ಗೆಲುವಿನ ಹಾದಿಯಲ್ಲಿ ಲವ್ ಮಾಕ್ಟೇಲ್-೨
‘ಲವ್ ಮಾಕ್ಟೇಲ್-೨’ ಚಿತ್ರದಟಿಕೆಟ್‌ನ್ನು ಬ್ಲಾಕ್‌ದಲ್ಲಿಖರೀದಿಸಿದೆಎಂದು ನಾಯಕ ಕಂ ನಿರ್ದೇಶಕಡಾರ್ಲಿಂಗ್ ಕೃಷ್ಣ ಹೇಳಿದರು.ಚಿತ್ರದ ಸಕ್ಸಸ್ ಮೀಟ್‌ದಲ್ಲಿ ಮಾತನಾಡುತ್ತಾಜನರ ಪ್ರತಿಕ್ರಿಯೆ ಹೇಗಿದೆಅಂತ ತಿಳಿಯಲು ಚಿತ್ರಮಂದಿರಕ್ಕೆ ಹೋಗಿದ್ವಿ. ಹೌಸ್‌ಫುಲ್ ಬೋರ್ಡ್ ಬಿದ್ದಿತ್ತು. ಬೇರೆದಾರಿಯಿಲ್ಲದೆ ಹೂ ಮಾರುವವಳ ಬಳಿ ಹೆಚ್ಚಿಗೆದುಡ್ಡುಕೊಟ್ಟುಟಿಕೆಟ್ ಪಡೆಯಲಾಯಿತು.ಹಿಂದಿನ ಚಿತ್ರವು ೭ ವಾರಗಳಲ್ಲಿ ಗಳಿಕೆಯನ್ನು ಕಂಡಿತ್ತು.ಭಾಗ-೨ ಮೂರೇ ದಿನದಲ್ಲಿ ಫಲಿತಾಂಶವನ್ನು ತೋರಿಸಿದೆ.೨೦೦ ರಷ್ಟು ಚಿತ್ರಮಂದಿರಗಳಲ್ಲಿ ಚಿತ್ರವು ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಮೈಸೂರುಒಂದರಲ್ಲೇ ೪೬ ಪರದೆಗಳಲ್ಲಿ ಷೋ ನಡೆಯುತ್ತಿರುವುದುಖುಷಿಯಾಗಿದೆ.ಡಬ್ಬಿಂಗ್ ಹಕ್ಕುಗಳನ್ನು ಯಾರಿಗೂ ನೀಡಿಲ್ಲ.
. ಬದಲಿಗೆರಿಮೇಕ್ ಹಕ್ಕು ನೀಡುತ್ತಿವಿ. ತೆಲುಗುರಿಮೇಕ್‌ಗೆರೆಡಿಇದೆ. ತಮಿಳು, ಮರಾಠಿ, ಬೆಂಗಾಲಿ ಭಾಷೆಗಳಿಗೆ ರಿಮೇಕ್‌ಗೆ ಬೇಡಿಕೆ ಬಂದಿದೆಎಂದರು.
ಕರ್ನಾಟಕ ಮಾತ್ರವಲ್ಲ. ಪುಣೆ, ಗೋವಾ ಮೊದಲಾದಡೆಚಿತ್ರಮಂದಿರ ಭರ್ತಿಯಾಗುತ್ತಿದೆ. ವಿದೇಶಗಳಿಂದಲೂ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಬಂದಿದೆಅಂತಾರೆ ನಟಿ,ನಿರ್ಮಾಪಕಿ ಮಿಲನಾನಾಗರಾಜ್. ಕಲಾವಿದರುಗಳಾದ ರಾಚೆಲ್‌ಡೇವಿಡ್, ಖುಷಿ, ಅಭಿಲಾಷ್, ರವಿಸೀತಾರಾಂ, ಛಾಯಾಗ್ರಾಹಕ ಶ್ರೀಕ್ರೇಜಿಮೈಂಡ್ಸ್, ಸಂಗೀತ ಸಂಯೋಜಕ ನಕುಲ್‌ಅಭಯಂತರ್ ಮುಂತಾದವರು ಸಂತಸವನ್ನು ಹಂಚಿಕೊಂಡರು.