ಮಹಿಳಾ ಪ್ರಧಾನಚಿತ್ರ ಲೀಸ
ಹುಡುಗರ ಬ್ರಹ್ಮಚಾರಿಜೀವನ ಹೇಗಿರುತ್ತದೆಂದುಎಲ್ಲರಿಗೂ ತಿಳಿದಿದೆ. ಅದೇ ಹುಡುಗಿಯರ ಬ್ಯಾಚುಲರ್ ಲೈಫುಯಾವರೀತಿಇರುತ್ತದೆಂದು ‘ಲೀಸ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಪ್ರಚಾರದ ಮೊದಲ ಹಂತವಾಗಿರೇಣುಕಾಂಬ ಸ್ಟುಡಿಯೋದಲ್ಲಿಚಿತ್ರದಟ್ರೇಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು.ಅದರಲ್ಲೂ ತಪಸ್ವಿ ಬರೆದಿರುವ ‘ಅಮ್ಮ’ ಕುರಿತಾದಗೀತೆಯು ಮನಸ್ಸನ್ನುಕದಡುತ್ತದೆ.ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಮುತ್ತು. ಪಾರ್ವತಿತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್‌ಅಡಿಯಲ್ಲಿ ಆಳಂದ ಮೂಲದರಾಜಕೀಯಧುರೀಣ ಸೂರ್ಯಕಾಂತ್.ಕೆ.ಕೋರಳ್ಳಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ದೇವಿಶ್ರೀ, ಮುತ್ತು, ದಯಾನಂದಹಾಗೂಅವಿನಾಶ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಬದುಕಿನಲ್ಲಿ ಪ್ರತಿಯೊಬ್ಬರಿಗೂಅವ್ಯವಸ್ಥೆ (ಡಿಸ್‌ಆರ್ಡರ್) ಎನ್ನುವುದುಇರುತ್ತದೆ.ಅದೇರೀತಿ ಮಹಿಳಾ ಪ್ರಧಾನಕಥಾ ನಾಯಕಿ ಲೀಸಇಂತಹುದಕ್ಕೆ ಒಳಗಾಗಿರುತ್ತಾಳೆ.ಹಾಗಂತಇದನ್ನು ಖಾಯಿಲೆ ಎನ್ನಲು ಆಗುವುದಿಲ್ಲ. ಈ ತರಹದ ಗುಣವುಳ್ಳವರು ದುಶ್ಚಟಗಳಿಗೆ ಯಾವರೀತಿ ವ್ಯಸನಿಗಳಾಗುತ್ತಾರೆ.ಅದರಿಂದ ಅವರುಗಳು ಏನೇನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.ಕೊನಗೆ ವೈದ್ಯರ ಸಲಹೆ ಪಡೆದುಕೊಂಡುಯಾವರೀತಿ ಹೊರಗಡೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಐವರು ಹುಡುಗಿಯರ ಸುತ್ತ ಸಿನಿಮಾವು ಸಾಗುತ್ತದೆ.ನಿರ್ದೇಶಕರುಇದಕ್ಕಂದೆ ಸಂಶೋಧನೆ ನಡೆಸಿ, ಅದರಲ್ಲಿ ಸಿಕ್ಕಂತ ವಿಷಯಗಳನ್ನು ಬಳಸಿಕೊಂಡು, ಕಾಲ್ಪನಿಕಕಥೆಯನ್ನು ಸೃಷ್ಟಿಸಿದ್ದಾರೆ.
ಮುಖ್ಯ ಪಾತ್ರದಲ್ಲಿರೂಪನಟರಾಜ್‌ಇವರೊಂದಿಗೆ ಶ್ರಾವ್ಯಗಣಪತಿ, ಮೇಘನಾರಾಮ್, ತೇಜಸ್ವಿನಿ, ಪಾರ್ವತಿ, ತಾಯಿಯಗಿ ಮಂಜುಳಾರೆಡ್ಡಿ, ಉಳಿದಂತೆ ಸಂಗೀತ, ನಿಸರ್ಗ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ಎಸ್.ಆರ್.ಪ್ರಭು-ಸುರೇಂದ್ರನಾಥ್ ಸಂಗೀತ, ಸಿನಿಟೆಕ್‌ಸೂರಿ ಛಾಯಾಗ್ರಹಣ, ಜ್ಘಾನೇಶ್ ಸಂಕಲನ, ಹಿನ್ನಲೆ ಶಬ್ದ ಅನಿಲ್.ಸಿ.ಜೆ, ನೃತ್ಯ ಕಲೈ-ಭೂಷಣ್, ಕಾಸ್ಟ್ಯೂಮ್‌ಡಿಸೈನರ್ ಲಕ್ಷೀಕೃಷ್ಣ ನಿರ್ವಹಿಸಿದ್ದಾರೆ. ಬೆಂಗಳೂರು ಮತ್ತು ಬೀದರ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಸೆನ್ಸಾರ್‌ನಿಂದ ಮೆಚ್ಚುಗೆ ಪಡೆದುಕೊಂಡಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.