ಹೊಸ ಮಠ
ಹದಿನಾರು ವರ್ಷಗಳ ಹಿಂದೆ ‘ಮಠ’ ಎನ್ನುವ ಸಿನಿಮಾವೊಂದು ತೆರೆಕಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹಾಗಂತ ಈ ಸಿನಿಮಾಗೂ ಆ ಚಿತ್ರದ ಕಥೆಗೂ ಸಂಬಂದವಿರುವುದಿಲ್ಲ. ಇದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಹಾಸ್ಯದ ಒಳಲನ್ನು ತೋರಿಸಲಿದೆ. ಸತತ ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ತಂಡವು, ಇಪ್ಪತ್ತೈದು ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಕಥೆಗೆ ತಕ್ಕಂತೆ ಶೂಟಿಂಗ್ ನಡೆಸಿರುವುದು ವಿಶೇಷ. ಇದಕ್ಕಾಗಿ ಸರಿಸುಮಾರು ಮುನ್ನೂರು ಮಠಗಳಿಗೆ ಭೇಟಿ ನೀಡಿದೆ. ರಚನೆ ಜತೆಗೆ ನಾಯಕನಾಗಿ ಸಂತೋಷ್ ನಟಿಸಿದ್ದಾರೆ. ಕೊಡಗು ಮೂಲದ ಅಶ್ರತ್‌ಮಲ್ಲಿಂಗಡ ನಾಯಕಿ. ‘ವಾಸಂತಿ ನಲಿದಾಗ’, ‘ನೈಟ್‌ಕರ್ಫ್ಯೂ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಆಕ್ಷನ್ ಕಟ್ ಹೇಳಿದ್ದಾರೆ.
ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ಗುರುಪ್ರಸಾದ್ ಹೇಳುವಂತೆ ಒಂದು ತಿಂಗಳ ಕಾಲ ತಂಡದೊಂದಿಗೆ ಇದ್ದು, ಆರು ಸಾವಿರ ಕಿ.ಮೀ ಸುತ್ತಿದ್ದೇನೆ. ‘ಮಠ೨’ ಮಾಡಲು ನನಗೆ ಭಯ. ಆಗ ಕಾಂಗ್ರೇಸ್ ಆಡಳಿತ ಇತ್ತು. ಈಗ ಬಿಜೆಪಿ ಪಕ್ಷ ಇದೆ. ಈಗಿನ ಸವಾಲುಗಳೇ ಬೇರೆ ರೀತಿ ಇರಲಿದೆ. ಇಲ್ಲಿ ನಾನೊಬ್ಬ ಕಲಾವಿದನಷ್ಟೇ. ನಿರ್ದೇಶಕರು ಹೇಳಿದಂತೆ ಅಭಿನಯಿಸಿದ್ದೇನೆ ಎಂದರು. ತಾರಗಣದಲ್ಲಿ ತಬಲನಾಣಿ,ಸಾಧುಕೋಕಿಲ, ಮಂಡ್ಯಾರಮೇಶ್, ಬಿರಾದಾರ್ ಸೇರಿದಂತೆ ಎಂಬತ್ತೆರಡು ಹಾಸ್ಯ ಕಲಾವಿದರ ದಂಡೇ ಚಿತ್ರದಲ್ಲಿದೆ. ಯೋಗರಾಜಭಟ್, ಗೌಸ್‌ಫೀರ್, ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯದ ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಜೀವನ್‌ಗೌಡ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನವಿದೆ.