ನಾಲ್ಕು ಸಾವಿರ ಪರದೆಗಳಲ್ಲಿ ಜೇಮ್ಸ್
ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ಅವರಕೊನೆಯಚಿತ್ರ ‘ಜೇಮ್ಸ್’ ಮಾರ್ಚ್ ೧೭ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನುಅದ್ದೂರಿಯಾಗಿತೆರೆಗೆತರಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿಇಡೀಚಿತ್ರತಂಡವು ಪಾಲ್ಗೋಂಡಿತ್ತು.ಎಲ್ಲರೂ ಪುನೀತ್‌ಅವರ ಬಗ್ಗೆ ಭಾರವಾದ ಮನಸ್ಸಿನಿಂದ ಮಾತನಾಡಿದರು.ಶಿವರಾಜ್‌ಕುಮಾರ್ ಮಾತನಾಡುತ್ತಾ ಈಗ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಬಹಳ ಕಷ್ಟವಾಗುತ್ತಿದೆ.ಡಬ್ಬಿಂಗ್ ಮಾಡಬೇಕಾದರೆ ನನ್ನಕಂಠ ಹೊಂದಾಣಿಕೆಆಗುತ್ತೋಅಂತ ಅನಿಸಿತು. ಆತನದ್ದುತುಂಬಾಟಿಪಿಕಲ್ ವಾಯ್ಸ್, ಪ್ರಯತ್ನ ಮಾಡಿದ್ದೇನೆ. ಅಪ್ಪು ನಮ್ಮಗಳಜೊತೆ ನಮ್ಮ ಹೃದಯದಲ್ಲಿಇದ್ದಾನೆ.
ಎಲ್ಲರಿಗೂಇನ್‌ಸ್ಪೈರ್‌ಆಗಿದ್ದ.ಆತ ಅಬಿಮಾನಿಗಳ ಮನೆ ಮಕ್ಕಳ ಜೊತೆಇದ್ದಾನೆ. ಅವನನ್ನು ನಾವೆಲ್ಲರೂ ಕಳದುಕೊಳ್ಳುತ್ತಿದ್ದೇವೆ. ಅವನು ಎಂದಿಗೂ ಚಿರಂಜೀವಿಯಾಗಿರುತ್ತಾನೆಂದು ಹೇಳಿದರು.
೧೭ರಂದು ಅಪ್ಪು ಹುಟ್ಟುಹಬ್ಬವಾಗಿದ್ದರಿಂದ ಬೆಂಗಳೂರು ಸೇರಿದಂತೆ ಬಳ್ಳಾರಿಯಿಂದ ಹಿಡಿದು ಹೊಸಪೇಟೆ, ಚಿತ್ರದುರ್ಗ, ಉತ್ತರಕರ್ನಾಟಕ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಕಡೆಗಳ ಪ್ರತಿಯೊಂದುತಾಲ್ಲೂಕು ಕೇಂದ್ರಗಳಲ್ಲಿ ಬಿಡುಗಡೆ ಮಾಡಲುತಯಾರಿ ನಡೆಸಿದೆ.ಅಲ್ಲದೆ ಫ್ರಾನ್ಸ್, ಜರ್ಮನಿ, ಯರೋಪ್, ಬೆಲ್ಜಿಯಂ, ಆಸ್ಟ್ರೇಲಿಯಾಇನ್ನು ಮುಂತಾದಕಡೆ ಏಕಕಾಲಕ್ಕೆ ಒಟ್ಟಾರೆ ನಾಲ್ಕು ಸಾವಿರ ಪರದೆಗಳಲ್ಲಿ ಚಿತ್ರವುತೆರೆಕಾಣಲಿದೆ.ಚೇತನ್‌ಕುಮಾರ್ ನಿರ್ದೇಶನದಲ್ಲಿಕಿಶೋರ್‌ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ.