Navilugari.Film Audio Rel

Wednesday, February 09, 2022

317

ನವಿಲುಗರಿ ಹಾಡುಗಳ ಸಮಯ

ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ನವಿಲುಗರಿ’ ಚಿತ್ರದಧ್ವನಿಸಾಂದ್ರಿಕೆಯನ್ನು ಪ್ರೊ.ದೊಡ್ಡರಂಗೇಗೌಡ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡಿ ಹಾಡುಗಳು ಚೆನ್ನಾಗಿ ಮೂಡಿಬಂದಿದೆ.ಜನರುಇಷ್ಟಪಡುವ ಸಿನಿಮಾ ಮಾಡಿದಾಗ ಮಾತ್ರ ನಿರ್ಮಾಪಕರಿಗೆ ಹಣ ಬರುತ್ತದೆ. ಅಂತಹುದೇಕಥೆಇದರಲ್ಲಿಇದೆಯೆಂದು ನಂಬಿದ್ದೇನೆ. ಚಿತ್ರರಂಗಕ್ಕೆ ಹೊಸಬರು ಬರಬೇಕು. ಆವಾಗಲೇ ಹೊಸ ಹೊಸ ಅವಿಷ್ಕಾರಗಳು ಬರುತ್ತವೆಎಂದುಅಭಿಪ್ರಾಯಪಟ್ಟರು.

ಈ ಹಿಂದೆಎರಡು ಚಿತ್ರಗಳನ್ನು ನಿರ್ಮಾಣ ಮಾಡಿದಅನುಭವವಿದೆ. ಹಾಕಿದ ಬಂಡವಾಳ ವಾಪಸ್ಸು ಬರುವುದಕ್ಕೆ ನಿರ್ಮಾಪಕರುಓಟಿಟಿ ಮೊರೆ ಹೋಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂಬುದು ಸಿಬಿಐ ಪಾತ್ರ ನಿರ್ವಹಿಸಿರುವ ನೆ.ಲ.ನರೇಂದ್ರಬಾಬು ಮಾತಾಗಿತ್ತು.

ವೃತ್ತಿಯಲ್ಲಿ ವಕೀಲ, ಪ್ರವೃತ್ತಿ ಬಣ್ಣದಲೋಕ.ಅದಕ್ಕೆಂದೆ ‘ನವಿಲುಗರಿ’ ಸಿನಿಮಾಕ್ಕೆಕಥೆ,ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ವಕೀಲ ವೃತ್ತಿಯಲ್ಲಿ ನೋಡಿದಂತ ಕೇಸ್‌ಗಳನ್ನು ಬಳಸಿಕೊಂಡು ಸ್ಕ್ರೀನ್‌ಪ್ಲೆ ಬರೆಯಲಾಗಿದೆ.ನನ್ನ ಬೆಂಬಲಕ್ಕೆ ಪತ್ನಿ ಸಾರಿಕಾ ನಿರ್ಮಾಣ ಮಾಡಿದ್ದಾರೆ. ಒಳ್ಳೆಯ ಹಾಡುಗಳನ್ನು ನೀಡಿರುವ ಪೀಟರ್.ಎಂ.ಜೋಸಫ್‌ಅನಾರೋಗ್ಯಕಾರಣ ನಿಧನರಾಗಿರುವುದುದುಖ:ದ ವಿಷಯ. ಗಾಯಕ ಟಿವಿ ಸಂಗೀತ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ತನ್ನದೆತಂಡ ಕಟ್ಟಿಕೊಳ್ಳುತ್ತಾನೆ. ಮುಂದೆತಂಡದಲ್ಲಿ ಒಬ್ಬಳ ಕೊಲೆಯಾಗುತ್ತದೆ.ತನಿಖೆ ಶುರುವಾಗಿರಾಜಕೀಯತಿರುವು ಪಡೆದುಕೊಳ್ಳುತ್ತದೆ. ಕೇಸ್ ಸಿಬಿಐಗೆ ವರ್ಗವಾಗುತ್ತದೆ.ಅಷ್ಟರಲ್ಲಿಎರಡನೇಕೊಲೆಯಾಗುತ್ತದೆ.ಸಿಬಿಐ ಅಧಿಕಾರಿಚೆಸ್‌ಆಟಗಾರನಾಗಿದ್ದು, ಇವರ ಮಾತುಎರಡರ್ಥಕೊಡುತ್ತದೆ.ಕೊನೆಗೆ ಚಾಣಾಕ್ಷತನದಿಂದಅಪರಾಧಿಯನ್ನುಕಂಡುಹಿಡಿಯುವಲ್ಲಿಹೇಗೆ ಸಪಲರಾಗುತ್ತಾರೆಎನ್ನುವುದುಒಂದು ಏಳೆಯ ಸಾರಾಂಶವಾಗಿದೆಎಂದುಆನಂದ್ ಮಾಹಿತಿ ಹಂಚಿಕೊಂಡರು.

 

ಕೋಟೆಪ್ರಭಾಕರ್ ಹೊರತುಪಡಿಸಿ ನಾಯಕಿರಾಗಿಣಿಸೇರಿದಂತೆಉಳಿದಕಲಾವಿದರುಗೈರುಹಾಜರಿದ್ದರು.ಛಾಯಾಗ್ರಹಣಕಿರಣ್‌ಗಜಾ, ಸಾಹಿತ್ಯ ವೇಣುಕೃಷ್ನ, ಸಂಕಲನ ಕುಮಾರ್, ಸಾಹಸ ಚಂದ್ರುಬಂಡೆಅವರದು. ಕಾರ್ಯಕ್ರಮದಲ್ಲಿಕಾರ್ಪೋರೇಟರ್ ದೀಪಾನಾಗೇಶ್, ವಾಸವಿ ಸಂಘದ ಪದಾದಿಕಾರಿಗಳು ಉಪಸ್ತಿತರಿದ್ದರು.ಶ್ರೀ ವಿಘ್ನೇಶ್‌ಕ್ರಿಯೇಶನ್ಸ್ ಮೂಲಕ ತಯಾರಾಗಿರುವಚಿತ್ರವುಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆಇದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,