Yellow Board.Film Press Meet.

Tuesday, February 08, 2022

244

ಯಲ್ಲೋ ಬೋರ್ಡ್ದಲ್ಲಿಅಪ್ಪುಗೀತೆ

 ‘ಯಲ್ಲೋ ಬೋರ್ಡ್’  ರೋಮ್ಯಾಂಟಿಕ್‌ಥ್ರಿಲ್ಲರ್ ಹಾಗೂ ಸುಂದರ ಪ್ರೀತಿಕತೆಇರುವಚಿತ್ರವೊಂದುಜನರಿಗೆತೋರಿಸಲು ಸಜ್ಜಾಗುತ್ತಿದೆ.ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್ ಹಾಡಿರುವಗೀತೆ ಗಮನ ಸೆಳೆದಿದೆ. ಕರ್ನಾಟಕದ ನಾನಾ ಭಾಗಗಳು, ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರುವಕ್ಯಾಬ್,ಉಬರ್,ಓಲೋ ಡ್ರೈವರ್‌ಗಳಿಗೂ ಮನುಷ್ಯತ್ವಇರುತ್ತದೆಎಂಬುದನ್ನು ಹೇಳಿದ್ದಾರೆ. ಜವಬ್ದಾರಿಯುತಚಾಲಕನೊಬ್ಬತನ್ನ ಪ್ರೇಮಿಯ ವ್ಯಾಸಾಂಗಕ್ಕೆ ಸಹಾಯ ಮಾಡುತ್ತಿರುತ್ತಾನೆ. ಇದರ ಮಧ್ಯೆ ಕೊಲೆ ನಡೆಯುತ್ತದೆ. ಅದರಆರೋಪವನ್ನು ಚಾಲಕನ ಮೇಲೆ ಹೊರಿಸಲಾಗುತ್ತದೆ.ಆ ಸಂದರ್ಭದಲ್ಲಿ ಸಮಾಜ, ಪೋಲೀಸ್ ಇವರುಗಳನ್ನು ಯಾವರೀತಿಕಾಣುತ್ತಾರೆ. 

. ಹೆಣ್ಣು ಮಕ್ಕಳಿಗೆ ರಕ್ಷಣೆಇಲ್ಲವೆಂದು ಹೇಳುವ ಮಂದಿ ಅವರತಪ್ಪನ್ನು ನೋಡದೆ, ಕೇವಲ ಇವರನ್ನೇಗುರಿಯಾಗಿಸುವುದುಯಾವ ನ್ಯಾಯ.

ಕೊಲೆಗೆ ಕಾರಣವೇನುಎಂಬುದನ್ನು ಚಾಲಕರುಗಳ ಸಹಾಯದೊಂದಿಗೆಅದನ್ನು ಭೇದಿಸುತ್ತಾನೆ. ನಾವುಗಳು ಮನಸ್ಸು ಮಾಡಿದರೆ ಸಮಾಜವನ್ನು ಹತೋಟಿತಂದು, ಬದಲಾವಣೆ ಮಾಡಬಹುದುಎಂದು ಹೇಳಲಾಗಿದೆ.ಜೊತೆಗೆ ನಮ್ಮದು, ನಮ್ಮತನದಘರ್ಷಣೆ, ಹಾಸ್ಯ, ಮನರಂಜನೆಇವೆಲ್ಲವುಸನ್ನಿವೇಶಗಳಲ್ಲಿ ಮಿಳಿತವಾಗಿದೆ. ಚಾಲಕನಾಗಿ ಪ್ರದೀಪ್ ನಾಯಕ.ಮಧ್ಯಮವರ್ಗದ ಹುಡುಗಿಯಾಗಿಅಹಲ್ಯಸುರೇಶ್ ನಾಯಕಿ.ತಾರಗಣದಲ್ಲಿ ಸ್ನೇಹಖುಷಿ, ಮೋನಿಕಾ, ಸಾಧುಕೋಕಿಲ, ಭವಾನಿಪ್ರಕಾಶ್, ಅಮಿತ್, ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಶ್ರೀನಿವಾಸ್ ಮತ್ತು ಬಾಂಬೆ,ಚೆನ್ನೈರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಕತೆಗೆ ಪೂರಕವಾಗಿಸಿಲಿಕಾನ್ ಸಿಟಿಯು ಒಂದು ಪಾತ್ರವಾಗಿ ಕಾಣಿಸಿಕೊಳ್ಳುವುದು ವಿಶೇಷ.

ಬೆಂಗಳೂರು,ಮೂಡಿಗೆರೆ, ಗೋಕರ್ಣ ಸುಂದರ ತಾಣಗಳಲ್ಲಿ ಕ್ಯಾಮಾರ ಸುತ್ತಾಡಿದೆ. ತ್ರಿಲೋಕ್‌ರೆಡ್ಡಿ ನಿರ್ದೇಶಕರಾಗಿಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.ಚೇತನ್‌ಕುಮಾರ್, ಡಾ.ನಾಗೇಂದ್ರಪ್ರಸಾದ್, ಗೌಸ್‌ಪೀರ್ ಮತ್ತು ವಿಶ್ವಜಿತ್ ಸಾಹಿತ್ಯದಐದು ಹಾಡುಗಳಿಗೆ ಅದ್ವಿಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರವೀಣ್, ಸಂಕಲನ ಗಿರಿಮಹೇಶ್, ಸಾಹಸ ಮಾಸ್‌ಮಾದಅವರದಾಗಿದೆ. ಮೈಸೂರಿನಉದ್ಯಮಿಗೌತಂ ವಿಂಟೇಜ್ ಫಿಲಿಂಸ್ ಮುಖಾಂತರಚಿತ್ರಕ್ಕೆಬಂಡವಾಳ ಹೂಡಿರುವುದು ಪ್ರಥಮ ಪ್ರಯತ್ನ.

 

Copyright@2018 Chitralahari | All Rights Reserved. Photo Journalist K.S. Mokshendra,