Naragunda Bandaaya.Film Press Meet

Tuesday, February 22, 2022

212

ನರಗುಂದ ಬಂಡಾಯಮರುಬಿಡುಗಡೆಗೆ ದಿನಗಣನೆ

‘ನರಗುಂದ ಬಂಡಾಯ’ ಚಿತ್ರವೊಂದುಮಾರ್ಚ್ ೧೩ ೨೦೨೦ರಂದು ೨೫೦ ಪರದೆಗಳಲ್ಲಿ ಬಿಡುಗಡೆಗೊಂಡಿತ್ತು.ಆದರೆಕರೋನಕಾರಣದಿಂದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.ಈಗ ಮತ್ತೆಜನರಿಗೆತೋರಿಸಲು ಸಜ್ಜಾಗಿದೆ.ವೀರಪ್ಪನ ಪಾತ್ರದಲ್ಲಿ ಪುಟ್ಟಗೌರಿಧಾರವಾಹಿ ಖ್ಯಾತಿಯರಕ್ಷ್ ನಾಯಕನಾಗಿ ಹಿರಿತೆರೆಗೆರೂಪಾಂತರಗೊಂಡಿದ್ದಾರೆ.ಇವರ ಪತ್ನಿಯಾಗಿ ಶುಭಪೂಂಜಾ ನಾಯಕಿ.ರೈತರ ಸಮಸ್ಯೆಯನ್ನು ಬಿಂಬಿಸುವ ಚಿತ್ರದಲ್ಲಿ ಸರ್ಕಾರವು ೨೫೦೦ ಕಂದಾಯ ಪಾವತಿಸಬೇಕೆಂದುಆದೇಶ ಹೂರಡಿಸಿತ್ತು. ಆದರೆಎಕರೆಜಮೀನಿನ ಬೆಲೆ ಇದೇ  ಮೊತ್ತವಾಗಿರುತ್ತದೆ.  ಇದರ ವಿರುದ್ದ ಹೋರಾಟ ಮಾಡುವ ಸಂದರ್ಭದಲ್ಲಿ ವೀರರೈತ ಪೋಲೀಸರಗುಂಡಿಗೆ ಬಲಿಯಾಗಿದ್ದ. ವಿಷಯವನ್ನು ತಿಳಿದುಕೊಂಡಿರುವ ಆ ಭಾಗದಜನರು ಸಿನಿಮಾ  ನೋಡಲುಕಾತುರರಾಗಿದ್ದಾರೆ.

ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿರೈತ ಸಂಘದಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸಿ, ಪ್ರತಿಯೊಬ್ಬರೈತಚಿತ್ರ ನೋಡಬೇಕೆಂದು ಮನವಿ ಮಾಡುವೆನೆಂದುತಂಡಕ್ಕೆ ಶುಭ ಹಾರೈಸಿದರು.

ತಾರಗಣದಲ್ಲಿ ನೀನಾಸಂಅಶ್ವಥ್, ರವಿಚೇತನ್, ಸಾಧುಕೋಕಿಲ, ಅವಿನಾಶ್,ಭವ್ಯ, ಸಂಗೀತ, ಶಿವಕುಮಾರ್, ಸುರೇಶ್‌ರಾಜ್ ಮುಂತಾದವರು ನಟಿಸಿದ್ದಾರೆ. ನರಗುಂದ ಭಾಗದ ನಾಗೇಂದ್ರ್ರಮಾಗಡಿ ಹನ್ನೊಂದನೇಸಿನಿಮಾಕ್ಕೆಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.ರಾಮ್‌ನಾರಾಯಣ್ ಸಾಹಿತ್ಯದ ಹಾಡುಗಳಿಗೆ ಯಶೋವರ್ಧನ್‌ರಾಗ ಒದಗಿಸಿದ್ದಾರೆ.ಸಂಭಾಷಣೆಕೇಶವಾದಿತ್ಯ, ಛಾಯಾಗ್ರಹಣಆರ್.ಗಿರಿ-ಆನಂದ್.ಎಸ್.ಪಿ, ಸಾಹಸ ಕೌರವವೆಂಕಟೇಶ್-ವಿನೋಧ್, ಹಿನ್ನಲೆ ಶಬ್ದ ಧರ್ಮವಿಶ್ ಅವರದಾಗಿದೆ.ಘಟನೆ ನಡೆದ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿರುವುದು ವಿಶೇಷ. ಕತೆ-ನಿರ್ಮಾಣ ಸಿದ್ದೇಶವಿರಕ್ತಮಠ, ಇವರೊಂದಿಗೆ ಶೇಖರ್‌ಯಲುವಿಗಿ, ಬಸವರಾಜು ಪಾಲುದಾರರಾಗಿದ್ದಾರೆ. ಅಂದಹಾಗೆಚಿತ್ರವು ಮಾರ್ಚ್ ೪ರಂದು ರಾಜ್ಯದ್ಯಂತತೆರೆಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,