Shabhash Baddimagne.News

Wednesday, October 05, 2022

159

ಪ್ರಮೋದ್ಶೆಟ್ಟಿ ಈಗ ಶಭಾಷ್ ಬಡ್ಡಿಮಗ್ನೆ

       ‘ಲಾಫಿಂಗ್ ಬುದ್ದ’ ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರಮೋದ್‌ಶೆಟ್ಟಿ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸಿನಿಮಾದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ವಿಜಯದಶಮಿ ಹಬ್ಬದಂದು ಅದ್ದೂರಿಯಾಗಿ ನಡೆಯಿತು. ನಟ ಅಜಯ್‌ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ  ಹರೀಶ್.ಸಾ.ರಾ ನಿರ್ದೇಶಕರಾಗಿ ಬಡ್ತಿಗೊಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ ಬರೆದಿರುವ ಬಿ.ಎಸ್.ರಾಜಶೇಖರ್ ಸಿನಿಮಾಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಪ್ರಕಾಶ್ ಅವರು ಪ್ರಥಮ ಅನುಭವ ಎನ್ನುವಂತೆ ಪುತ್ರ ಕಿಶನ್ ಪ್ರೊಡಕ್ಷನ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.   ‘ಅಂತ.. ಬಾಯ್ತುಂಬಾ ಹೊಗ್ಳೋದಾ? ಎಲ್ಲಾ ತೆಗ್ಳೋದಾ??’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.

೧೯೮೦ರ ಕಾಲಘಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆದಲ್ಲಿ ನಡೆದಂತ ನೈಜ ಘಟನೆಯನ್ನು ತೆಗೆದುಕೊಂಡು ಚಿತ್ರಕಥೆ ಬರೆಯಲಾಗಿದೆ. ಅದಕ್ಕಾಗಿ ಆ ಭಾಗದಲ್ಲೆ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಕಾಮಿಡಿ,ಮರ್ಡರ್ ಮಿಸ್ಟ್ರಿ, ಥ್ರಿಲ್ಲರ್ ಇರುವುದರಿಂದ ಚಿತ್ರದ ಸಾರಾಂಶವನ್ನು ತಂಡವು ಬಿಟ್ಟುಕೊಟ್ಟಿಲ್ಲ. ಫೈಟ್ ಇಲ್ಲದೆ ಇರುವುದು ವಿಶೇಷ.

     ತರಲೆ ಮಾಡುವ ಪೋಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್‌ಶೆಟ್ಟಿ, ಪತ್ನಿಯಾಗಿ ಪ್ರಿಯಾ ನಾಯಕಿ. ಇವರೊಂದಿಗೆ ರಂಗಾಯಣರಘು, ರಾಹುಲ್, ರವಿತೇಜ, ಲಕ್ಷೀಪ್ರಿಯಸಾಹು, ಮನು, ಅಜಯ್, ಮಿತ್ರ, ರೂಪ, ಸುಧಾಮಣಿ, ಇಂದಿರಮ್ಮ, ಮಮತಾರಾಜಶೇಖರ್ ತಾರಬಳಗದಲ್ಲಿದ್ದಾರೆ. ೧೬೮ ಚಿತ್ರಗಳಿಗೆ ರಾಗ ಒದಗಿಸಿರುವ ಇಳಯರಾಜ ಶಿಷ್ಯ ಕಾರ್ತಿಕ್‌ಭೂಪತಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಅಣಜಿನಾಗರಾಜ್, ಸಂಕಲನ ಪ್ರವೀಣ್‌ಬೇಲೂರು ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,