ಕನ್ನಡದ ಕಾಶ್ಮೀರ್ ಫೈಲ್ಸ್
ಮೂರು ದಶಕಗಳ ಹಿಂದೆ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಇರಲಾದ ಹಿಂದಿ ಚಿತ್ರ ‘ಕಾಶ್ಮೀರಿ ಫೈಲ್ಸ್’ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಭಯೋತ್ಪಾದಕರ ಅಟ್ಟಹಾಸ, ಕಾಶ್ಮೀರಿ ಪಂಡಿತರ ನೋವಿನ ಸುತ್ತ ಕಥೆಯನ್ನು ಹಣೆಯಲಾಗಿತ್ತು. ಸರ್ಕಾರವು ವಿಧಿ ೩೭೦ನ್ನು ಹಿಂಪಡೆಯಲಾಗಿದ್ದು, ಮತ್ತೆ ಪಂಡಿತರನ್ನು ಕಾಶ್ಮೀರಕ್ಕೆ ಕರೆದೊಯ್ಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾದರೆ ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ? ಈಗಲೂ ಉಗ್ರರ ಉಪಟಳ ಮೊದಲಿನಂತೆಯೇ ಇದೆಯಾ? ಎಲ್ಲಾ ವಿಷಯಗಳ ಕುರಿತಂತೆ ಕನ್ನಡದಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಅದಕ್ಕೆ ‘ವಿಧಿ (ಆರ್ಟಿಕಲ್)೩೭೦’ ಅಂತ ಶೀರ್ಷಿಕೆ ಇಡಲಾಗಿದೆ. ಕೆ.ಶಂಕರ್ ರಚಸಿ ನಿರ್ದೇಶನ ಮಾಡಿದ್ದಾರೆ. ಮೊನ್ನೆ ನಡೆದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕಾಶ್ಮೀರಿ ಪಂಡಿತರಾದ ಹಿರಿಯ ಪತ್ರಕರ್ತ ಆರ್.ಕೆ.ಮಟ್ಟೂ, ಮಾಜಿ ಸೈನಿಕರಾದ ಪ್ರಹ್ಲಾದ್‌ಕುಲಕರ್ಣಿ ಮುಂತಾದವರು ಹಾಜರಿದ್ದರು.
೧೯೯೦ರಲ್ಲಿ ಸುಮಾರು ೮೦೦ ರಿಂದ ೮೫೦ ಪಂಡಿತರನ್ನು ಕೊಲೆ ಮಾಡಲಾಯಿತು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಯಿತು. ನಾನು ಅದೇ ಸಮಯದಲ್ಲಿ ಬೆಂಗಳೂರಿಗೆ ಬಂದೆ. ಕನ್ನಡಿಗರು ಒಳ್ಳೆಯವರು. ನಮ್ಮನ್ನು ಚೆನ್ನಾಗಿ ನೋಡಿಕೊಂಡರು ಎಂದು ಮಟ್ಟೂ ಸ್ಮರಿಸಿಕೊಂಡರು. ಶಶಿಕುಮಾರ್, ಶ್ರುತಿ, ಶಿವರಾಮ್, ರಮೇಶ್‌ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲೈರಾ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಎಂಬಿಎ ವಿದ್ಯಾರ್ಥಿ ಭರತ್‌ಗೌಡ ನಿರ್ಮಾಣ ಮಾಡಿರುವ ಸಿನಿಮಾವು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.