ನ್ಯಾನೋ ನಾರಾಯಣಪ್ಪ ಟ್ರೇಲರ್ ಬಿಡುಗಡೆ
‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ನಿರ್ದೇಶನ ಮಾಡಿದ್ದ ಕುಮಾರ್ ಈಗ ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ರಚನೆ,ಚಿತ್ರಕಥೆ,ಆಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಅನಾವರಣ ಸಮಾರಂಭ ನಡೆಯಿತು. ಇದೊಂದು ಕಾಮಿಡಿ, ಎಮೋಷನಲ್ ಡ್ರಾಮಾ ಒಳಗೊಂಡ ಚಿತ್ರವಾಗಿದ್ದು, ನೋಡುಗರನ್ನು ತುಂಬಾ ಕಾಡುವಂಥ ತಾತನ ಕಥೆಯನ್ನು ಹೇಳಲಿದ್ದಾರೆ. ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ನ್ಯಾನೋ ಕಾರು ಕೂಡ ಪ್ರಮುಖ ಪಾತ್ರವಹಿಸಿರುವುದು ವಿಶೇಷ.
ಕುಮಾರ್ ಮಾತನಾಡಿ ನನ್ನ ಹಿಂದಿನ ಎರಡು ಚಿತ್ರಗಳು ನೈಜ ಘಟನೆಗಳನ್ನು ಹೊಂದಿದ್ದು ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಇದು ಮನೆಯಲ್ಲಿ ಬಾಡಿಗೆ ಇದ್ದ ಅಜ್ಜಿ ತಾತನ ಕಥೆ ಅಲ್ಲದೆ ಸೆಕ್ಸ್‌ಟ್ಯಾಂಟ್ ಕಥೆಯನ್ನು ಹೇಳಿದ್ದೇನೆ. ಬೆಂಗಳೂರು ಸುತ್ತಮುತ್ತ ೨೫ ರಿಂದ ೩೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಸದ್ಯದಲ್ಲೆ ಹೈದರಬಾದ್‌ನಲ್ಲಿ ಅಲ್ಲಿನ ಭಾಷೆಯ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಮೂರು ತರಹದ ಬೇರೆ ಬೇರೆ ಜಾನರ್ ಹಾಡುಗಳು ಇರಲಿದೆ. ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕರೋನ ಸಮಯದಲ್ಲಿ ನಿರ್ದೇಶಕರು ಬಂದು ಒನ್ ಲೈನ್ ಹೇಳಿದರು. ನನ್ನ ಲೈಫ್‌ನಲ್ಲೇ ಪ್ರಶಾಂತ್‌ನೀಲ್, ಕುಮಾರ್ ಇವರಿಬ್ಬರನ್ನು ಎಂದೂ ಮರೆಯಲ್ಲವೆಂದು ಪಾತ್ರದ ಪರಿಚಯ ಮಾಡಿಕೊಂಡಿದ್ದು ಕೃಷ್ಣೋಜಿರಾವ್. ತಾರಗಣದಲ್ಲಿ ಶೈಲೇಶ್‌ಜೋಷಿ, ಕಿಂಗ್‌ಮೋಹನ್, ಅನಂತು, ಪ್ರಶಾಂತ್‌ಸಿದ್ದಿ, ಅಪೂರ್ವ, ಕಾಕ್ರೋಚ್‌ಸುಧಿ, ಗಿರೀಶ್‌ಶಿವಣ್ಣ ಮುಂತಾದವರು ಅಭಿನಯಿಸಿದ್ದಾರೆ. ಆಕಾಶ್‌ಪರ್ವ ಸಂಗೀತ, ಶಿವಶಂಕರ ಛಾಯಾಗ್ರಹಣ ಚಿತ್ರಕ್ಕಿದೆ. ಅಂದ ಹಾಗೆ ಸಿನಿಮಾವು ಅಕ್ಟೋಬರ್‌ದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.