ಹಾಡಿನ ಸಾಲು ಚಿತ್ರದ ಶೀರ್ಷಿಕೆ
ಶ್ರೀನಗರಕಿಟ್ಟಿ, ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಚಿತ್ರದ ‘ಸಂಜು ಮತ್ತು ಗೀತಾ’ ಹಾಡು ಜನಪ್ರಿಯವಾಗಿತ್ತು. ಈಗ ಇದೇ ಹೆಸರಿನಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಆರ್.ಕೆ.(ರಾಜು) ನಿರ್ದೇಶನದಲ್ಲಿ, ಸಂಜಯಮಾಗನೂರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ೫ ರೋಜ್ಗಳು ಒಂದೊಂದು ಕಥೆಯನ್ನು ಹೇಳುತ್ತಾ ಹೋಗುತ್ತದೆ. ಅವುಗಳ ಮಹತ್ವವನ್ನು ಹೇಳಲಾಗಿದೆ. ನಮ್ಮ ಪ್ರೀತಿಯನ್ನು ಮನೆಯವರು ಸ್ವೀಕರಿಸಬೇಕು. ನಮ್ಮನ್ನು ಸಮಾಜ ಒಪ್ಪಬೇಕು. ನಾವು ಮಾದರಿಯಾಗಬೇಕು ಎಂದು ನಿರ್ಧರಿಸಿದ ಪ್ರೇಮಿಗಳ ಕಥೆ ಇದಾಗಿರುತ್ತದೆ.
ನಾಯಕಿಯ ತಂದೆಯಾಗಿ ರಾಘವೇಂದ್ರರಾಜ್ಕುಮಾರ್, ನಾಯಕನ ತಾಯಿಯಾಗಿ ಭವ್ಯ, ಡಾ.ದೊಡ್ಡರಂಗೇಗೌಡರು ಭವ್ಯ ಅಣ್ಣನಾಗಿ, ಸ್ವಾತಿ ರಾಘಣ್ಣನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ವಿನಯ್ಕಾರ್ತಿಕ್, ಧಾರವಾಹಿಗಳಲ್ಲಿ ನೆಗಟೀವ್ ಪಾತ್ರಗಳನ್ನು ಮಾಡಿರುವ ಸನ್ಮಿತ್ರಾ ನಾಯಕಿ. ಇದರಲ್ಲಿ ಸ್ವಲ್ಪ ಬೋಲ್ಡ್ ಮತ್ತು ಕ್ಯೂಟ್ ಹುಡುಗಿಯ ಪಾತ್ರವಂತೆ. ಮಜಾಭಾರತ ಖ್ಯಾತಿಯ ರಾಘವೇಂದ್ರ ಎಂದಿನಂತೆ ಇದರಲ್ಲೂ ರಾಗಿಣಿ ಎಂಬ ಹುಡುಗಿಯಾಗಿಯೇ ನಟಿಸುತ್ತಿದ್ದಾರೆ. ಮೈಸೂರು, ಮಂಡ್ಯಾ, ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.