ಬೆಟ್ಟದದಾರಿ ಮಕ್ಕಳ ಚಿತ್ರ
ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂರಾಜಕೀಯದಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ‘ಬೆಟ್ಟದದಾರಿ’ ಎನ್ನುವ ಮಕ್ಕಳ ಸಿನಿಮಾದಕತೆಯು ನೀರಿನದ್ದೆಆಗಿದೆ.ಕಾಲ್ಪನಿಕ ಬರದಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ.ಇದಕ್ಕೆಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡುಚಾಣಾಕ್ಷತನದಿಂದಇದಕ್ಕೆ ಪರಿಹಾರಕಂಡುಹಿಡಿದುಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳುಇದನ್ನು ಹೇಗೆ ನಿಭಾಯಿಸುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ರಚನೆ,ಚಿತ್ರಕತೆ, ಸಂಭಾಷಣೆಬರೆದಿರುವಮಾ.ಚಂದ್ರುಆಕ್ಷನ್‌ಕಟ್ ಹೇಳಿದ್ದಾರೆ.ಮೂಕಹಕ್ಕಿ ನಿರ್ಮಾಣ ಮಾಡಿದ್ದಚಂದ್ರಕಲಾ.ಟಿ.ಆರ್‌ಸಹೋದರ ಮಂಜುನಾಥ್.ಹೆಚ್.ನಾಯಕ್‌ಅವರೊಂದಿಗೆಜಂಟಿಯಾಗಿಬಂಡವಾಳ ಹೂಡಿದ್ದಾರೆ.
ಮಾ.ನಿಶಾಂತ್.ಟಿ.ರಾಠೋಡ್, ಅಲೋಕ್, ವಿಘ್ನೇಶ್‌ಭರಮಸಾಗರ, ಸೋಮನಾಥ, ಶಾಶ್ವತಿ ಸೇರಿದಂತೆ ಹದಿನಾಲ್ಕು ಮಕ್ಕಳು, ಇವರುಗಳೊಂದಿಗೆ ಹಿರಿ ಕಲಾವಿದರಾದರಮೇಶ್‌ಭಟ್, ಬ್ಯಾಂಕ್‌ಜನಾರ್ಧನ್, ಉಮೇಶ್ ಉಳಿದಂತೆಮೈಸೂರುಮಲ್ಲೇಶ್, ರಿಕ್ಕಿ, ಮಂಜುಳಾರೆಡ್ಡಿ, ಅಂಜಲಿ,ಆನಂದ್ ಮುಂತಾದವರು ನಟಿಸಿದಾರೆ. ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಮತ್ತು ಪತ್ರಕರ್ತ ವಿಜಯಭರಮಸಾಗರ ವಿರಚಿತಒಟ್ಟು ನಾಲ್ಕು ಗೀತೆಗಳಿಗೆ ವೀರ್‌ಸಮರ್ಥ್ ಸಂಗೀತ ಸಂಯೋಜನೆಇದೆ.ಛಾಯಗ್ರಹಣ ನಂದಕುಮಾರ್, ಸಂಕಲನ ಅರ್ಜುನ್, ನೃತ್ಯಕಂಬಿರಾಜ್‌ಅವರದಾಗಿದೆ. ಬಿಜಾಪುರ, ಕುಂದಾಪುರದ ಕಮಲಶಿಲೆ ಗುಹೆಯಲ್ಲಿಒಟ್ಟು ೩೨ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಪ್ರಚಾರದ ಸಲುವಾಗಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ,ಟ್ರೇಲರ್‌ನ್ನುತೋರಿಸಲಾಯಿತು. ಹೀರಾಲಾಲ್ ಮೂವೀಸ್ ಮುಖಾಂತರ ಸಿದ್ದಗೊಂಡಿರುವ ಸಿನಿಮಾವು ವಿತರಕ ವಿಜಯ್ ಮುಖಾಂತರಅತಿ ಶೀಘ್ರದಲ್ಲೆ ತೆರೆಕಾಣಲಿದೆ.