ರಾಜ ರಾಣಿ ರೋರರ್ ರಾಕೆಟ್
‘ನಟಸಾರ್ವಭೌಮ’ದಲ್ಲಿ ಪುನೀತ್‌ರಾಜ್‌ಕುಮಾರ್, ‘ರ‍್ಯಾಂಬೋ-೨’ದಲ್ಲಿ ಶರಣ್‌ಗೆ ‘ಚುಟು ಚುಟು ಅಂತೈತೆ’ ಇನ್ನು ಮುಂತಾದ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕುಲಭೂಷಣ್ ‘ರಾಜರಾಣಿ’ ಸಿನಿಮಾದ ಮೂಲಕ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ಕಂಪೇಗೌಡ ಮಾಗಡಿ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ, ನಾಗರಾಜ್.ವಿ.ಅಜ್ಜಂಪುರ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ. ಗಿರೀಶ್, ಶರತ್‌ಕುಮಾರ್ ಸಹ ನಿರ್ಮಾಪಕರು. ನಾಲ್ಕು ಪಾತ್ರಗಳು ಸೇರಿದರೆ ಚಿತ್ರದ ಹೆಸರು ಆಗುತ್ತದೆ. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟೀಸರ್ ಬಿಡುಗಡೆ ಮಾಡಿ ಶುಭಹಾರೈಸಿರುವುದು ತಂಡಕ್ಕೆ ಶಕ್ತಿ ಬಂದಿದೆ. ರೋರರ್ ರಾಕೆಟ್ ಎಂದು ಅಡಬರಹದಲ್ಲಿ ಹೇಳಿಕೊಂಡಿದೆ.
ನಾಯಕಿಯಾಗಿ ಮಾನ್ಯ, ಹಿರಿಯ ನೃತ್ಯ ಸಂಯೋಜಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ರಣಧೀರ್, ಸಂತೋಷ್ ಮುಂತಾದವರು ಅಭಿನಯಿಸಿದ್ದಾರೆ. ಪ್ರಭು.ಎಸ್.ಆರ್-ಸುರೇಂದ್ರನಾಥ್.ಬಿ.ಆರ್ ಸಂಗೀತ, ಪ್ರಖ್ಯಾತ್-ಲಿವಿತ್-ಶ್ರೀಶ-ಆನಂದ್‌ಇಳಯರಾಜ ಛಾಯಾಗ್ರಹಣ, ಜ್ಗಾನೇಶ್‌ಮರದ್-ಪ್ರಮೋದ್ ಸಂಕಲನ ಚಿತ್ರಕ್ಕಿದೆ. ಅಂದಹಾಗೆ ಸಿನಿಮಾವು ಸೆಪ್ಟಂಬರ್ ೨೩ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.