Thimmana Muttugalu.News

Tuesday, September 06, 2022

219

ವೇದಿಕೆ ಒಂದು ಕಾರ್ಯಕ್ರಮ ನಾಲ್ಕು

       ಶಿವಮೊಗ್ಗ ಮೂಲದ ಆದರ್ಶಅಯ್ಯಂಗಾರ್ ಪ್ರಸ್ತುತ ಅಮೇರಿಕಾ ನಿವಾಸಿ. ಅವರು ತನ್ನ ತಾಯ್ನಾಡಿನ ಮೇಲೆ ವಿಶೇಷ ಅಭಿಮಾನ ಹೊಂದಿದ್ದಾರೆ. ಜತೆಗೆ ಗಾಯಕರೂ ಆಗಿದ್ದು, ಈಗಾಗಲೇ ಕೆಲವು ವಿಡಿಯೋ ಆಲ್ಬಂ ಗೀತೆಗಳನ್ನು ಹಾಡಿ, ನಿರ್ಮಾಣ ಮಾಡಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಸಿದ್ದರು. ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ ಹೋಪ್ ವಿಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ರಚನೆಯ ‘ಕಾಡಿನ ನೆಂಟರು’ ಪುಸ್ತಕ ಲೋಕಾರ್ಪಣೆ ಹಾಗೂ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಶೀರ್ಷಿಕೆಯ ಪೋಸ್ಟರ್ ಅನಾವರಣ.

    ಇದೇ ಸಂದರ್ಭದಲ್ಲಿ ಮಾತನಾಡಿದ ಆದರ್ಶ್‌ಅಯ್ಯಂಗಾರ್ ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್‌ಜೋಯಿಸ್ ಜೊತೆಗೂಡಿ ವಿಡಿಯೋ ಹಾಡುಗಳನ್ನು ರಚಿಸಿ ಹೊರ ತಂದಿದ್ದೇವು. ಈಗ ಶುರು ಮಾಡಿರುವ ಶ್ರೀ ಕೃಷ್ಣ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಮೂಲಕ ಸದಭಿರುಚಿಯ ಚಲನಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶವಿದೆ. ಇದರ ಪ್ರಯತ್ನವಾಗಿ ಈಗ ‘ತಿಮ್ಮನ ಮೊಟ್ಟೆಗಳು’ ಸಿನಿಮಾವನ್ನು ನಿರ್ಮಿಸುತ್ತಿದ್ದೇನೆ ಎಂದರು.

      ಕಾಡಿನ ನೆಂಟರು ಕಥಾಸಂಕಲನದ ಒಂದು ಕಥೆಯನ್ನಿಟ್ಟುಕೊಂಡು ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ರಕ್ಷಿತ್‌ತೀರ್ಥಹಳ್ಳಿ. ಇದು ಸಹ ಪಶ್ಚಿಮಘಟ್ಟದ ಜನರ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಸದ್ಯದಲ್ಲೆ ಚಿತ್ರೀಕರಣ ಶುರು ಮಾಡಲು ಯೋಜನೆ ರೂಪಿಸಲಾಗಿದೆ. ಸಂಗೀತ ಹೇಮಂತ್‌ಜೋಯಿಸ್ ಅವರದಾಗಿದೆ.

      ಸಾಹಿತಿ ಮತ್ತು ನಿರ್ದೇಶಕ ಕವಿರಾಜ್, ನಟ ಪ್ರವೀಣ್‌ತೇಜ್, ಫ್ರೀಡಂ ಆಪ್‌ನ ಸಿ.ಎಸ್.ಸುದೀರ್, ನಿರ್ದೇಶಕ ರಾಮೇನಹಳ್ಳಿಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,