ಅತ್ಯುತ್ತಮಧ್ವನಿಸಾಂದ್ರಿಕೆ ಬಿಡುಗಡೆ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅತ್ಯುತ್ತಮ’ ಚಿತ್ರದಧ್ವನಿಸಾಂದ್ರಿಕೆಯುಚಾಮುಂಡೇಶ್ವರಿ ಸ್ಟುಡಿಯೋದಲ್ಲಿಅನಾವರಣಗೊಂಡಿತು. ಶಿವಗಂಗೆಯ ಮಲಯ ಶಾಂತಮುನಿ ಶಿವಚಾರ್ಯ ಮಹಾಸ್ವಾಮಿಗಳು ಟ್ರೇಲರ್‌ಗೆ ಚಾಲನೆ ನೀಡಿದರು. ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಶಾಸಕ ಎಸ್.ಕೆ.ಪಾಟೀಲ್, ಎನ್.ಎಂ.ಸುರೇಶ್, ಬಾ.ಮ.ಹರೀಶ್, ಮುಂತಾದವರು ಉಪಸ್ತಿತರಿದ್ದರು. ಬಿಎಂಎಸ್. ಸಿನಿ ಕ್ರಿಯೇಶನ್ಸ್ ಮೂಲಕ ಸುನಿತಾ.ಎಸ್.ಜೀವರ್ಗಿ ನಿರ್ಮಾಣ ಮಾಡಿದ್ದು, ಪುಷ್ಟಲತಾಕುಡ್ಲೂರು ಹಾಗೂ ವೀಣಾಶ್ರೀನಿವಾಸ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಕಥೆ,ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುವಜತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ಶಿವಕುಮಾರ್‌ಜೀವರ್ಗಿ.
ಕುಟುಂಬವೊಂದರಲ್ಲಿ ನಡೆಯುವಕಥೆಯಲ್ಲಿ, ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ,ಪತ್ನಿಯ ನಡುವೆಧೋರಣೆಅನ್ನುವುದು ಎಂದಿಗೂ ಬರಬಾರದು. ಅದು ಬಂದಾಗ ಹೇಗೆ ಅವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತೆ. ಮುಂದೆಅದು ವಿಚ್ಚೇದನ ಹಂತಕ್ಕೂತೆಗೆದುಕೊಂಡು ಹೋಗುತ್ತದೆ. ತಂದೆತಾಯಿ ಬೇರೆಆದಾಗ ಮಕ್ಕಳ ಮನಸ್ಸುಯಾವರೀತಿ ಘಾಸಿಗೊಳಿಸುತ್ತದೆ. ಅಂತಿಮವಾಗಿಇಬ್ಬರುಒಂದಾದರೇಇಲ್ಲವೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ನಾಯಕನ ಮಾವನಾಗಿಜೈಜಗದೀಶ್, ಅತ್ತೆಯಾಗಿ ಪದ್ಮವಾಸಂತಿ, ತಂದೆಯಾಗಿಉಮೇಶ್‌ಇವರೊಂದಿಗೆ ಶಂಕರಭಟ್, ಗಣೇಶ್‌ರಾವ್‌ಕೇಸರಕರ್, ಮೀಸೆಆಂಜನಪ್ಪ, ಶಿವಕುಮಾರ್‌ಆರಾಧ್ಯ, ಮಾಸ್ಟರ್ ಮನೋಜ್ಘಕುಡ್ಲೂರು, ಮಾಸ್ಟರ್ ವಿನಯ್‌ಹಾಸನ ಮುಂತಾದವರು ನಟಿಸಿದ್ದಾರೆ.ದಿನೇಶ್‌ಕುಮಾರ್ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣವಿದೆ. ಸೆನ್ಸಾರ್‌ಆಗಿದ್ದು, ಚಿತ್ರವನ್ನುಏಪ್ರಿಲ್ ತಿಂಗಳಲ್ಲಿ ತೆರೆಗೆತರಲುಯೋಜನೆರೂಪಿಸಲಾಗಿದೆ.