ಕೊನೆ ಹಂತದಲ್ಲಿಅಬ್ಬರ
ಮಾಸ್‌ಆಕ್ಷನ್‌ಕಥೆ ಹೊಂದಿರುವ ‘ಅಬ್ಬರ’ ಸಿನಿಮಾದಚಿತ್ರೀಕರಣವು ನಾಗರಭಾವಿಯ ಮಲೆ ಮಾದೇಶ್ವರದೇವಸ್ಥಾನದಲ್ಲಿ ನಡೆಯುತ್ತಿತ್ತು.ಬಿಡುವು ಮಾಡಿಕೊಂಡುತಂಡವು ಮಾದ್ಯಮದ ಬಳಿ ಬಂದಿತು.ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವಕೆ.ರಾಮ್‌ನಾರಾಯಣ್ ಮಾತನಾಡಿ ನಾಯಕಿಯರಾದ ನಿಮಿಕಾರತ್ನಾಕರ್, ಲೇಖಾಚಂದ್ರ, ರಾಶಿಪೊನ್ನಪ್ಪ ಇವರೆಲ್ಲರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರಜ್ವಲ್‌ದೇವರಾಜ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ೫೦ ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು ಸುತ್ತಮುತ್ತ ನಡೆಸಿ, ಕೊನೆ ದಿನದಚಿತ್ರೀಕರಣವನ್ನುಇಲ್ಲಿ ಮುಗಿಸುತ್ತಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಆದಷ್ಟು ಬೇಗನೇ ತೆರೆ ಮೇಲೆ ತರಬೇಕೆಂದು ಸಿದ್ದತೆ ಮಾಡಿಕೊಂಡಿದ್ದೇವೆ. ನಿರ್ಮಾಪಕರುಎಲ್ಲಾ ಜವಬ್ದಾರಿಗಳನ್ನು ನನ್ನ ಮೇಲೆ ಬಿಟ್ಟಿದ್ದಾರೆಎಂದರು.
ನನಗೆ ಈ ಸಿನಿಮಾತುಂಬಾ ಸ್ಪೆಷಲ್. ಒಂದೇದೃಶ್ಯದಲ್ಲಿ ಮೂರು ಪಾತ್ರಗಳನ್ನು ಮಾಡಬೇಕಿತ್ತು.ಮೂರು ಶೇಡ್‌ಅಲ್ಲದೆ ಸೂಪರ್ ಹೀರೋ ಮತ್ತೋಂದು ಬುಲ್‌ಬುಲ್ ಬಾಬಾ ಗೆಟಪ್‌ಕೂಡಇದೆ.ನಾನು ನಡೆಯುವದಾರಿ ಹೀಗೇ ಇರಬೇಕುಅಂದುಕೊಂಡಿರುತ್ತೇವೆ. ಆದರೆ ಹೋಗ್ತಾ ಹೋಗ್ತಾ ಅದು ಕಳೆದು ಹೋಗುತ್ತದೆ.ಮನುಷ್ಯಯಾವಾಗಲೂಜಾಗೃತನಾಗಿರಬೇಕುಎಂಬುದನ್ನು ಹೇಳಲಾಗಿದೆ ಎಂದು ನಾಯಕ ಪ್ರಜ್ವಲ್‌ದೇವರಾಜ್ ಮಾಹಿತಿ ಹಂಚಿಕೊಂಡರು.
ಪ್ರೊಮೋಷನ್ ಸಮಯದಲ್ಲಿಚಿತ್ರದ ವಿಶೇಷತೆಗಳನ್ನು ರಿವೀಲ್ ಮಾಡುತ್ತಾ ಹೋಗುತ್ತೇವೆ. ರವಿಶಂಕರ್‌ಎರಡು ಶೇಡ್‌ಇರುವ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.ಜುಲೈ, ಆಗಸ್ಟ್ ವೇಳೆಗೆ ರಿಲೀಸ್ ಮಾಡಲುಯೋಜನೆರೂಪಿಸಲಾಗಿದೆಎನ್ನುತ್ತಾರೆ ನಿರ್ಮಾಪಕ ಬಸವರಾಜ ಮಂಚಯ್ಯ.ಯೋಗರಾಜಭಟ್, ವಿಜಯಭರಮಸಾಗರ ಸಾಹಿತ್ಯದ ಹಾಡುಗಳಿಗೆ ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.ಜಿ.ಕೆ.ಗಣೇಶ್‌ಛಾಯಾಗ್ರಹಣ, ವೆಂಕಟೇಶ್‌ಯುಡಿವಿ ಸಂಕಲನವಿದೆ.