Target.Film Pooja.News

Thursday, March 10, 2022

557

 

*ಕಂಠೀರವದಲ್ಲಿ "ಟಾರ್ಗೆಟ್” ಚಿತ್ರಕ್ಕೆ ಚಾಲನೆ.*

 

 *ಇದು ಈಗಿನ ಜನರೇಶನ್ ಕಥೆ*

 

 ಮೋಹನ್‌ರೆಡ್ಡಿ ,  ಸುಬ್ಬಾರೆಡ್ಡಿ  ಹಾಗೂ ಮಧು ಬಾಬು ಅವರ ನಿರ್ಮಾಣದ "ಟಾರ್ಗೆಟ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.

  

      ಆರ್‌ಜಿವಿ, ಪೂರಿ ಜಗನ್ನಾಥ್‌ರಂಥ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಪ್ರಥಮಚಿತ್ರ ಟಾರ್ಗೆಟ್. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕಿರುತೆರೆ ಹಾಗೂ ಹಿರಿತೆರೆ ನಟ ರವಿಕಿರಣ್ ಆರಂಭ ಫಲಕ ತೋರಿದರು.

 

ಹೆಸರಾಂತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ, ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡಿರುವ ರವಿವರ್ಮ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.

 

 

ಹಿರಿಯನಟ ರವಿಕಿರಣ್ ಅವರಪುತ್ರ ಪ್ರೇಮ್‌ಕಿರಣ್, ವಿಜಯ ಕಾರ್ತೀಕ್ ಹಾಗೂ ಸಚಿನ್ ಪುರೋಹಿತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಸಾಕ್ಷಿರಾಜ್, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

 

 ಡ್ರಗ್ ಮಾಫಿಯಾ, ಯುವತಿಯರ ಮೇಲೆ ನಿರಂತರ ನಡೆಯುತ್ತಿರುವ ಶೋಷಣೆಯಂಥ ಪ್ರಮುಖ  ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾದ ಚಿತ್ರಕಥೆ ಹೆಣೆಯಲಾಗಿದೆ.

    

ಮುಹೂರ್ತದ ನಂತರ ನಿರ್ದೇಶಕ ರವಿವರ್ಮ ಮಾತನಾಡುತ್ತ ಹಿಂದೆ ನಾನು ಕೆಲ ವೆಬ್‌ಸೀರೀಸ್‌ಗಳನ್ನು ಕೂಡ ನಿರ್ದೇಶನ ಮಾಡಿದ್ದು, ಮೊದಲಬಾರಿಗೆ ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ. ಈ ಥರದ ಕಾನ್ಸೆಪ್ಟ್ ಇದುವರೆಗೆ ನನಗೆ ತಿಳಿದ ಹಾಗರ ಬಂದಿಲ್ಲವೆಂದೇ ಹೇಳಬಹುದು, ಈಗಿನ ಜನರೇಷನ್ ಯಾವರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಹೇಗೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ, ಹೆಣ್ಣಿನ ಮೇಲೆ ಚಿಕ್ಕ ವಯಸಿನಲ್ಲಿ ನಡೆದ ಶೋಷಣೆ ಮುಂದೆ ಯಾವರೀತಿ ಪ್ರಭಾವ ಬೀರುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಟಾರ್ಗೆಟ್ ಚಿತ್ರದಲ್ಲಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ವಿವರಿಸಿದರು.

ಈ ಹಿಂದೆ ವಾಹಿನಿಯೊಂದರ ನಿರೂಪಕಿಯಾಗಿದ್ದ ಸಾಕ್ಷಿರಾಜ್ ಮಾತನಾಡಿ ಹುಡುಗಿಯರ ಮೇಲೆ ಚಿಕ್ಕ ವಯಸ್ಸಿಂದಲೂ ಒಂದಲ್ಲ ಒಂದುರೀತಿ ಒತ್ತಡವಿದೆ. ಆಕೆ ಸದಾ ಶೋಷಣೆ ಎದುರಿಸುತ್ತಲೇ ಬಂದಿದ್ದಾಳೆ, ಆಕೆಯ ಮೇಲೇ ಯಾಕೆ ಈ ರೀತಿ ಆಗುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದರು.

 

ನಟ ಪ್ರೇಮಕಿರಣ್ ಮಾತನಾಡಿ, ಈ ಚಿತ್ರದಲ್ಲಿ ಗೌತಮ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲರ ಮೇಲೂ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಕಥೆಯೇ ಹೀರೋ, ಚಿಕ್ಕ ವಯಸಿನಲ್ಲಿ ನಾವು ಹೇಗೆ ಬೆಳೆಯುತ್ತೇವೋ ಅದೇರೀತಿ ಮುಂದೆ ನಮ್ಮ ಮೈಂಡ್‌ಸೆಟ್ ಕೂಡ ಇರುತ್ತದೆ ಎಂದು ನಿರ್ದೇಶಕರು  ಚಿತ್ರದಲ್ಲಿ ಹೇಳುತ್ತಿದ್ದಾರೆ. ಈಗಾಗಲೇ ಪರಿವರ್ತನ, ಪ್ರೀತ್ಸೋಣ ಮತ್ತೊಮ್ಮೆ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದು, ಇದು ನನ್ನ ೩ನೇ ಚಿತ್ರ ಎಂದರು.

 

  ನೆಗೆಟಿವ್‌ಶೇಡ್ ಇರುವ ಪಾತ್ರ ಮಾಡಿರುವ ವಿಜಯ್ ಕಾರ್ತೀಕ್ ಮಾತನಾಡುತ್ತಾ ನಾನು ಅಭಿನಯಿಸುತ್ತಿರುವ ಐದನೇ ಚಿತ್ರವಿದು, ಸತ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

 

 ನಾಯಕಿ ಸಹರ್‌ಕೃಷ್ಣನ್ ಮಾತನಾಡಿ ನನಗೂ ಕೂಡ ಇದು ೪ನೇ ಚಿತ್ರ. ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ, ಮಾಡೆಲಿಂಗ್‌ನಿಂದ ಸಿನಿಮಾಗೆ ಬಂದಿದ್ದೇನೆ ಎಂದರು. 

 

ಮತ್ತೊಬ್ಬ  ನಾಯಕಿ ಮೇಘಶ್ರೀ ಮಾತನಾಡಿ ಈ ಹಿಂದೆ ಮುಗಿಲ್‌ಪೇಟೆ ಸಿನಿಮಾದಲ್ಲಿ ಅಭಿನಯಿಸಿದ್ದೆ, ಅದರಮೂಲಕವೇ ಈ ಚಿತ್ರದ ಅವಕಾಶ ಸಿಕ್ಕಿದೆ. ಇದರಲ್ಲಿ ಲೀಡ್‌ರೋಲ್ ಮಾಡುತ್ತಿದ್ದೇನೆ ಎಂದರು.

 

ಡಾ.ವಿ.ನಾಗೇಂದ್ರಪ್ರಸಾದ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ವಿನೋದ್‌ ಬಾಲ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,