ಪಯಣದಲ್ಲಿ ಸಾಗುವ ಅಸ್ಥಿರ
ನಿರ್ದೇಶಕ ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಸ್ಥಿರ’ ಚಿತ್ರದ ಟೀಸರ್, ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಪೋಸ್ಟರ್ ಅನಾವರಣಗೊಳಿಸಿ ತಂಡಕ್ಕೆ ಶುಭಹಾರೈಸಿದರು. ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಲಾಗಿದೆ. ತ್ರಿಕೋನ ಪ್ರೇಮ ಕಥೆಯು ಬನ್ನೂರುನಿಂದ ಕುಮುಟಾ, ಹೊನ್ನಾವರ ತನಕ ಪಯಣದಲ್ಲಿ ಸಾಗಿ ಕಾಡಿನಲ್ಲಿ ಕೊನೆಗೊಳ್ಳುವುದನ್ನು ಥ್ರಿಲ್ಲರ್, ಸೆಸ್ಪೆನ್ಸ್ ಮಾದರಿಯಲ್ಲಿ ತೋರಿಸಲಾಗಿದೆ.
ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರಮೋದ್.ಎಸ್.ಆರ್ ಆಕ್ಷನ್ ಕಟ್ ಹೇಳುವ ಜತೆಗೆ ಉಪನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹತ್ತು ವರ್ಷಗಳ ಪರಿಣತಿ ಪಡೆದುಕೊಂಡಿರುವ ಅನಿಲ್.ಸಿ.ಆರ್ ಕಥೆ ಮತ್ತು ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಹೆಸರಿನಲ್ಲಿ ಬಂಡವಾಳ ಹೂಡಿದ್ದು, ಹಾಗೂ ನಾಯಕನಾಗಿ ಬಣ್ಣ ಹಚ್ಚಿರುವುದು ಹೊಸ ಪ್ರಯತ್ನ. ಕಾಲೇಜು ಹುಡುಗಿಯಾಗಿ ಕಾವೇರಿ ನಾಯಕಿ. ಗೆಳತಿಯರಾಗಿ ಹುಬ್ಬಳಿ ಮೂಲದ ಭುವನ, ಗುಬ್ಬಿ ಕಡೆಯ ಹರಿಣಿ ಮುಂತಾದವರು ನಟಿಸಿದ್ದಾರೆ. ಕಲಾವಿದರ ಮೂಲ ಹೆಸರನ್ನು ಆಯಾ ಪಾತ್ರಕ್ಕೆ ಬಳಸಲಾಗಿದೆ.
ಸಿದ್ದುಅರಸು ಸಾಹಿತ್ಯದ ನಾಲ್ಕು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್.ಆರ್, ಸಂಕಲನ ಅಯುರ್‌ಸ್ವಾಮಿ, ಸಾಹಸ ಗಣೇಶ್ ಅವರದಾಗಿದೆ. ಕುಮುಟ, ಹೊನ್ನಾವರ, ಬನ್ನೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್‌ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು ನವೆಂಬರ್‌ದಲ್ಲಿ ತೆರೆ ಕಾಣಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಸುಂದರ ಸಮಯದಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿ ನಿತ್ಯಾನಂದಪ್ರಭು, ನಿರ್ಮಾಪಕರುಗಳಾದ ಸೆಬಾಸ್ಟಿನ್‌ಡೇವಿಡ್, ಕೆ.ಎನ್.ನಾಗೇಗೌಡ್ರು ಉಪಸ್ತಿತರಿದ್ದರು.