ನೈಜ ಘಟನೆಗಳ ಲಾಂಗ್ ಡ್ರೈವ್
ದೂರದ ಪ್ರಯಾಣದಲ್ಲಿ ಕೆಲವರು ಎದುರಿಸಬಹುದಾದ ಅನಿರೀಕ್ಷಿತ ಸನ್ನಿವೇಶಗಳ ಸುತ್ತ ಹಾಗೂ ಅನೇಕ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ‘ಲಾಂಗ್ ಡ್ರೈವ್’ ಸಿನಿಮಾದ ಟ್ರೇಲರ್‌ನ್ನು ನಟ ವಸಿಷ್ಟಸಿಂಹ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಹೊಸ ಪ್ರತಿಭೆಗಳು ಸೇರಿಕೊಂಡು ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾ ನೋಡಿದವರಿಗೆ ಇಂಥದ್ದೊಂದು ಘಟನೆಯ ಬಗ್ಗೆ ಕೇಳಿರುವ ಅಥವಾ ತಮ್ಮದೆ ಅನುಭವಕ್ಕೆ ಬಂದಿರುವಂತೆ ಅನಿಸುವಷ್ಟು ನಿರ್ದೇಶನ ಮಾಡಿರುವುದು ಶ್ರೀರಾಜ್. ಇವರ ನಂಬಿಕೆ ಮೇಲೆ ಮಂಜುನಾಥಗೌಡ ಬಂಡವಾಳ ಹೂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಾಯಕನ ಪಾತ್ರಕ್ಕೆ ಅವಕಾಶ ಪಡೆದುಕೊಂಡಿರುವ ಅರ್ಜುನ್‌ಯೋಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತರಭೇತಿ ವೈದ್ಯಳಾಗಿ ಸುಪ್ರಿತಾ, ಹೋಮ್ಲಿಲುಕ್‌ದಲ್ಲಿ ತೇಜಸ್ವಿನಿಶೇಖರ್ ನಾಯಕಿಯರು.
ವಿಕಾಸ್‌ವಸಿಷ್ಟ ಸಂಗೀತಕ್ಕೆ ರಾಜೇಶ್‌ಕೃಷ್ಣನ್, ಮಾನಸಹೊಳ್ಳ, ಸ್ಪರ್ಶ.ಆರ್.ಕೆ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕೌಶಿಕ್ ಛಾಯಾಗ್ರಹಣ, ರಾಮಿಶೆಟ್ಟಿಪವನ್ ಸಂಕಲನವಿದೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ಶಬರಿಮಂಜು, ಬಾಲರಾಜವಾಡಿ, ಮಹೇಶಗುರು, ಮೋಹನ್‌ಅನ್ನಳ್ಳಿ ಮುಂತಾದವರು ನಟಸಿದ್ದಾರೆ. ಶಿಷ್ಯ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಶುಭಹಾರೈರಲು ರವಿಶ್ರೀವತ್ಸ ಹಾಗೂ ಕರಿಸುಬ್ಬು, ಪಾನಿಪುರಿ ಕಿಟ್ಟಿ ಮೊದಲಾದವರು ಆಗಮಿಸಿದ್ದರು. ಗುಡ್ ವೀಲ್ ಪ್ರೊಡಕ್ಷನ್ ಬ್ಯಾನರ್‌ದಲ್ಲಿ ತಯಾರಾಗಿರುವ ಚಿತ್ರವು ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.