ಕಡಿಮೆ ಹಣಕ್ಕೂ ಬೆಲೆ ಇರುತ್ತದೆ
ಮಧ್ಯಮ ವರ್ಗದ ಯುವಕರಿಗೆ ಹಣದ ಅವಶ್ಯಕತೆ ಎಷ್ಟಿರುತ್ತದೆ ಎಂದು ಹೇಳುವ ಸಿನಿಮಾ ‘ರೂಪಾಯಿ’. ವಿಜಯ್‌ಜಗದಾಲ್ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್.ಎಂ ಮತ್ತು ಹರೀಶ್ ಜಂಟಿಯಾಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಕಾಮಿಡಿ, ಲವ್, ಆಕ್ಷನ್ ಹಾಗೂ ಮನರಂಜನೆ ಅಂಶಗಳು ಇರಲಿದೆ. ಐದು ಜನರ ಜೀವನದ ಹಾದಿಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಹಣದ ಹಿನ್ನಲೆಯಲ್ಲಿ ನಡೆಯುವ ಕಥೆಯು, ಎರಡು ರೂಪಾಯಿಗೂ ಬೆಲೆ ಇದೆ ಅಂತ ಹೇಳಲಾಗಿದೆ. ಕೋಟಿ ರೂ.ಗಳ ಬೆಲೆ ಹಾಗೂ ಬದುಕಿನ ಮೌಲ್ಯವನ್ನು ಸಾರುತ್ತದೆ. ಮಧ್ಯಮ ಮರ್ಗದ ಯುವಕರಿಗೆ ಹಣದ ಅವಶ್ಯಕತೆ ಎಷ್ಟಿರುತ್ತದೆ. ಅಂಥಾ ವರ್ಗದ ಐದು ಯುವಕರು ಅದನ್ನು ಪಡೆದುಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾರೆ. ಕೊನೆಗೆ ಅದು ಯಾರ ಪಾಲಾಗುತ್ತದೆ ಎನ್ನುವುದೇ ಒಂದು ಏಳೆ ಕಥೆಯಾಗಿದೆ.
ನಾಯಕಿಯಾಗಿ ಕೃಷಿತಾಪಂಡ, ಸೆಕ್ಸ್ ವರ್ಕರ್ ಆಗಿ ಚಂದನಾರಾಘವೇಂದ್ರ ಉಳಿದಂತೆ ಪ್ರಮೋದ್‌ಶೆಟ್ಟಿ, ರಾಮ್‌ಚಂದನ್, ಯಶ್ವಿಕ್ ಮುಂತಾದವರು ಅಭಿನಯಸಿದ್ದಾರೆ. ಐದು ಹಾಡುಗಳಿಗೆ ಆನಂದರಾಜಾವಿಕ್ರಮ್ ಸಂಗೀತವಿದೆ. ಚಿತ್ರದುರ್ಗ, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ‘ಚಿಲ್ರೆ ವಿಷ್ಯ ಅಲ್ಲಗುರು’ ಎಂಬ ಅಡಿಬರಹದಲ್ಲಿರುವ ಚಿತ್ರವು ನವೆಂಬರ್‌ದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.