಯಕರುಗಳಾದ ಕೀರ್ತಿಕೃಷ್ಣ, ಭಾರ್ಗವ್, ಆಯುಕ್ತರಾಗಿ ಕಾಣಿಸಿಕೊಂಡಿರುವ ಯತಿರಾಜ್, ನಿರ್ಮಾಪಕನಾಗಿ ವಿಕ್ಟರಿವಾಸು, ಪೇದೆಯಾಗಿಕುರಿರಂಗ, ಮನೆ ಆಳಾಗಿ ಮೈಸೂರುರಮಾನಂದ್ ಮುಂತಾದವರು ಪಾತ್ರದ ಪರಿಚಯಮಾಡಿಕೊಂಡರು.ಸಂಕಲನ ನಿಖಿಲ್, ಸಂಭಾಷಣೆ ವಿನಯ್‌ಮೂರ್ತಿ, ಸಾಹಸ ರಾಮ್‌ದೇವ್, ನೃತ್ಯಕಿಶೋರ್‌ಅವರದು.