ಪುನೀತ್ ಹಾಡಿದ ಗೀತೆ ಬಿಡುಗಡೆ
ಸದಾ ಹೊಸಬರಿಗೆ ಪ್ರೋತ್ಸಾಹ ಕೊಡುತ್ತಿದ್ದ ಪುನೀತ್‌ರಾಜ್‌ಕುಮಾರ್ ‘ಓ’ ಚಿತ್ರದಲ್ಲಿ ಬರುವ ‘ಏನೋ ಆಗಿದೆ ಜಾದೂ ಆಗಿದೆ’ ಗೀತೆಗೆ ಧ್ವನಿಯಾಗಿದ್ದಾರೆ. ಇದೇ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾರರ್, ಥ್ರಿಲ್ಲರ್ ಜಾನರ್ ಇರಲಿದ್ದು ಮಹೇಶ್.ಸಿ.ಅಮ್ಮಲ್ಲಿದೊಡ್ಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಪ್ಪು ಅವರ ಕೈಲಿ ಹಾಡಿಸಬೇಕೆಂದು ಅವರ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ ನಮ್ಮ ಬಜೆಟ್‌ಗೆ ಒಪ್ಪದೆ, ನಿಮ್ಮಂಥವರು ನೂರಾರು ಜನ ಬರ್ತಾರೆ. ಇಷ್ಟವಾದರೆ ಹಾಡುತ್ತಾರೆಂದು ಹೇಳಿ ಕಳುಹಿಸಿದರು. ಮುಂದೆ ನೇರವಾಗಿ ಪುನೀತ್ ಸರ್ ಅವನ್ನು ಅಪ್ರೋಚ್ ಮಾಡಿ ಹಾಡಿನ ಕುರಿತು ಹೇಳಿದಾಗ ಖಂಡಿತ ಹಾಡುತ್ತೇನೆ. ಅದರಂತೆ ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಹಾಡನ್ನು ಬಿಡುಗಡೆ ಮಾಡುವಾಗ ನನಗೆ ತಿಳಿಸಿ ಬರುತ್ತೇನೆ ಅಂತಲೂ ಹೇಳಿದರು ಅಂತ ಸ್ಮರಿಸಿಕೊಂಡರು.
ಒಂದು ಮನೆಯಲ್ಲಿ ಅಕ್ಕ ತಂಗಿಯರ ಮಧ್ಯೆ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಿದೆ. ರಚಿಸಿ, ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಕಿರಣ್‌ತಲಕಾಡು ಮಾತನಾಡಿ ಸೆನ್ಸಾರ್ ಮಂಡಳಿಯವರು ಚೆನ್ನಾಗಿ ಬಂದಿದೆಯೆಂದು ಹೇಳಿದ್ದಾರೆ. ಚಿತ್ರವನ್ನು ಜನರಿಗೆ ಯಾವ ರೀತಿ ತಲುಪಿಸಬೇಕೆಂದು ಸಾಕಷ್ಟು ಪ್ಲಾನ್ ಹಾಕಿಕೊಂಡಿದ್ದೇವೆ. ಮುಖ್ಯವಾಗಿ ಚಿತ್ರದಿಂದ ಬರುವ ಲಾಭದಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ದಿಪಡಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಮಿಲನನಾಗರಾಜು ಮತ್ತು ಅಮೃತಅಯ್ಯಂಗಾರ್ ಸೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದುಮೂಲಿಮನಿ, ಸಂಗೀತ ನಟಿಸಿದ್ದಾರೆ. ಕಿರಣ್‌ರವೀಂದ್ರನಾಥ್ ಸಂಗೀತ, ದಿಲೀಪ್‌ಚಕ್ರವರ್ತಿ ಛಾಯಾಗ್ರಹಣ, ಸತೀಶ್‌ಬಾಬು ಹಿನ್ನಲೆಶಬ್ದ, ಶ್ರೀಕಾಂತ್ ಸಂಕಲನವಿದೆ. ಸಿನಿಮಾವು ನವೆಂಬರ್ ೧೧ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.